ದಿನಾಂಕ 29-03-2025ನೇ ಶನಿವಾರ ಸಚ್ಚೇರಿ- ಗಾಂದಡ್ಪು ಶ್ರೀ ಮಹಾದೇವಿ ಸನ್ನಿಧಿಯಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಪೂರ್ವಕ ಶ್ರೀ ಅಣ್ಣಪ್ಪ ಸ್ವಾಮಿಯ ವರ್ಷಾವಧಿ ನೇಮೋತ್ಸವ ಮತ್ತು ವರ್ಷಾವಧಿ ಜಾತ್ರೆ ಜರಗಲಿರುವುದು.
ಬೆಳಿಗ್ಗೆ ಪುಣ್ಯಾಹ ಪುರಸ್ಸರ ನವಕಪ್ರಧಾನ ಕಲಶ, ಪ್ರಧಾನ ಹೋಮ, ಪಂಚಾಮೃತ ಪುರಸ್ಪರ ಕಲಶಾಭಿಷೇಕ. ಮಧ್ಯಾಹ್ನ ಗಂಟೆ 11-30 ಕ್ಕೆ ಶ್ರೀ ದೇವಿಯ ದರ್ಶನ, ಗಂಟೆ 1-00ರಿಂದ ‘ಅನ್ನಸಂತರ್ಪಣೆ’ ಸಾಯಂ, ಗಂಟೆ 7-00ಕ್ಕೆ ಅಲಂಕಾರ ಪೂಜೆ, ದುರ್ಗಾ ನಮಸ್ಕಾರ ಪೂಜೆ, ಹೂವಿನ ಪೂಜೆ, ರಂಗ ಪೂಜೆ, ತದನಂತರ ಭಂಡಾರ ಇಳಿದು’ನೇಮೋತ್ಸವ’ ನಡೆಯಲಿದೆ.
ತಾ. 29-03-2025ನೇ ಶನಿವಾರ ಮಧ್ಯಾಹ್ನ ಗಂಟೆ 3-00ರಿಂದ 6-00ರ ತನಕ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಮಂಡಳಿ, ಸಚ್ಚೇರಿಪೇಟೆ ಇವರಿಂದ ಯಕ್ಷಗಾನ ತಾಳಮದ್ದಳೆ ಜರಗಲಿರುವುದು.
ರಾತ್ರಿ ಗಂಟೆ 8.00ಕ್ಕೆ ಶರತ್ ಶೆಟ್ಟಿ ನೇತೃತ್ವದ ಕಿನ್ನಿಗೋಳಿ ವಿಜಯ ಕಲಾವಿದರಿಂದ ಹರೀಶ್ ಪಡುಬಿದ್ರಿಯವರ ಜಗದೀಶ್ ಶೆಟ್ಟಿ ಕೆಂಚನಕೆರೆ ನಿರ್ದೇಶನದಲ್ಲಿ ತೊಟ್ಟಿಲ್ ಅಪ್ಪೆನ ಮೋಕೆದ ಮಟ್ಟೆಲ್ ಹಾಸ್ಯಭರಿತ ಸಾಂಸಾರಿಕ ತುಳು ನಾಟಕ ನಡೆಯಲಿದೆ.