ಕಾಪು : ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವಾರ್ಷಿಕ ನಡಾವಳಿ ಎ. 13ರಿಂದ 20ರ ವರೆಗೆ ನಡೆಯಲಿದ್ದು ಎ. 18ರಂದು ಶ್ರೀಮನ್ಮಹಾರಥೋತ್ಸವ ನಡೆಯಲಿದೆ.
ಎ. 13ರಂದು ಬೆಳಗ್ಗೆ 11.30ಕ್ಕೆ ಪೂರ್ಣಗ್ರಹಶಾಂತಿ ಪೂರ್ವಕ ಧ್ವಜಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಆಯನೋತ್ಸವ, ಎ. 14ರಂದು ತಪ್ಪಂಗಾಯ ಬಲಿ, ತಂತ್ರಿಗಳ ಕಟ್ಟೆ ಪೂಜೆ, ಎ. 15ರಂದು ದಕ್ಷಿಣ ಯಾತ್ರೆ, ವೇದಿಕಾ ಪೂಜೆ, ಎ. 16ರಂದು ಭೂತಬಲಿ ಸಮಾರಾಧನೆ, ಮೃತ್ಯುಂಜಯ ಯಾಗ ನಡೆಯಲಿದೆ. ಎ. 18ರಂದು ಬೆಳಗ್ಗೆ 11ಕ್ಕೆ ರಥಾರೋಹಣ, ಮಹಾ ಅನ್ನಸಂತರ್ಪಣೆ, ಸಂಜೆ ಸ್ಯಾಕ್ಸೋಫೋನ್ ಕಛೇರಿ, ರಾತ್ರಿ 8.30ಕ್ಕೆ ಶ್ರೀ ಮನ್ಮಹಾರಥೋತ್ಸವ, ಉತ್ಸವ ಬಲಿ, ಮಹಾರಂಗಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ ನಡೆಯಲಿದೆ.
ಎ. 19ರಂದು ಉದಯಾತ್ ಪೂರ್ವ ಕವಾಟೋದ್ಘಾಟನೆ, ತುಲಾಭಾರ ಸೇವೆ, ಉತ್ಸವ ಬಲಿ, ಸಂಜೆ 6.30ರ ಬಳಿಕ ಅವಭ್ರಥ, ಗಂಧ ಪೂಜೆ, ಧ್ವಜಾವರೋಹಣ, ಮಹಾಮಂತ್ರಾಕ್ಷತೆ ಹಾಗೂ ಎ. 20ರಂದು ಮಹಾಸಂಪ್ರೋಕ್ಷಣೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ, ತಂತ್ರಿಗಳು, ಅರ್ಚಕರು ಮತ್ತು ಗ್ರಾಮ ಸೀಮೆಯ ಪ್ರಕಟನೆ ತಿಳಿಸಿದೆ.