Monday, February 10, 2025
Homeಕಾರ್ಕಳಪರ್ಯಂತ ಶ್ರೀ ಮಹಾವಿಷ್ಣುಮೂರ್ತಿ ಮತ್ತು ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ವಾರ್ಷಿಕ ಗೌಣೋತ್ಸವ

ಪರ್ಯಂತ ಶ್ರೀ ಮಹಾವಿಷ್ಣುಮೂರ್ತಿ ಮತ್ತು ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ವಾರ್ಷಿಕ ಗೌಣೋತ್ಸವ

ಶ್ರೀ ಮಹಾವಿಷ್ಣುಮೂರ್ತಿ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನ ಚಿಕ್ಕಲ್‌ಬೆಟ್ಟು, ಹಿರ್ಗಾನ -576117, ಕಾರ್ಕಳ ತಾಲೂಕು ಸ್ವಸ್ತಿ! ಶ್ರೀ ಕ್ರೋಧಿ ನಾಮ ಸಂ|ರದ ಮಕರ ಮಾಸ ದಿನ 29 ಸಲುವ ಮಾಘ ಶುದ್ಧ 15 ಯು

ಪ್ರಿಯ ಭಕ್ತಾಭಿಮಾನಿಗಳೇ.

ದಿನಾಂಕ 12-02-2025ನೇ ಬುಧವಾರದಿಂದ ಮೊದಲ್ಗೊಂಡು ದಿನಾಂಕ : 16-02-2025ನೇ ಆದಿತ್ಯವಾರ ಪರ್ಯಂತ ಶ್ರೀ ಮಹಾವಿಷ್ಣುಮೂರ್ತಿ ಮತ್ತು ಶ್ರೀ ಮಹಾಗಣಪತಿ ದೇವರ ಸನ್ನಿಧಿಯಲ್ಲಿ ವಾರ್ಷಿಕ ಗೌಣೋತ್ಸವವು ವೇದಮೂರ್ತಿ ಜಾರ್ಕಳ ಶ್ರೀ ಪ್ರಸಾದ ತಂತ್ರಿ ಮತ್ತು ಅರ್ಚಕರಾದ ಶ್ರೀ ಗಣೇಶ್ ಭಟ್‌ರವರ ನೇತೃತ್ವದಲ್ಲಿ ಜರಗಲಿರುವುದು.

ದಿನಾಂಕ 12-02-2025ನೇ ಬುಧವಾರ ಬೆಳಗ್ಗೆ ದೇವತಾ ಪ್ರಾರ್ಥನೆ, ಪಂಚಗವ್ಯ ಪುಣ್ಯಾಹ, ಶ್ರೀ ದೇವರಿಗೆ ನವಕ ಪ್ರಧಾನ ಅಭಿಷೇಕ, ಗರುಡ ಅಧಿವಾಸ, ಧ್ವಜಾರೋಹಣ, ಮಹಾಪೂಜೆ, ಬಲಿ, ಪಲ್ಲಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ.

ರಾತ್ರಿ ಭಜನಾ ಕಾರ್ಯಕ್ರಮ, ದೀಪಾರಾಧನೆ ಪೂಜೆ, ಉತ್ಸವ ಬಲಿ, ವಾಲಗ ಮಂಟಪ ಪೂಜೆ, ಅಷ್ಟವಾದನ ಸೇವೆ, ಸಂಜೆ 6.00ರಿಂದ 8.00ರ ವರೆಗೆ : ಭಜನಾ ಸಂಧ್ಯಾ ಕಾರ್ಯಕ್ರಮ ರಾತ್ರಿ ಬೈಗಿನ ಬಲಿ, ರಾತ್ರಿ ಪೂಜೆ, ಏಕಾಂತ ಸೇವೆ

ದಿನಾಂಕ 13-02-2025ನೇ ಗುರುವಾರ ಬೆಳಿಗ್ಗೆ ಪಂಚಗವ್ಯ ಪುಣ್ಯಾಹ, ನವಕ ಕಲಶಾಭಿಷೇಕ, ಮಹಾಪೂಜೆ, ಶ್ರೀ ನಾಗದೇವರ ಸನ್ನಿಧಿಯಲ್ಲಿ ನವಕಪ್ರಧಾನ ಕಲಶಾಭಿಷೇಕ, ಆಶ್ಲೇಷಾಬಲಿ, ಮಹಾಪೂಜೆ, ಅನ್ನಸಂತರ್ಪಣೆ

ದಿನಾಂಕ 14-02-2025ನೇ ಶುಕ್ರವಾರ ಬೆಳಿಗ್ಗೆ ಶ್ರೀ ದೇವರಿಗೆ ಪಂಚಗವ್ಯ, ಪುಣ್ಯಾಹ, ನವಕ ಕಲಶಾಭಿಷೇಕ.ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ರಾತ್ರಿ ಸವಾರಿ ಐಬಿ ಮತ್ತು ಶ್ರೀ ಭೂರ್ ಐಲಿ, ಕವಾಟ ಪೂರಣ, ಸಾರ್ವತ್ರಿಕರಿಂದ ವಂದನಾರ್ಪಣೆ ಇತ್ಯಾದಿ

ದಿನಾಂಕ 15-02-2025ನೇ ಶನಿವಾರ ಬೆಳಗ್ಗೆ ಉದಯ ಕಾಲದಲ್ಲಿ ಕವಾಟೋದ್ಘಾಟನೆ, ದೇವರಿಗೆ ದಶವಿಧಿ ಸ್ನಾನ, ಪಂಚಾಮೃತ ಪರಸ್ಪರ ಕಲಶಾಭಿಷೇಕ, ಮಂಗಳಾರತಿ, ಅಷ್ಟವಾದನ ಸೇವೆ,ಪರಿವಾರ ಪೂಜೆ, ತುಲಭಾರಾಧಿ ಹರಕೆ ಸೇವೆ, ಶ್ರೀ ಮಹಾಗಣಪತಿ ದೇವರಿಗೆ 108 ತೆಂಗಿನ ಕ್ಯಾ ಗಣಯಾಗ, ಅಪ್ಪದ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ

ಸಂಜೆ ಗಂಟೆ 5-00ಕ್ಕೆ : ಶ್ರೀ ಕೊಡಮಣಿತ್ತಾಯ ಸ್ಥಾನದಿಂದ ಭಂಡಾರ ಇಳಿಯುವುದು, ಸಂಜೆ ಗಂಟೆ 7-00ಕ್ಕೆ : ಶ್ರೀ ದೇವರಿಗೆ ಪ್ರಸನ್ನಪೂಜೆ ರಾತ್ರಿ ಗಂಟೆ 9-00ಕ್ಕೆ : ರಾಜಂದೈವ, ಕೊಡಮಣಿತ್ತಾಯ, ಕುಕ್ಕಿನಂತಾಯ, ರಕೇಶ್ವರಿ, ಟೈದರ್ಕಳ ನೇಮೋತ್ಸವ

ರಾತ್ರಿ ಗಂಟೆ 3-00ರಿಂದ : ಐಲಿ, ಓಕುಳಿ, ಅವಧೃತ ಸ್ನಾನ, ತದನಂತರ ಧ್ವಜಾವರೋಹಣ, ದಿನಾಂಕ 16-02-2025ನೇ ಆದಿತ್ಯವಾರ ಸಂಪ್ರೋಕ್ಷಣೆ, ಮಹಾಪೂಜೆ, ಮಹಾಮಂತ್ರಾಕ್ಷತೆ, ಪ್ರಸಾದ ವಿತರಣೆ

RELATED ARTICLES
- Advertisment -
Google search engine

Most Popular