Sunday, July 14, 2024
Homeಹೆಬ್ರಿಹೆಬ್ರಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಹೆಬ್ರಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಸರ್ಕಾರಿ ನೌಕರರ ಹಿತಕಾಯಲು ಸದಾ ಕಾಲ ಸಿದ್ಧ : ದಿನಕರ ಶೆಟ್ಟಿ

ಹೆಬ್ರಿ : ಸರ್ಕಾರ ಮತ್ತು ಜನಸಮುದಾಯ ಹಿತಕಾಯುವ ಸರ್ಕಾರಿ ನೌಕರರು ಮಾಡುವ ಸೇವೆಗೆ ಸರಿಯಾದ ವೇತನ ನೀಡುವುದು ಸರ್ಕಾರದ ಧರ್ಮ. ಅದಕ್ಕಾಗಿ ನಾವು ಹೋರಾಡುವ ದಿನ ಬರಬಾರದು. ವೇತನ ಆಯೋಗದ ಶಿಪಾರಸ್ಸಿನಂತೆ ವೇತನ ನೀಡುತ್ತೇವೆ ಎಂದು ಸರ್ಕಾರ ಒಪ್ಪಿದೆ. ಆದರೆ ಈ ತನಕ ನೀಡಿಲ್ಲ. ೨೭ ಶೇಕಡ ವೇತನ ನೀಡುವುದಾಗಿ ಸರ್ಕಾರ ಹೇಳಿದೆ. ಕೊನೆಗೆ ಅದನ್ನು ಆದರೂ ನೀಡಲಿ, ಸರ್ಕಾರಿ ನೌಕರರ ವೇತನಕ್ಕೆ ಕಾಯ್ದಿರಿಸಿದ ೧೪೫೦೦ ಸಾವಿರ ಕೋಟಿಯನ್ನು ಬಿಡುಗಡೆ ಮಾಡಿದರೆ ಎಲ್ಲಾ ಸಮಸ್ಯೆಗೆ ಬಗೆಹರಿಯುತ್ತದೆ. ಏನಾದರೂ ನಾವು ನೌಕರರ ಹಿತ ಕಾಯಲು ಸದಾಕಾಲವೂ ಸಿದ್ಧ, ನಮ್ಮೊಂದಿಗೆ ಕೈ ಜೋಡಿಸಿ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಅಂಪಾರು ದಿನಕರ ಶೆಟ್ಟಿ ಹೇಳಿದರು.
ಅವರು ಹೆಬ್ರಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೆಬ್ರಿ ತಾಲ್ಲೂಕು ಶಾಖೆಯ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸರ್ಕಾರ ಮತ್ತು ನೌಕರರ ನಡುವೆ ಸಮನ್ವಯವನ್ನು ಕಾಪಾಡುವ ಕಾರ್ಯವನ್ನು ಮಾಡುತ್ತದೆ ಎಂದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೆಬ್ರಿ ತಾಲ್ಲೂಕು ಘಟಕದ ಅಧ್ಯಕ್ಷ ಹರೀಶ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಲು ಮನವಿ ಮಾಡಿದರು.
ಹೆಬ್ರಿ ತಾಲ್ಲೂಕಿನ ವಿವಿಧ ಇಲಾಖೆಯಲ್ಲಿ 2023 ಎಪ್ರಿಲ್ ನಿಂದ 2024 ಮಾರ್ಚ್ ಅವಧಿಯಲ್ಲಿ ಸೇವಾ ನಿವೃತ್ತರಾದ ರಾಜ್ಯ ಸರ್ಕಾರಿ ನೌಕರರಿಗೆ ಸನ್ಮಾನ, 2023 ನೇ ಸಾಲಿನಲ್ಲಿ ರಾಷ್ಟ್ರ ಮಟ್ಟದ ಕ್ರೀಡೆ ಅಥವಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ರಾಜ್ಯ ಸರ್ಕಾರಿ ನೌಕರರಿಗೆ ಸನ್ಮಾನ, 2023 ನೇ ಸಾಲಿನಲ್ಲಿ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಕ್ರೀಡೆ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಆಯ್ಕೆಯಾದ ರಾಜ್ಯ ಸರ್ಕಾರಿ ನೌಕರರಿಗೆ ಗೌರವಾರ್ಪಣೆ, 2024 ರ ಎಸ್‌ಎಸ್‌ಎಲ್‌ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ‌ 90℅ ಕ್ಕಿಂತ ಅಧಿಕ ಅಂಕಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಅಭಿನಂದನೆ ಸಲ್ಲಿಕೆ ನಡೆಯಿತು. ಟೀಚರ್ಸ್‌ ಕೋಅಪರೇಟಿವ್‌ ಬ್ಯಾಂಕಿನ ವತಿಯಿಂದ ಸಂಘಕ್ಕೆ ನೀಡಲಾಯಿತು.
2023-24 ನೇ ಸಾಲಿನ ತಾಲ್ಲೂಕು ಶಾಖೆಯ ಆಯವ್ಯಯ ಮಂಡನೆ, ವಾರ್ಷಿಕ ಕಾರ್ಯ ಚಟುವಟಿಕೆಗಳ ಮಂಡನೆ ನಡೆಯಿತು.
ಟೀಚರ್ಸ್‌ ಕೋಅಪರೇಟಿವ್‌ ಬ್ಯಾಂಕಿನ ಅಧ್ಯಕ್ಷ ಕಿಶನ್‌ ರಾಜ್ ಶೆಟ್ಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಕಳ ತಾಲ್ಲೂಕು ಶಾಖೆಯ ಬಾಲಕೃಷ್ಣ ಎನ್, ಬ್ರಹ್ಮಾವರ ಘಟಕದ ಅಧ್ಯಕ್ಷ ರವಿ ಎಸ್‌ ಪೂಜಾರಿ, ರಾಜ್ಯ ಪರಿಷತ್‌ ಸದಸ್ಯ ಚಿದಾನಂದ ಸ್ವಾಮಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ನಾಗೇಶ ಆಚಾರ್‌, ಶಿಕ್ಷಕರ ಸಂಘದ ಅಧ್ಯಕ್ಷ ರಮಾನಂದ ಶೆಟ್ಟಿ, ಹೆಬ್ರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀನಿವಾಸ ಭಂಡಾರಿ ಮುದ್ದೂರು, ವಿವಿಧ ಪ್ರಮುಖರಾದ ಮಹೇಶ ನಾಯ್ಕ್‌, ಆನಂದ ಪುತ್ರನ್‌, ದಯಾನಂದ್‌, ಹೆಬ್ರಿ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಪೂಜಾರಿ, ಕೋಶಾಧಿಕಾರಿ ಸದಾಶಿವ ಸೇರ್ವೇಗಾರ್‌, ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಾತಿಬೆಟ್ಟು ಪ್ರಕಾಶ್‌ ಪೂಜಾರಿ ನಿರೂಪಿಸಿ ಸ್ವಾಗತಿಸಿದರು. ಸದಾಶಿವ ಸೇರ್ವೆಗಾರ್‌ ಲೆಕ್ಕಪತ್ರ ಮಂಡಿಸಿದರು.

RELATED ARTICLES
- Advertisment -
Google search engine

Most Popular