Thursday, July 25, 2024
Homeತುಳು ಭಾಷೆಜೈ ತುಳುನಾಡ್ (ರಿ.) ಬೆಂಗಳೂರು ಘಟಕದ ವಾರ್ಷಿಕ ಮಹಾಸಭೆ

ಜೈ ತುಳುನಾಡ್ (ರಿ.) ಬೆಂಗಳೂರು ಘಟಕದ ವಾರ್ಷಿಕ ಮಹಾಸಭೆ

ಅಧ್ಯಕ್ಷರಾಗಿ ಧನಂಜಯ ಆಚಾರ್ಯ ಆಯ್ಕೆ

ಜೈ ತುಳುನಾಡ್ (ರಿ.) ಬೆಂಗಳೂರು ಘಟಕದ ವಾರ್ಷಿಕ ಮಹಾಸಭೆಯು ದಿನಾಂಕ 17/03/2024, ಭಾನುವಾರದಂದು ಮೆಜೆಸ್ಟಿಕ್ ನ ಸ್ವಾಗತ್ ಹೋಟೆಲಿನಲ್ಲಿ ನಡೆಯಿತು. ಸಭೆಯಲ್ಲಿ ಪ್ರಸ್ತುತ ಸಮಿತಿ ಕಳೆದ ವರ್ಷ ಮಾಡಿದ ತುಳು ಪರವಾದ ಕಾರ್ಯಕ್ರಮಗಳ ಬಗ್ಗೆ ವರದಿ ವಾಚನ ಸಲ್ಲಿಸಲಾಯಿತು. ಹಾಗೆಯೇ ಸಂಸ್ಥಾಪಕ ಸಮಿತಿಯ ಮಾರ್ಗದರ್ಶನದಲ್ಲಿ, ಜೈ ತುಳುನಾಡ್ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ವಿಶು ಶ್ರೀಕೇರ ಅವರ ಉಪಸ್ಥಿತಿಯಲ್ಲಿ ಹೊಸ ಸಮಿತಿ ರಚನೆಯಾಯಿತು. ಧನಂಜಯ ಆಚಾರ್ಯರವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ನಿಧೀಶ್ ಶೆಟ್ಟಿ, ಕಾರ್ಯದರ್ಶಿಯಾಗಿ ಅಕ್ಷಯ್ ಆಚಾರ್ಯ, ಜೊತೆ ಕಾರ್ಯದರ್ಶಿಗಳಾಗಿ ಶಕುಂತಳಾ ಹಾಗೂ ವಿನಯ್, ಖಜಾಂಚಿಯಾಗಿ ಅನುದೀಪ್ ಶೆಟ್ಟಿ , ಜೊತೆ ಖಜಾಂಚಿಯಾಗಿ ಪ್ರಗತಿ ಎಸ್., ಸಂಘಟನಾ ಕಾರ್ಯದರ್ಶಿಗಳಾಗಿ ಶರತ್ ಕೊಡವೂರು, ಕಾಶಿನಾಥ್ ಮತ್ತು ಪ್ರಶಾಂತ್ ರವರು ಆಯ್ಕೆಯಾದರು.

ಅಧ್ಯಕ್ಷರಾಗಿ ಆಯ್ಕೆಯಾದ, ಧನಂಜಯ ಆಚಾರ್ಯ ರವರು ಮಾತನಾಡುತ್ತಾ ತುಳು ಭಾಷೆಯ ಬೆಳವಣಿಗೆ ಹಾಗೂ ತುಳು ಭಾಷೆಯ ಉಳಿವಿಗೆ ಶ್ರಮಿಸುವೆ ಮತ್ತು ತುಳುಪರ ಕೆಲಸ ಮಾಡುವವರ ಜೊತೆ ನಾವು ಬೆನ್ನೆಲುಬಾಗಿ ನಿಲ್ಲುತ್ತೇವೆ. ಆ ಸಲುವಾಗಿ ಸರ್ವ ತುಳುವರ ಸಹಕಾರವನ್ನು ಕೋರುತ್ತೇವೆ ಎಂದು
ಹೇಳಿದರು. ವಿಶು ಶ್ರೀಕೇರ ಅವರು ಮಾತನಾಡುತ್ತಾ ಜೈ ತುಳುನಾಡು (ರಿ.) ಸಂಘಟನೆಯ ಸಾಧನೆಯ ಬಗ್ಗೆ, ಸಾಮರ್ಥ್ಯದ ಬಗ್ಗೆ ತಿಳಿಸುತ್ತಾ ಹೊಸ ಘಟಕದ ಅವಧಿಯಲ್ಲಿ ಸಂಘಟನೆ ಇನ್ನಷ್ಟು ಬಲಿಷ್ಠವಾಗಲಿ ಎಂದು ಶುಭ ಹಾರೈಸಿದರು. ಘಟಕದ ಮಾಜಿ ಅಧ್ಯಕ್ಷರಾದ ವಿಶಾಲ್ ಕೊಡಿಯಾಲ್ ಅವರು ತಮ್ಮ ಅವಧಿಯಲ್ಲಿ ಘಟಕದ ವತಿಯಿಂದಾಗಿರುವ ಸಾಧನೆಗಳನ್ನು ವಿವರಿಸಿದರು ಹಾಗೂ ಅವಕಾಶ ಕಲ್ಪಿಸಿದ ಸಂಘಟನೆಗೆ ಕೃತಜ್ಞತೆಯನ್ನು ಸಲ್ಲಿಸಿದರು. ನಿಧೀಶ್ ಶೆಟ್ಟಿ ಯವರು ವರದಿ ವಾಚಿಸಿದರು. ಧನಂಜಯ ರವರು ಲೆಕ್ಕಪತ್ರ ವಾಚಿಸಿದರು. ಸಭೆಯಲ್ಲಿ ಸ್ಥಾಪಕ ಸಮಿತಿಯ ಸದಸ್ಯರು , ಕೇಂದ್ರ ಸಮಿತಿಯ ಸದಸ್ಯರು ಹಾಗೂ ಘಟಕದ ಸದಸ್ಯರು ಹಾಜರಿದ್ದರು.

RELATED ARTICLES
- Advertisment -
Google search engine

Most Popular