Monday, February 10, 2025
Homeಧಾರ್ಮಿಕಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಪೆರಿಯಡ್ಕ: ಚಿ ಬಿದ್ರೆ ಪೆರಿಯಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷರಾದ ಕೆ ಡಿ ಜಾರ್ಜ್ ರವರ ಅಧ್ಯಕ್ಷತೆಯಲ್ಲಿ ಆ 30 ರಂದು ನಡೆಯಿತು.ಸಂಘದ ಅಭಿವೃದಿಗೆ ಶ್ರಮಿಸಿದ ಹಿರಿಯ ಸದಸ್ಯ ಶ್ರೀ ಶಾಂತಪ್ಪ ಗೌಡ ಮುದ್ಧಿಗೆ ಇವರನ್ನು ಸನ್ಮಾನಿಸಲಾಯಿತು.ಹಾಲು ಒಕ್ಕೂಟದ ಅಧಿಕಾರಿಗಳಾದ ಕು. ಮೋಹಿನಿ, ಡಾ. ಗಣಪತಿ ಹಾಲಿನ ಗುಣಮಟ್ಟದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಸೋಮನಾಥ ಗೌಡ ಮಾಕಳ, ರಾಘವ ಗೌಡ ಕುಡುಮಡ್ಕ,ಕಾರ್ಯದರ್ಶಿ ಶ್ರುತಿ ಪ್ರಶಾಂತ್, ನಳಿನಿ ಹಾಗೂ ಸಂಘದ ನಿರ್ದೇಶಕರು, ಸದಸ್ಯರು ಪಾಲ್ಗೊoಡಿದ್ದರು.

RELATED ARTICLES
- Advertisment -
Google search engine

Most Popular