ತೌಳವ ಇಂದ್ರ ಸಮಾಜ(ರಿ)* ಇದರ ಮಹಾಸಭೆ ದಿನಾಂಕ 3/11/2024ರಂದು ಮೂಡಬಿದ್ರೆಯ ಶ್ರೀ ಧವಲಾ ಕಾಲೇಜ್ ನ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.
“ತುಳು ಇಂದ್ರರ ಜೀವನ ಶೈಲಿ, ಸಾಮಾಜಿಕ ಪರಂಪರೆ,ಪೌರೋಹಿತ್ಯದ ಮಾದರಿಗಳು ವಿಭಿನ್ನವಾಗಿ ಯೂ ಶಾಸ್ತ್ರೋಕ್ತವೂ ಆಗಿದ್ದು ಸರ್ವ ಜನಾಧರಣೆಗೆ ಪಾತ್ರವಾಗಿದೆ, ಈ ಉನ್ನತ ಪರಂಪರೆಯನ್ನು ಕಾಪಾಡುವುದು ಮತ್ತು ಪರಸ್ಪರ ಬಂಧುತ್ವ ಸಂವರ್ಧನೆ ಈ ಸಂಘಟನೆಯ ಉದ್ದೇಶ” ಎಂದು ಪ್ರಾಸ್ತಾವಿಕ ಮಾತುಗಳನ್ನು ಆಡುತ್ತಾ ಉಪಾಧ್ಯಕ್ಷರಾದ ಎಂ.ಅಕ್ಷಯ ಕುಮಾರ್ ರವರು ಅತಿಥಿಗಳನ್ನೂ, ಸನ್ಮಾನಗೊಳ್ಳಲಿರುವ ಮಹನೀಯರನ್ನೂ ಪದಾಧಿಕಾರಿಗಳನ್ನೂ ಸ್ವಾಗತಿಸಿದರು.
ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕರಾಗಿರುವ ಮೂಡಬಿದ್ರೆ ಜ್ಞಾನಚಂದ್ರಇಂದ್ರರು ವಹಿಸಿಕೊಂಡಿದ್ದರು.
ಮಾತಾಡುತ್ತ “ಹಿಂದೆ ಇಂದ್ರರ ಕುಲಕಸುಬು ಪೌರೋಹಿತ್ಯ ಆದರೂ ಇಂದು ಜೀವನ ನಿರ್ವಹಣೆಗಾಗಿ ಬೇರೆ ಬೇರೆ ಉದ್ಯೋಗ,ಬುಸ್ಸಿನೆಸ್ ಗಳನ್ನು ನೆಚ್ಚಿಕೊಂಡಿದ್ದಾರೆ ಪೌರೋಹಿತ್ಯ ಈಗ ಮುಖ್ಯ ಕಸುಬಾಗಿ ಉಳಿದಿಲ್ಲಾ ಎಂದರಲ್ಲದೆ, ಸದಸ್ಯರೆಲ್ಲರೂ ಅಂಗಸಂಸ್ಥೆಯಾದ ಸದ್ಧರ್ಮ ಸೌಹಾರ್ದ ಸಹಕಾರಿ ಸಂಸ್ಥೆ ಲಾಭದಲ್ಲಿ ನಡೆಯುತ್ತಿದ್ದು, ಆ ಸಹಕಾರಿಯನ್ನು ಇನ್ನೂ ಚೆನ್ನಾಗಿ ಬೆಳೆಸಬೇಕಾಗಿದೆ”ಎಂದರು.
ನಂತರ ನಡೆದ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ವಾನ್ ಡಾ I ಎಸ್.ಪಿ.ವಿಧ್ಯಾಕುಮಾರ್ , ವಿಜ್ಞಾನಿ ಡಾI ಸುಕೇಶ್ ಕುಮಾರ್ ಬಜಿರೆ, ಹಾಗೂ ಪ್ರಾಂಶುಪಾಲೆ ಶ್ರೀಮತಿ ಆಶಾಲತಾ ದಾಂಡೇಲಿ ಯವರನ್ನೂ ಹಿರಿಯ ಪುರೋಹಿತರಾದ ಶ್ರೀ ಚಂದ್ರಶೇಖರ ಇಂದ್ರ ಬೋಳ ಬಸದಿ,ಮತ್ತು ಶ್ರೀ ದೇವಕುಮಾರ್ ಇಂದ್ರ ಮುಳಿಕಾರು ಬಸದಿ ಇವರುಗಳನ್ನು ಶಾಲು,ಹಾರ,ಫಲ ಕಾಣಿಕೆ,ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಹತ್ತನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ.ಯ ಪ್ರತಿಭಾವಂತ ಸಮಾಜದ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.
ಕಾರ್ಯದರ್ಶಿ ಬಿ.ಅಭಯ ಕುಮಾರ್ ಇಂದ್ರ ವಾರ್ಷಿಕ ವರದಿ ಮಂಡಿಸಿದರು.ಕೋಶಾಧಿಕಾರಿ ವಿಜಯಕುಮಾರಿ ಯವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಪ್ರತಿಷ್ಠಾ ಪುರೋಹಿತರಾದ ಪದ್ಮಪ್ರಭ ಇಂದ್ರ,ನಾಗೇಂದ್ರ ಇಂದ್ರ,ಅಜಿತಕುಮಾರ್ ಇಂದ್ರ, ಅರುಣಕುಮಾರ್ ಇಂದ್ರ, ರವರನ್ನು ಗೌರವಿಸಲಾಯಿತು.
ಶ್ರೀಮತಿ ದಿವ್ಯಾ ವೀರೇಂದ್ರ ರವರು ಪ್ರಸ್ತುತ ವರ್ಷದಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಅರ್ಪಣಾ ಕಾರ್ಯಕ್ರಮ ನೆರವೇರಿಸಿದರು. ನಿರ್ದೇಶಕ ಶೀತಲ್ ಕುಮಾರ್ ಸರಕಾರದಿಂದ ಅಲ್ಪಸಂಖ್ಯಾತರಿಗೆ ಕೊಡಮಾಡಿದ ಸೌಲಭ್ಯಗಳ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಇಂದ್ರ ಸಮಾಜದ ಸದಸ್ಯರ ವಿಳಾಸದ ತಿದ್ದುಪಡಿ ಮಾಡಿದ ಡೈರೆಕ್ಟರಿ ಪ್ರತಿಯನ್ನು ಬಿಡುಗಡೆ ಗೊಳಿಸಲಾಯಿತು.
ಶ್ರೀಮತಿ ಆರತಿ ವಿರಾಜ್ ಪ್ರಾರ್ಥನೆ ಮಾಡಿದರು,ನಿರ್ದೇಶಕ ಹರಿಶ್ಚಂದ್ರ ಜೈನ್ ಸನ್ಮಾನಕಾರ್ಯಕ್ರಮದ ನಿರೂಪಣೆ ಮಾಡಿದರು.
ಸದ್ಧರ್ಮ ಸೌಹಾರ್ಧ ಸಹಕಾರಿ ಅಧ್ಯಕ್ಷರಾದ ಪ್ರವೀಣ ಕುಮಾರ್ ಉಜಿರೆ,ನಿರ್ದೇಶಕರಾದ ವೃಷಭ ಕುಮಾರ್ ಇಂದ್ರ,ಅರ್ಕ ಕೀರ್ತಿ ಇಂದ್ರ, ಯುವತೌಳವ ಇಂದ್ರ ಸಮಾಜದ ಅಧ್ಯಕ್ಷರಾದ ಶ್ವೇತ ಪ್ರವೀಣ್ ಹಾಗೂ ಕಾರ್ಯದರ್ಶಿ ಅನಿತ್ ಕುಮಾರ್ ಬಿ. ಮತ್ತು
ತೌಳವ ಇಂದ್ರ ಸಮಾಜದ ಎಲ್ಲಾ ನಿರ್ದೇಶಕರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಿರ್ದೇಶಕ ಪ್ರಮೋದ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಜೊತೆ ಕಾರ್ಯದರ್ಶಿ ಸುವಿಧಿ ಇಂದ್ರರು ಧನ್ಯವಾದ ಅರ್ಪಿಸಿದರು.ಅರುಣಾ ಇಂದ್ರರ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.