ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಪೂಜಾರಿಪಾಲು ದೈವಕ್ಷೇತ್ರದಲ್ಲಿ ಎಪ್ರಿಲ್ 19ರ ಶುಕ್ರವಾರ ಗ್ರಾಮದೈವ ಶ್ರೀ ರಾಜನ್ ದೈವ ಕಲ್ಕುಡ , ಕಲ್ಲುರ್ಟಿ,ಮತ್ತು ಪಂಜುರ್ಲಿ ,ಗುಳಿಗ,ಹಾಗೂ ಶ್ರೀ ಕೊರಗಜ್ಜ ದೈವಗಳ ವಾರ್ಷಿಕ ನೇಮೊತ್ಸವ ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಭಕ್ತರು ಹಾಗೂ ಊರಿನ ಗಣ್ಯರ ಸಮ್ಮುಖದಲ್ಲಿ ಜರುಗಿತು.
ಗ್ರಾಮದ ಭಕ್ತರು ಕಾರಣಿಕ ದೈವಗಳ ದರುಶನ ಪಡೆದು ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಅಲ್ಲದೆ ದೈವದಲ್ಲಿ ತನ್ನ ಅಭೀಷ್ಟ ಪೂರೈಕೆಗಾಗಿ ಹರಕೆಗಳನ್ನು ಮಾಡಿದರು .ಇಷ್ಟಾರ್ಥಗಳನ್ನು ಪೂರೈಸಿದ ದೈವಕ್ಕೆ ಹರಕೆಗಳನ್ನು ತೀರಿಸಿದರು. ದೈವ ನಂಬಿಕೆಗೆ ಪಾತ್ರರಾದರು.