ಬಾವದ ಕರೆ ಶ್ರೀ ಚಾಮುಂಡಿ ದೈವಸ್ಥಾನ ಸಾಣೂರು ಇಲ್ಲಿನ ವಾರ್ಷಿಕ ನೇಮೋತ್ಸವವು ದಿನಾಂಕ: 15-12-2024ನೇ ಆದಿತ್ಯವಾರದಂದು 9.00 ಗಂಟೆಗೆ ದೇಂದಬೆಟ್ಟು ವೇದಮೂರ್ತಿ ಶ್ರೀ ಶ್ರೀ ರಾಮ್ ಭಟ್ ಇವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಸಾಯಂಕಾಲ ಗಂಟೆ 5.00ರಿಂದ 7.00ರ ತನಕ ಶ್ರೀ ಸತ್ಯನಾರಾಯಣ ಪೂಜೆ. ರಾತ್ರಿ 7.00 ಗಂಟೆಗೆ ದೈವದ ಸಾನಿಧ್ಯದಲ್ಲಿ ನವಕ ಪ್ರಧಾನ ಕಲಶಾಭಿಷೇಕ, ಪರ್ವಸೇವೆ. ರಾತ್ರಿ ಗಂಟೆ 7.30 ರಿಂದ 9.00ರತನಕ ಶ್ರೀ ಆಂಜನೇಯ ಭಜನಾ ಮಂಡಳಿ (ರಿ.) ಸಾಣೂರು ಇವರಿಂದ ಕುಣಿತ ಭಜನೆ. ರಾತ್ರಿ ಗಂಟೆ 8.00ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.