26.6 C
Udupi
Tuesday, November 29, 2022
spot_img

ಎಕ್ಕಾರು ಬಂಟರ ಸಂಘದ ವಾರ್ಷಿಕ ಕ್ರೀಡಾಕೂಟ

ಬಜಪೆ:ಎಕ್ಕಾರು ಬಂಟರ ಸಂಘದ ವತಿಯಿಂದ ಸಮಾಜದ ಬಾಂಧವರಿಗೆ ವಾರ್ಷಿಕ ಕ್ರೀಡಾಕೂಟವು ಭಾನುವಾರದಂದು ಎಕ್ಕಾರು ಬಂಟರ ಸಂಘದ ಬಳಿ ನಡೆಯಿತು.ಕ್ರೀಡಾಕೂಟವನ್ನು ಎಕ್ಕಾರು ಶ್ರೀಕೊಡಮಣಿತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ (ತಿಮ್ಮ)ಅವರು ಉದ್ಘಾಟಿಸಿದರು.

ಎಕ್ಕಾರು ಬಂಟರ ಸಂಘ ನಿರಂತರವಾಗಿ ಸಮಾಜ ಬಾಂಧವರಿಗೆ ಕ್ರೀಡಾಕೂಟವನ್ನು ಆಯೋಜಿಸಿಕೊಂಡು ಬರುತ್ತಿದೆ.

ಸುಮಾರು ಐವತ್ತಕ್ಕೂ ಹೆಚ್ಚು ಸ್ಪರ್ಧೆಗಳು ಆಯೋಜನೆಗೊಂಡು 170 ಮಂದಿ ಸ್ಪರ್ಧಾಳುಗಳು ವಿಜೇತರಾದುದು ಸಂಘದ ಕ್ರೀಡಾಸ್ಪೂರ್ತಿಗೆ ಸಾಕ್ಷಿಯಾಗಿದೆ. ಎಕ್ಕಾರು ಬಂಟರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿ ಸಂಘದ ಯೋಜನೆ, ಸಾಧನೆಗಳ ಬಗ್ಗೆ ವಿವರ ನೀಡಿದರು.

ದಿನಾಂಕ 04-12-2022 ಭಾನುವಾರ ಎಕ್ಕಾರು ಬಂಟರ ಸಂಘದ ವಾರ್ಷಿಕ ಕಾರ್ಯಕ್ರಮ ನೆರವೇರಲಿದ್ದು, ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನೂ ಈ ವೇಳೆ ನೆರವೇರಿತು.
ಎಕ್ಕಾರು ಬಂಟರ ಭವನಕ್ಕೆ ಸುಸಜ್ಜಿತವಾದ ವಿಸ್ತೃತ ಪಾರ್ಕಿಂಗ್ ಸ್ಥಳ ಖರೀದಿಸಿದ್ದು ಸಮತಟ್ಟುಗೊಳಿಸಿದ ಮೈದಾನದಲ್ಲೇ ಕ್ರೀಡಾಕೂಟವನ್ನು ಆಯೋಜಿಸಲಾಯಿತು.

ಈ ಸಂದರ್ಭ ಹಿರಿಯ ಕೃಷಿಕ ಸದಾಶಿವ ಶೆಟ್ಟಿ ಮುರ, ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುರೇಖಾ ರೈ, ಪ್ರಮುಖರಾದ ಮೋನಪ್ಪ ಶೆಟ್ಟಿ ಎಕ್ಕಾರು, ಆದರ್ಶ್ ಶೆಟ್ಟಿ ಎಕ್ಕಾರು, ಧನಂಜಯ ರೈ, ಪ್ರದೀಪ್ ಶೆಟ್ಟಿ ದುರ್ಗಾನಗರ, ವಿಕ್ರಮ್ ಮಾಡ, ಸತೀಶ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು. ದಯಾನಂದ ಮಾಡ ಕಾರ್ಯಕ್ರಮ ನಿರೂಪಿಸಿ ಕ್ರೀಡಾಕೂಟವನ್ನು ನಿರ್ವಹಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles