ಉಡುಪಿ: ಬೆಳ್ಳರ್ಪಾಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ನೂತನ ಧ್ವಜಸ್ತಂಭ ಪ್ರತಿಷ್ಠೆ, ರಾಜಗೋಪುರ ಸಮರ್ಪಣಾಪೂರ್ವಕ ಬ್ರಹ್ಮಕಲಶೋತ್ಸವ ಹಾಗೂ ವಾರ್ಷಿಕ ಶ್ರೀ ಮನ್ಮಹಾರಥೋತ್ಸವ ಜ 6ರಿಂದ ಜ 18ರವರೆಗೆ ಜರುಗಲಿದೆ.
ಜ.6ರಂದು ಬೆಳಗ್ಗೆ ತಂತ್ರಗಳ ಹಾಗೂ ಋತ್ವಿಜರ ಸಾಗತ, ಶಿಲ್ಪಿ ಮರ್ಯಾದೆ, ಶಿಲ್ಪ ಪರಿಗ್ರಹ, ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸ್ವಸ್ತಿ ಪುಣ್ಯಹವಚನ, ದೇವನಾಂದಿ ಪಂಚಗವ್ಯಯಾಗ, ಋತ್ವಿಗ್ವರಣ, ಅರಣಿ ಮಥನ ಅಗ್ನಿಜನನ, ಗನಪತಿಯಾಗ, ಭದ್ರದೀಪ ಪ್ರತಿಷ್ಠೆ ನಡೆಯಲಿದೆ. ರಾತ್ರಿ ಸಪ್ತಶುದ್ಧಿ, ವಾಸ್ತುಯಾಗ, ಭೂಶುದ್ಧಿಹೋಮ, ಆಧಿವಾಸ ಪೂಜೆ ನಡೆಯಲಿದೆ.
ಜ. 7ರಂದು ಬೆಳಗ್ಗೆ ಮಹಾ ಬಲಿಪೀಠ ಪ್ರತಿಷ್ಠೆ, ಮಹಾ ಬಲಿಪೀಠ ಕಲಶಾಭಿಷೇಕ, ಪ್ರಸನ್ನಪೂಜೆ ಜರುಗಲಿದ್ದು, ರಾತ್ರಿ ಧ್ವಜಬಿಂಬ ಶುದ್ಧಿ, ಶಯ್ಯಾಪೂಜೆ, ಧ್ವಜಬಿಂಬಾಧಿವಾಸ ಪೂಜೆ ನಡೆಯಲಿದೆ.
ಜ. 8ರಂದು ಬೆಳಗ್ಗೆ ಧ್ವಜದಂಡ ಪ್ರತಿಷ್ಠೆ, ಧ್ವಜ ಬ್ರಹ್ಮಕಲಶಾಭಿಷೇಕ ಮಧ್ಯಾಹ್ನ 12.30ಕ್ಕೆ ಅಬ್ಬಸಂತರ್ಪಣೆ, ರಾತ್ರಿ ಭೂವರಾಹ ಮಂತ್ರ ಹೋಮ ನಡೆಯಲಿದೆ. ಜ. 9ರಂದು ಬೆಳಗ್ಗೆ ದೇವ ಪ್ರಾಯಶ್ಚಿತ್ತ ಹೋಮ, ರಾತ್ರಿ ತಂತ್ರಸಾರೋಕ್ತ ಚಕ್ರಬ್ಜಮಂಡಲ ಪೂಜೆ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.
ಜ. 10ರಂದು ವಿಷ್ಣುಸಹಸ್ರನಾಮ ಪಾರಾಯಣ, ಅರ್ಚನೆ, ಷಢದ್ವನ್ಯಾಸ ಪೂಜೆ ಜರಗಲಿದೆ.
ಜ. 11ರಂದು ಅಶ್ವಮೇಧಸೂಕ್ತ ಯಾಗ, ತತ್ವಯಾಗ, ಕಲಶ ಮಂಡಲ ರಚನೆ, ಪ್ರಸನ್ನ ಪೂಜೆ ರಾತ್ರಿ ಕಲಶಾಧಿವಾಸ, ಅಧಿವಾಸ ಯಾಗ, ಪ್ರಸನ್ನ ಪೂಜೆ ನಡೆಯಲಿದೆ. ಜ 12ರಂದು ಬ್ರಹ್ಮಕಲಶಾಭಿಷೇಕ, ಮಹಾಊಜೆ, ಮಧ್ಯಾಹ್ನ 12.30ಕ್ಕೆ ಮಹಾ ಅನ್ನ ಸಂತರ್ಪಣೆ, ರಾತ್ರಿ ಗಣಪತಿ ಪ್ರಾರ್ಥನೆ, ಅಂಕುರಾರೋಹಣ ನಡೆಯಲಿದೆ. ಜ. 13ರಂದು ಬೆಳಗ್ಗೆ ಧ್ವಜಾರೋಹಣ, ಅಗ್ನಿಜನನ, ಪ್ರಧಾನಹೋಮ, ಮಹಾಪೂಜೆ, ರಾತ್ರಿ ಉತ್ಸವ ಬಲಿ, ಅರಾಧನಾ ಬಲಿ ನಡೆಯಲಿದೆ.
ಜ.14ರಂದು ಬೆಳಗ್ಗೆ ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಉತ್ಸವ ಬಲಿ, ಸವಾರಿ ಬಲಿ, ಶ್ರೀ ಭೂತ ಬಲಿ ನಡೆಯಲಿದೆ. ಜ. 15ರಂದು ಬೆಳಗ್ಗೆ ಪ್ರಧಾನಹೋಮ, ಕಲಶಾಭಿಷೇಕ, ಮಹಾಪೂಜೆ, ದುರ್ಗಾಪೂಜೆ, ರಾಥ್ರಿ ಉತ್ಸಬ ಬಲಿ, ಸವಾರಿ ಬಲಿ, ಭಜಂಗ ಬಲಿ ನಡೆಯಲಿದೆ.
ಜ. 16ರಂದು ಬೆಳಗ್ಗೆ ಪ್ರಧಾನಹೋಮ, ಕಲಶಾಭಿಷೇಕ, ಮಹಾಪೂಜೆ, ಉತ್ಸವ ಬಲಿ, ಶ್ರೀಮನ್ಮಹಾರಥೋತ್ಸವ, ಅನ್ನಸಂತರ್ಪಣೆ, ರಾತ್ರಿ, ಶ್ರೀಮನ್ಮಹಾರಥೋತ್ಸವ, ದರ್ಶನ ಬಲಿ ತಟಾಕೋತ್ಸವ, ವಲಗ ಮಂಟಪ ಪೂಜೆ, ಶ್ರೀ ಭೂತ ಬಲಿ ನಡೆಯಲಿದೆ. ಜ. 17ರಂದು ಬೆಳಗ್ಗೆ ದಶವಿಧ ಸ್ನಾನ, ತುಲಾಭಾರಾದಿ ಸೇವೆ, ಬೊಬ್ಬರ್ಯ ಪೂಜೆ, ಪ್ರಸಾದ ವಿತರಣೆ, ರಾತ್ರಿ ಅವಭೃತ ಸ್ನಾನ, ಪೂಣಾಹುತಿ, ಧ್ವಜರೋಹಣ ಜರುಗಲಿದೆ. ಜ. 18ರಂದು ಬೆಳಗ್ಗೆ ಮಹಾಸಂಪ್ರೋಕ್ಷಣೆ, ಮಹಾಪೂಜೆ, ದುರ್ಗಾಕಲಶ ಅನ್ನಸಂರ್ಪಣೆ ನಡೆಯಲಿದೆ ಎಂದು ಸಮಗ್ರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.