Tuesday, December 3, 2024
Homeಅಪಘಾತರೀಲ್ಸ್ ಹುಚ್ಚಾಟಕ್ಕೆ ಮತ್ತೊಂದು ಅವಘಡ - 200 ಅಡಿ ಆಳದ ಕಂದಕಕ್ಕೆ ಬಿದ್ದ ಯುವತಿ..!

ರೀಲ್ಸ್ ಹುಚ್ಚಾಟಕ್ಕೆ ಮತ್ತೊಂದು ಅವಘಡ – 200 ಅಡಿ ಆಳದ ಕಂದಕಕ್ಕೆ ಬಿದ್ದ ಯುವತಿ..!


ಹರಿದ್ವಾರ: ಈ ರೀಲ್ಸ್ ಕ್ರೇಜ್ ನಿಂದ ಸಂಭವಿಸುವ ಅವಘಡಗಳು, ಅವಾಂತರಗಳು ಒಂದೆರೆಡಲ್ಲ. ಹರಿದ್ವಾರದ ಮಾನಸಾ ದೇವಿ ಹಿಲ್ಸ್‌ನಲ್ಲಿ ಯುವತಿಯೊಬ್ಬಳು ರೀಲ್ಸ್ ಮಾಡಲು ಹೋಗಿ, ಆಯ ತಪ್ಪಿ ಸುಮಾರು 200 ಅಡಿ ಆಳದ ಕಂದಕಕ್ಕೆ ಬಿದ್ದ ಘಟನೆ ನಡೆದಿದೆ.
ಮೊಬೈಲ್​ನಲ್ಲಿ ರೀಲ್ಸ್​ ರೆಕಾರ್ಡ್ ಮಾಡುವಾಗ ಈ ಯುವತಿ 200 ಅಡಿ ಆಳವಾದ ಕಂದಕಕ್ಕೆ ಬಿದ್ದಿದ್ದಾಳೆ.
ತಕ್ಷಣವೇ ಸ್ಥಳದಲ್ಲಿದ್ದ ಪ್ರವಾಸಿಗರು ಆಕೆಯನ್ನು ಆಯಂಬುಲೆನ್ಸ್​ನಲ್ಲಿ ರವಾನಿಸಿದ್ದು,ಸದ್ಯ ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರೀಲ್ಸ್ ಹುಚ್ಚಾಟದಿಂದ ಈ ರೀತಿಯ ಹಲವು ಅವಘಡಗಳು ಘಟಿಸಿದ್ದರೂ, ಕೆಲ ಜನರು ಮಾತ್ರ ಇದ್ರಿಂದ ಬುದ್ಧಿ ಕಲಿಯುತ್ತಿಲ್ಲ. ಈ ಘಟನೆ ಎಲ್ಲೆಂದರಲ್ಲಿ ರೀಲ್ಸ್ ಮಾಡುವ ಅಪಾಯಗಳ ಬಗ್ಗೆ ಮತ್ತೊಂದು ಎಚ್ಚರಿಕೆ ಮೂಡಿಸುತ್ತದೆ.

ಈ ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಮುಜಾಫರ್‌ನಗರ 28 ವರ್ಷದ ರೇಶು ಎಂದು ಗುರುತಿಸಲಾಗಿದ್ದು, ಪೂಜ್ಯ ಮಾನಸಾ ದೇವಿ ದೇವಸ್ಥಾನಕ್ಕೆ ಎಂದು ಕುಟುಂಬದೊಂದಿಗೆ ಹರಿದ್ವಾರಕ್ಕೆ ಬಂದಿದ್ದಳು ಎಂದು ತಿಳಿದು ಬಂದಿದೆ.

https://x.com/janabkhan08/status/1850142514574942356?ref_src=twsrc%5Etfw%7Ctwcamp%5Etweetembed%7Ctwterm%5E1850142514574942356%7Ctwgr%5E6e11934c7a4d9bf573015e856511e988388f09d5%7Ctwcon%5Es1_c10&ref_url=https%3A%2F%2Fapi

RELATED ARTICLES
- Advertisment -
Google search engine

Most Popular