Wednesday, January 15, 2025
Homeಬೆಳಗಾವಿಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾವು: ತರಾತುರಿಯಲ್ಲಿ ಶವ ಕೊಟ್ಟು ಕಳಿಸಿದ ವೈದ್ಯರು

ಬೆಳಗಾವಿಯಲ್ಲಿ ಮತ್ತೋರ್ವ ಬಾಣಂತಿ ಸಾವು: ತರಾತುರಿಯಲ್ಲಿ ಶವ ಕೊಟ್ಟು ಕಳಿಸಿದ ವೈದ್ಯರು

ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವು ಮುಂದುವರೆದಿದೆ. ಇದೀಗ ಮತ್ತೋರ್ವ ಬಾಣಂತಿ ಸಾವನ್ನಪ್ಪಿರುವಂತಹ ಘಟನೆ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಜಿಲ್ಲೆಯ ಗೋಕಾಕ್ ತಾಲೂಕಿನ ಕುಂದರಗಿ ಗ್ರಾಮದ ಪೂಜಾ ಅಡಿವೆಪ್ಪ ಖಡಕಬಾವಿ(25) ಮೃತ ಬಾಣಂತಿ. ಡಿ.24ರಂದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಪೂಜಾ ದಾಖಲಾಗಿದ್ದರು. ನಿನ್ನೆ ಮಧ್ಯಾಹ್ನ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ಫಿಟ್ಸ್​​​ ಬಂದು ಮೃತಪಟ್ಟಿರುವುದಾಗಿ ಪೂಜಾ ಸಂಬಂಧಿಕರಿಗೆ ಆಸ್ಪತ್ರೆ ವೈದ್ಯರು ಹೇಳಿದ್ದಾರೆ. ಬಳಿಕ ಪೋಸ್ಟ್​​ಮಾರ್ಟಮ್ ನಡೆಸದೇ ತರಾತುರಿಯಲ್ಲಿ ಬಾಣಂತಿ ಶವಕೊಟ್ಟು ವೈದ್ಯರು ಕಳಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಬಿಮ್ಸ್ ಆಸ್ಪತ್ರೆಯ ಹೆರಿಗೆ ವೈದ್ಯ ವಸಂತ್ ಕಬ್ಬೂರ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಡಿ.24ರಂದು ಪೂಜಾ ಎಂಬವರು ಆಸ್ಪತ್ರೆಗೆ ದಾಖಲಾಗಿದ್ದರು. ಪೂಜಾಗೆ 3 ಮಕ್ಕಳಾಗಿದ್ವು, ಒಂದು ಆಪರೇಷನ್ ಆಗಿತ್ತು. ಬಿಮ್ಸ್​​ ಆಸ್ಪತ್ರೆಗೆ ಬಂದಾಗಲೇ ಪೂಜಾಗೆ ಪ್ರಜ್ಞೆ ಇರಲಿಲ್ಲ. ಕೂಡಲೇ ಅವರನ್ನು ನಾವು ಐಸಿಯುಗೆ ಶಿಫ್ಟ್​ ಮಾಡಿದ್ದೆವು ಎಂದಿದ್ದಾರೆ.
ಪರೀಕ್ಷಿಸಿದ ಬಳಿಕ ಹೃದಯ ವೀಕ್ ಇದೆ ಎಂದು ಹೇಳಿದ್ದೇವೆ. ಪೂಜಾಗೆ ಹೆರಿಗೆಯಾದ ಮೇಲೆ ಹೃದಯ ದೊಡ್ಡದಾಗಿತ್ತು. ಹೃದಯ ಪಂಪಿಂಗ್ ಆಗದೇ ಇಂದು ಪೂಜಾ ಮೃತಪಟ್ಟಿದ್ದಾರೆ. ಮಗು 1.6 ಕೆಜಿ ಇದೆ, ಅದಕ್ಕೂ ಐಸಿಯುನಲ್ಲಿ ಚಿಕಿತ್ಸೆ ಕೊಡುತ್ತಿದ್ದೇವೆ. ಇದರಲ್ಲಿ ನಮ್ಮದು ಯಾವುದೇ ನಿರ್ಲಕ್ಷ್ಯ ಇಲ್ಲ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular