Wednesday, September 11, 2024
Homeಶಿಕ್ಷಣಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ರಾಷ್ಟೀಯ ರ‍್ಯಾಗಿಂಗ್ ವಿರೋಧಿ ಸಪ್ತಾಹ...

ಮುಕ್ಕ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ರಾಷ್ಟೀಯ ರ‍್ಯಾಗಿಂಗ್ ವಿರೋಧಿ ಸಪ್ತಾಹ ಕಾರ್ಯಕ್ರಮ 

ಮಂಗಳೂರಿನ ಮುಕ್ಕದಲ್ಲಿರುವ ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಮತ್ತು ಮಂಗಳೂರು ನಗರ ಪೊಲೀಸ್ ಇಲಾಖೆಯಜಂಟಿ ಆಶ್ರಯದಲ್ಲಿ ಕೇಂದ್ರ ಸರಕಾರದ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸೂಚನೆಯಂತೆ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ರಾಷ್ಟೀಯ ರ‍್ಯಾಗಿಂಗ್ ವಿರೋಧಿ ಸಪ್ತಾಹ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸುರತ್ಕಲ್ ಪೊಲೀಸ್ ಠಾಣಾಧಿಕಾರಿ ಇನ್‌ಸ್ಪೆಕ್ಟರ್ ಶ್ರೀ ಮಹೇಶ್ ಪ್ರಸಾದ್ ರವರು ಹಾಗೂ ಗೌರವ ಅತಿಥಿಗಳಾಗಿ ಆಗಮಿಸಿದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಶ್ರೀ ರಘು ನಾಯಕ್ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯ ಮುಖ್ಯಸ್ಥರಾದಡಾ. ರಾಮಕೃಷ್ಣ ಎನ್. ಹೆಗಡೆ ಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕರಾದಡಾ. ಬಿ.ಎಂ. ಪ್ರವೀಣ್ ಕುಮಾರ್, ಮತ್ತು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (NSS) ಸಂಯೋಜಕರಾದಪ್ರೊ. ತ್ರಿವಿಕ್ರಮ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಉದ್ಘಾಟನಾ ಭಾಷಣವನ್ನು ಮಾಡಿದ ಇನ್‌ಸ್ಪೆಕ್ಟರ್ ಶ್ರೀ ಮಹೇಶ್ ಪ್ರಸಾದ್ ರವರು ರ‍್ಯಾಗಿಂಗ್ ವಿರೋಧಿ ಅಭಿಯಾನ ಮತ್ತು ಡ್ರಗ್ಸ್ ಮುಕ್ತ ಕ್ಯಾಂಪಸ್ ವಿಷಯದ ಮೇಲೆ ಉಪನ್ಯಾಸವನ್ನು ನೀಡಿದರು. ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ರವರು ರ‍್ಯಾಗಿಂಗ್ ಗೆ ಕಾರಣಗಳು, ರ‍್ಯಾಗಿಂಗ್ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆಗಳು, ಭಾವನಾತ್ಮಕ ಮತ್ತು ಮಾನಸಿಕ ನಡವಳಿಕೆ, ವ್ಯಕ್ತಿತ್ವ ವಿಕಸನ, ರ‍್ಯಾಗಿಂಗ್ ನಿಷೇಧ ಕಾನೂನುಗಳ ಸಾಮಾನ್ಯ ಅಂಶಗಳು, ರ‍್ಯಾಗಿಂಗ್ ತಡೆಯುವ ಕುರಿತು ಶೈಕ್ಷಣಿಕ ಸಂಸ್ಥೆಗಳು ತೆಗೆದುಕೊಳ್ಳಬೇಕಾದ ಕ್ರಮಗಳು, ಮಾದಕ ದ್ರವ್ಯ ಮುಕ್ತ ಕ್ಯಾಂಪಸ್ ಕುರಿತು ಜಾಗೃತಿ, ಆಂಟಿ ರ‍್ಯಾಗಿಂಗ್ ಮತ್ತು ಆಂಟಿ-ಡ್ರಗ್ಸ್ ಕುರಿತು ಮಾನಸಿಕ ಸಮಾಲೋಚನೆ, ಹಾಗೂ ರ‍್ಯಾಗಿಂಗ್ ಮತ್ತು ಮಾದಕ ದೃವ್ಯ ಸಂಬಂಧಿತ ಪ್ರಕರಣಗಳಿಗೆ ನಿಯಮಾವಳಿಗಳಲ್ಲಿ ಶಿಫಾರಸು ಮಾಡಲಾದ ಶಿಕ್ಷೆಗಳು ಇವೇ ಮೊದಲಾದ ವಿಷಯಗಳ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು. 1873ರಲ್ಲಿ ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ದಾಖಲಾದ ಮೊದಲ ರ‍್ಯಾಗಿಂಗ್ ಪ್ರಕರಣದಿಂದ ಆರಂಭವಾದ 151 ವರ್ಷಗಳ ರ‍್ಯಾಗಿಂಗ್ ಇತಿಹಾಸವನ್ನು ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ರವರು ತಮ್ಮ ಉಪನ್ಯಾಸದಲ್ಲಿ ವಿವರಿಸಿದರು. ಗೌರವಾನ್ವಿತ ಸುಪ್ರೀಂ ಕೋರ್ಟ್ ನೀಡಿದ ಮಹತ್ವದ ತೀರ್ಪುಗಳಲ್ಲಿ ಒಂದಾದ ವಿಶ್ವ ಜಾಗೃತಿ ಮಿಷನ್ ಪ್ರಕರಣ ಮತ್ತು 2006 ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರ‍್ಯಾಗಿಂಗ್ ತಡೆಗಟ್ಟಲು ರಾಘವನ್ ಸಮಿತಿಯ ರಚನೆಯ ಕುರಿತು ಚರ್ಚಿಸುವ ಮೂಲಕ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ರವರು ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ರ‍್ಯಾಗಿಂಗ್ ಕುರಿತು ವಿಶೇಷ ಮಾಹಿತಿಯನ್ನು ನೀಡಿದರು. ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ರವರು ಮಾತನಾಡಿ, ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ, ಈ ನಿಟ್ಟಿನಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಸಮಾನ ಗೌರವ ಮತ್ತು ಅವಕಾಶಗಳನ್ನು ನೀಡುವ ಮೂಲಕ ರ‍್ಯಾಗಿಂಗ್ ಸಂಬಂಧಿಸಿದ ಯಾವುದೇ ವಿಚಾರಗಳು ಕಾಲೇಜಿನಲ್ಲಿ ನಡೆಯದಂತೆ ನೋಡಿಕೊಳ್ಳುವುದು ವಿದ್ಯಾರ್ಥಿಗಳ, ಉನ್ನತ ಶಿಕ್ಷಣ ಸಂಸ್ಥೆಗಳ ಹಾಗೂ ಕಾಲೇಜಿನ ವಿದ್ಯಾರ್ಥಿ ಪರಿಷತ್ತಿನ ಪದಾಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳಿದರು. ಉಪನ್ಯಾಸದ ಬಳಿಕ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ರವರೊಂದಿಗೆ ತುರ್ತು ಕರೆ ಸಂಖ್ಯೆ ಮತ್ತು ಸಹಾಯವಾಣಿಯ ಕುರಿತು ಸಂವಾದ ನಡೆಸಿದರು.

ಅಧ್ಯಕ್ಷೀಯ ಭಾಷಣವನ್ನು ಮಾಡಿದ ಸಂಸ್ಥೆಯ ಮುಖ್ಯಸ್ಥರಾದ ಡಾ.ರಾಮಕೃಷ್ಣ ಎನ್. ಹೆಗಡೆಯವರು, ಯುವಜನರನ್ನು ಸಮಾಜದ ಮತ್ತು ರಾಷ್ಟ್ರದ ಜವಾಬ್ದಾರಿಯುತ ಹಾಗೂ ಯಶಸ್ವಿ ಪ್ರಜೆಗಳಾಗಿ ರೂಪುಗೊಳ್ಳಿಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರ‍್ಯಾಗಿಂಗ್ ವಿರೋಧಿ ಜಾಗೃತಿಯ ಪ್ರಾಮುಖ್ಯತೆಯ ಕುರಿತು ಮಾತನಾಡಿದರು. ಇದೆ ಸಂದರ್ಭದಲ್ಲಿ, ಡಾ.ರಾಮಕೃಷ್ಣ ಹೆಗಡೆ ಯವರು, ರ‍್ಯಾಗಿಂಗ್ ಸಂಬಂಧಿತ ಸಮಸ್ಯೆಗಳಿಗೆ ಕಡಿವಾಣ ಹಾಕಲು ಕಾಲೇಜಿನಲ್ಲಿ ಕೈಗೊಂಡ ಕ್ರಮಗಳ ಕುರಿತು ಹಾಗೂ ಸಂಬಂಧಿತ ಕಾನೂನಿನ ಅಂಶಗಳ ಕುರಿತು ಮಾಹಿತಿ ನೀಡಿದರು. 

ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಕೆ. ಶ್ರೀನಾಥ್ ರಾವ್ ರವರು ಮುಖ್ಯ ಅತಿಥಿಗಳನ್ನು ಮತ್ತು ಗೌರವ ಅತಿಥಿಗಳನ್ನು ಸಭೆಗೆ ಪರಿಚಯಿಸಿದರು, ಹಾಗೂ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಡಾ. ಬಿ. ಎಂ. ಪ್ರವೀಣ್ ಕುಮಾರ್ ರವರು ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು.
ಪ್ರೊ. ತ್ರಿವಿಕ್ರಮ ಪ್ರಭು ರವರು ವಂದನಾರ್ಪಣೆ ಸಲ್ಲಿಸಿದರು.

ರಾಷ್ಟ್ರೀಯ ರ‍್ಯಾಗಿಂಗ್ ವಿರೋಧಿ ಸಪ್ತಾಹದ ಅಂಗವಾಗಿ, ಯುಜಿಸಿ ಸೂಚನೆಯಂತೆ, ಹಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ವಿರೋಧ ಕುರಿತು ಹೆಚ್ಚಿನ ಅರಿವು ಮೂಡಿಸಲು ಪೋಸ್ಟರ್ ಮೇಕಿಂಗ್ ಮತ್ತು ರೀಲ್ ಮೇಕಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿ ಇನ್ಸ್ ಪೆಕ್ಟರ್ ಶ್ರೀ ಮಹೇಶ್ ಪ್ರಸಾದ್ ಹಾಗೂ ಗೌರವ ಅತಿಥಿ ಪಿಎಸ್ ಐ ಶ್ರೀ ರಘು ನಾಯಕ್ ರವರು ಬಹುಮಾನ ವಿಜೇತರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಕಾಲೇಜಿನ ಗಣಿತ ಶಾಸ್ತ್ರ ವಿಭಾಗದ ಉಪನ್ಯಾಸಕರಾದ ಡಾ.ಪ್ರಸಾದ್ ಎಚ್.ಎಂ. ರವರು  ಬಹುಮಾನ ವಿಜೇತರ ಮಾಹಿತಿಯನ್ನು ಸಭೆಗೆ ನೀಡಿದರು.

ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ರ‍್ಯಾಗಿಂಗ್ ವಿರೋಧಿ ಸಮಿತಿ ಮತ್ತು ಎನ್‌ಎಸ್‌ಎಸ್ ಸಮಿತಿಗಳ ಸದಸ್ಯರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular