ಬಂಟ್ವಾಳ: ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಮಂಡಳಿಯ ಹೊಸ ತಂತ್ರಾಂಶದ ದೋಷ ಸರಿಪಡಿಸುವ ಬಗ್ಗೆ, ಶೈಕ್ಷಣಿಕ ಧನಸಹಾಯ ಹಾಗೂ ಕಟ್ಟಡ ಕಾರ್ಮಿಕರ ಹಲವಾರು ಸೌಲಭ್ಯಗಳ ಬಗ್ಗೆ, ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಗತಿಪರ ದಕ್ಷಿಣ ಕನ್ನಡ ಜಿಲ್ಲಾ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಸಂಘ(ರಿ.)
ಎ.ಐ.ಸಿ.ಸಿ.ಟಿ.ಯು ವತಿಯಿಂದ ಕಾರ್ಮಿಕ ನಿರೀಕ್ಷಕರ ಮೂಲಕ ಕಲ್ಯಾಣ ಮಂಡಳಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬೇಡಿಕೆಗಳು:
1. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಮಂಡಳಿಯ ವಿವಿಧ ಸೌಲಭ್ಯಗಳಿಗೆ ಅನ್‌ಲೈನ್ ನಲ್ಲಿ ಅರ್ಜಿಸಲ್ಲಿಸಲು ಹೊಸತಾದ ತಂತ್ರಾಂಶದಲ್ಲಿ ಹಲವಾರು ದೋಷಗಳಿದ್ದು ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ನವೀಕರಣ ಮಾಡಲು ಆಗುತ್ತಿಲ್ಲ ಇದರಿಂದ ಕಾರ್ಮಿಕ ವಿವಿಧ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ , ಇದರಿಂದ ಕಾರ್ಮಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ತಂತ್ರಾಂಶದಲ್ಲಿರುವ ತಾಂತ್ರಿಕ ದೋಷವನ್ನು ಶೀಘ್ರ ಸರಿಪಡಿಸಬೇಕು.
2. ಕಟ್ಟಡ ಕಾರ್ಮಿಕರು ಮಂಡಳಿಗೆ ನೋಂದಣಿಯಾಗುವ ಸಂದರ್ಭದಲ್ಲಿ ವೈದ್ಯರ ಮುಖಾಂತರ ವಯಸ್ಸಿನ ದಾಖಲೆಯನ್ನು ನೀಡಿ ಕಾರ್ಮಿಕರ ಗುರುತಿನ ಚೀಟಿ ಪಡೆದುಕೊಂಡಿರುತ್ತಾರೆ ಆದರೆ ಈಗ ಪಿಂಚಣಿಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ನಲ್ಲಿರುವ ವಯಸ್ಸು ಹಾಗೂ ಮೂಲ ಗುರುತಿನ ಚೀಟಿಯಲ್ಲಿ ಜನನ ದಿನಾಂಕ ವ್ಯತ್ಯಾಸ ಇರುವುದರಿಂದ ಪಿಂಚಣಿಗೆ ಅರ್ಜಿ ಸಲ್ಲಿಸಲು ಮೂಲ ಗುರುತಿನ ಚೀಟಿಯನ್ನು ಪರಿಗಣಿಸಿ ಪಿಂಚಣಿ ನೀಡಬೇಕು.
3. ಶೈಕ್ಷಣಿಕ ಧನ ಸಹಾಯಕ್ಕೆ ಈ ಮೊದಲು ಹಾಕಿದ ಅರ್ಜಿಯನ್ನು ವಿಲೇವಾರಿ ಮಾಡಿ ಈ ಶೈಕ್ಷಣಿಕ ವರ್ಷದ ಅರ್ಜಿಯನ್ನು ಪ್ರಾರಂಭಿಸಬೇಕು ಹಾಗೂ ಹಳೇ ಮಾದರಿಯಲ್ಲಿ ಶೈಕ್ಷಣಿಕ ಧನಸಹಾಯವನ್ನು ನೀಡಬೇಕು
4. ಎಲ್ಲಾ ಕಾರ್ಮಿಕ ಇಲಾಖೆಗಳಲ್ಲಿ ಖಾಯಂ ಕಾರ್ಮಿಕ ನಿರೀಕ್ಷಕರು ಹಾಗೂ ಸಿಬ್ಬಂದಿ ಯನ್ನು ನೀಡಬೇಕು.
5. ಕಟ್ಟಡ ಕಾರ್ಮಿಕರು ಸಲ್ಲಿಸಿದ ವಿವಿಧ ಸೌಲಭ್ಯಗಳ ಅರ್ಜಿಯನ್ನು ಪರಿಶೀಲಿಸಿ ಶೀಘ್ರ ವಿಲೇವಾರಿ ಮಾಡಬೇಕು
6. ಮಂಡಳಿಯಿಂದ ಕಾರ್ಮಿಕರಿಗೆ ಕಿಟ್ ಹಾಗೂ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಲ್ಲಿಸಿ ಎಲ್ಲಾ ಸೌಲಭ್ಯಗಳನ್ನು ಕಾರ್ಮಿಕರಿಗೆ ನೇರವಾಗಿ ಒದಗಿಸಬೇಕು.
7. ಎಲ್ಲಾ ಜಿಲ್ಲಾ ಕಾರ್ಮಿಕ ಇಲಾಖಾ ಕೇಂದ್ರಗಳಲ್ಲಿ ಕಟ್ಟಡ ಕಾರ್ಮಿಕರ ಕುಂದುಕೊರತೆಗಳ ಬಗ್ಗೆ ಪ್ರತೀ ತಿಂಗಳು ಅದಾಲತ್ ನಡೆಸಬೇಕು.
ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿಯನ್ನು ನೀಡಲಾಯಿತು.
ನಿಯೋಗದಲ್ಲಿ ಎ.ಐ.ಸಿ.ಸಿ.ಟಿ.ಯು ಜಿಲ್ಲಾಧ್ಯಕ್ಷರಾದ ರಾಮಣ್ಣ ವಿಟ್ಲ, ಜಿಲ್ಲಾ ಕಾರ್ಯದರ್ಶಿ ಮೋಹನ್.ಕೆ.ಇ, ಮುಖಂಡರಾದ ಅಚ್ಯುತ ಕಟ್ಟೆ, ರಾಜೀವ ಅಳಿಕೆ ಮುಂತಾದವರು ಇದ್ದರು.