Monday, December 2, 2024
Homeಬಂಟ್ವಾಳಸಾಹಿತ್ಯ ತಾರೆ ಮತ್ತು ಬಾಲಬಂಧು ಪ್ರಶಸ್ತಿಗೆ ಅರ್ಜಿ ಆಹ್ವಾನ

ಸಾಹಿತ್ಯ ತಾರೆ ಮತ್ತು ಬಾಲಬಂಧು ಪ್ರಶಸ್ತಿಗೆ ಅರ್ಜಿ ಆಹ್ವಾನ

ಬಂಟ್ವಾಳ : “ಮಕ್ಕಳ ಕಲಾಲೋಕ” ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ತಾಲೂಕು ಘಟಕ ವತಿಯಿಂದ 18ನೇ ವರ್ಷದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು 2024ರ ನವಮಬರ್ ಎರಡನೆಯ ವಾರದಲ್ಲಿ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಶಂಭೂರು ಸಹಭಾಗಿತ್ವದಲ್ಲಿ ನಡೆಯದಿರುವುದು. ಈ ಸಂದರ್ಭದಲ್ಲಿ
ತಾಲೂಕಿನಲ್ಲಿ 18ವರ್ಷ ಪ್ರಾಯದೊಳಗಿನ ಮಕ್ಕಳಿರುವ ಸರಕಾರಿ, ಅನುದಾನಿತ , ಅನುದಾನ ರಹಿತ ವಿದ್ಯಾಸಂಸ್ಥೆಗಳಲ್ಲಿ ಐದು ವರ್ಷಗಳ ಈಚೆಗೆ ಮಕ್ಕಳಿಗಾಗಿ ಸಾಹಿತ್ಯ ಹಾಗೂ ವಿವಿಧ ಕಲೆಗಳಲ್ಲಿ ಸಹಕರಿಸುತ್ತಿರುವ ಶಿಕ್ಷಕರು ಅಥವಾ ಸಾರ್ವಜನಿಕ ಕಲಾಗಾರರೊಬ್ಬರಿಗೆ ಸಮ್ಮೇಳನದಂದು ತಾಲೂಕು ಮಟ್ಟದ ಬಾಲಬಂಧು ಪುರಸ್ಕಾರವನ್ನು ನೀಡಲಾಗುತ್ತದೆ. ಅದೇ ರೀತಿ ಐದು ವರ್ಷಗಳ ಈಚೆಗೆ ಸಾಹಿತ್ಯಾದಿ ಕಲೆಗಳಲ್ಲಿ ಅತ್ಯುತ್ತಮವಾಗಿ ತೊಡಗಿಸಿಕೊಂಡ ಸರಕಾರಿ, ಅನುದಾನಿತ ಯಾ ಅನುದಾನ ರಹಿತ ಒಂದು ಶಾಲೆಗೆ ಸಾಹಿತ್ಯ ತಾರೆ ಪ್ರಶಸ್ತಿಯನ್ನು ನೀಡಲಾಗುವುದು

ಸಾಹಿತ್ಯ ತಾರೆ ಪ್ರಶಸ್ಸತಿಗಾಗಿ ತಾಲೂಕಿನಲ್ಲಿ 18ವರ್ಷ ಪ್ರಾಯದೊಳಗಿನ ಮಕ್ಕಳಿರುವ ಸರಕಾರಿ, ಅನುದಾನಿತ , ಅನುದಾನ ರಹಿತ ವಿದ್ಯಾಸಂಸ್ಥೆಗಳಲ್ಲಿ ಐದು ವರ್ಷಗಳ ಈಚೆಗೆ ಸಾಹಿತ್ಯ ಹಾಗೂ ಇತರ ಕಲೆಗಳಲ್ಲಿ ಮಾಡಿದ ಸಾಧನೆಗಳ ವಿವರಗಳನ್ನು ಬರೆದು ಕಳುಹಿಸಿರಿ. ಆಯ್ದ ಒಂದು ವಿದ್ಯಾಸಂಸ್ಥೆಗೆ “ಸಾಹಿತ್ಯ ತಾರೆ” ಪ್ರಶಸ್ತಿಯನ್ನು ನೀಡಲಾಗುವುದು.
ಮಕ್ಕಳಿಗಾಗಿ ಸಾಹಿತ್ಯ ಹಾಗೂ ವಿವಿಧ ಕಲೆಗಳಲ್ಲಿ ಸಹಕರಿಸುತ್ತಿರುವ ಶಿಕ್ಷಕರು ಅಥವಾ ಸಾರ್ವಜನಿಕ ಕಲಾಗಾರರು ಸಾಧನೆಗಳ ವಿವರಗಳನ್ನು ಪಟ್ಟಿ ಮಾಡಿ ಕಳುಹಿಸಿರಿ. ಆಯ್ದ ಸಾಧಕರೊಬ್ಬರಿಗೆ “ಬಾಲ ಬಂಧು” ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎರಡೂ ವಿವರಗಳನ್ನು 2024 ಅಕ್ಟೋಬರ್ 31 ರೊಳಗೆ ಕೆಳಗಿನ ವಿಳಾಸಕ್ಕೆ ತಲುಪಿಸಬೇಕೆಂದು “ಮಕ್ಕಳ ಕಲಾ ಲೋಕ”ದ ಪ್ರಕಟಣೆಯಲ್ಲಿ ತಿಳಿಸಿರುವರು.

ರಮೇಶ ಎಂ. ಬಾಯಾರು, ಅಧ್ಯಕ್ಷರು. “ಮಕ್ಕಳ ಕಲಾ ಲೋಕ” – ಸ್ಕಂದ- ಅಳಕೆ ಮಜಲು 574243. 

ಮೊ: 9448626093

RELATED ARTICLES
- Advertisment -
Google search engine

Most Popular