ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ 2024 ನೇ ಸಾಲಿನ ಪುಸ್ತಕ ಪ್ರಶಸ್ತಿಗೆ ಲೇಖಕರು ಹಾಗೂ ಪ್ರಕಾಶಕರಿ0ದ ಅರ್ಜಿ ಆಹ್ವಾನಿಸಲಾಗಿದೆ. ದಿನಾಂಕ 01-01-2024 – 31-12-2024 ರ ಅವಧಿಯಲ್ಲಿ ಪ್ರಕಟಗೊಂಡ ಪುಸ್ತ್ತಕಗಳನ್ನು ಪುಸ್ತಕ ಪ್ರಶಸ್ತಿಗೆ ಪರಿಗಣಿಸಲಾಗುವುದು. ತುಳು ಕವನ ಸಂಕಲನ, ತುಳು ಕಥಾ ಸಂಕಲನ, ತುಳು ಕಾದಂಬರಿ, ತುಳು ಕಾವ್ಯ, ತುಳು ನಾಟಕ, ತುಳುವಿನ ಬಗ್ಗೆ ಅಧ್ಯಯನ ಗ್ರಂಥ ಹಾಗೂ ತುಳುವಿನಿಂದ ಇತರ ಭಾಷೆಗೆ – ಇತರ ಭಾಷೆಯಿಂದ ತುಳುವಿಗೆ ಭಾಷಾಂತರಿತ ಕೃತಿಗಳನ್ನು ಪ್ರಶಸ್ತಿಗೆ ಆಹ್ವಾನಿಸಲಾಗಿದೆ. ಈ ಪ್ರಕಾರಗಳಲ್ಲಿ ಅಕಾಡೆಮಿಯು ಹೆಚ್ಚು ಸಂಖ್ಯೆಯಲ್ಲಿ ಸ್ವೀಕರಿಸುವ ಪುಸ್ತಕಗಳ 3 ಪ್ರಕಾರಗಳನ್ನು ಮಾತ್ರ ಪುಸ್ತಕ ಪ್ರಶಸ್ತಿಗೆ ಪರಿಗಣಿಸಲಾಗುವುದು. ಪುಸ್ತಕಗಳ ತಲಾ 4 ಪ್ರತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
ಪುಸ್ತಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಲಕೋಟೆಯ ಮೇಲೆ “ತುಳು ಅಕಾಡೆಮಿ ಪುಸ್ತಕ ಪ್ರಶಸ್ತಿಗೆ’ ಎಂದು ಬರೆದು, ರಿಜಿಸ್ಟಾçರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳುಭವನ, ಪೋಸ್ಟ್ ಅಶೋಕನಗರ, ಉರ್ವಸ್ಟೋರ್, ಮಂಗಳೂರು – 575 006 ಈ ವಿಳಾಸಕ್ಕೆ ದಿನಾಂಕ: 01-01-2025 ರ ಒಳಗಾಗಿ ಅರ್ಜಿ ಸಲ್ಲಿಸುವಂತೆ ಅಕಾಡೆಮಿ ಅಧ್ಯಕ್ಷ, ತಾರಾನಾಥ್ ಗಟ್ಟಿ ಕಾಪಿಕಾಡ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.