ದಿನಾಂಕ: 19-12-2024 ಗುರುವಾರದಂದು ಗೃಹರಕ್ಷಕ ಶ್ರೀ ಚಂದ್ರಶೇಖರ್ ಮೂಡಬಿದ್ರಿ ಘಟಕ ಅವರನ್ನು ಗೃಹರಕ್ಷಕ ದಳದ ಮೂಡಬಿದ್ರಿ ಘಟಕದ ಪ್ರಭಾರ ಘಟಕಾಧಿಕಾರಿಯಾಗಿ ನೇಮಿಸಿ ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಜಿಲ್ಲಾ ಕಛೇರಿಯಿಂದ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ಮೂಡಬಿದ್ರಿ ಪ್ರಭಾರ ಘಟಕಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಶ್ರೀ ಪಾಂಡಿರಾಜ್ ಇವರು ವಯೋನಿವೃತ್ತಿ ಹೊಂದಿರುವ ಕಾರಣದಿಂದಾಗಿ ಪ್ರಭಾರ ಘಟಕಾಧಿಕಾರಿ ಹುದ್ದೆಗೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನೇಮಿಸಿ ಜಿಲ್ಲಾ ಕಛೇರಿಯಿಂದ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು. ಶ್ರೀ ಚಂದ್ರಶೇಖರ್ ಇವರು ದಿನಾಂಕ: 01-02-2006 ರಿಂದ ಗೃಹರಕ್ಷಕ ದಳದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೆಂಗಳೂರು ಪೌರ ರಕ್ಷಣಾ ಅಕಾಡೆಮಿಯಲ್ಲಿ ನಡೆದ ನಿಸ್ತಂತು ಚಾಲನಾ ತರಬೇತಿ, ಆಸ್ಕಾ ಲೈಟ್ ತರಬೇತಿಯನ್ನು ನಡೆಸಿರುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕದಳ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲ ಎ., ದಲಾಯತ್ ಶ್ರೀಮತಿ ಮಂಜುಳಾ ಲಮಾಣಿ, ಮಂಗಳೂರು ಘಟಕದ ಸಾರ್ಜಂಟ್ ಶ್ರೀ ಸುನಿಲ್ ಕುಮಾರ್, ಸಂತೋಷ್ ಜಾದವ್, ಸುರೇಖಾ, ಸಂಧ್ಯಾ, ಸುಲೋಚನಾ ಹಾಗೂ ಖತೀಜಾ ಉಪಸ್ಥಿತರಿದ್ದರು