ಪುತ್ತೂರು :ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯ ಘಟಕ ಮೂಡಿಗೆರೆ ಚಿಕ್ಕಮಗಳೂರು ಜಿಲ್ಲೆ ಇದರ ವತಿಯಿಂದ ಸಾಹಿತ್ಯ ಸಂಭ್ರಮ -100ರ ಪ್ರಯುಕ್ತ ನಡೆಯಲಿರುವ ರಾಜ್ಯ ಮಟ್ಟದ ಕವಿ ಕಾವ್ಯ ಸಮ್ಮೇಳನದ ಕವಿಗೋಷ್ಠಿಗೆ ಅಪೂರ್ವ ಕಾರಂತ್ ದರ್ಬೆ ಆಯ್ಕೆಯಾಗಿದ್ದಾರೆ.ಚಿಕ್ಕಮಗಳೂರಿನ ಸಾಹಿತಿ ರಂಗಭೂಮಿ ಕಲಾವಿದರಾಗಿರುವ ಶ್ರೀ ಹೆಚ್. ಎಂ. ನಾಗರಾಜ್ ರಾವ್ ರವರ ಅಧ್ಯಕ್ಷತೆಯಲ್ಲಿ ಮೂಡಿಗೆರೆ ಪಂಚಾಯತ್ ದೀನ್ ದಯಾಳ್ ಸಭಾಂಗಣದಲ್ಲಿ ಇದೇ ಭಾನುವಾರ 24ರಂದು ಕವಿಗೋಷ್ಠಿ ನಡೆಯಲಿದೆಯೆಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ ಎಂ. ಎಸ್. ನಾಗರಾಜ್ ಮೂಡಿಗೆರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.