ಬೆಂಗಳೂರು: ಪೂಜೆಯ ನೆಪದಲ್ಲಿ ಯುವತಿಯ ಮೇಲೆ ಅರ್ಚಕನೊಬ್ಬ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಹಾಸನ ಜಿಲ್ಲೆ ಅರಸಿಕೆರೆ ಮೂಲದ ಅರ್ಚಕ ದಯಾನಂದ್ (39) ಎಂಬಾತನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿರುವ 26 ವರ್ಷದ ಯುವತಿ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಅರಸಿಕೆರೆಯ ಪುರದಮ್ಮ ದೇವಾಲಯದ ಅರ್ಚಕನಾದ ದಯಾನಂದ್‌ಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿವೆ. ಯುವತಿ ಹಾಗೂ ಅರ್ಚಕ ಒಂದೇ ಊರಿನವರಾದುದರಿಂದ ದೇವಾಲಯಕ್ಕೆ ಶಾಸ್ತ್ರ ಕೇಳಲು ಹೋದಾಗ ಪರಿಚಯವಾಗಿದೆ. ಅರ್ಚಕ ಯುವತಿಗೆ ನಿಂಬೆಹಣ್ಣು ಮಂತ್ರಿಸಿ ಕೊಡುತ್ತಿದ್ದ. ದೋಷ ಪರಿಹಾರಕ್ಕೆಂದು ಆಕೆಯಿಂದ ಹಣವನ್ನೂ ಪಡೆದಿದ್ದ. ಯುವತಿಯನ್ನು ಭೇಟಿಯಾಗಲು ಬೆಂಗಳೂರಿಗೂ ಹೋಗಿ ಬರುತ್ತಿದ್ದ ಎನ್ನಲಾಗಿದೆ.
ಈ ವೇಳೆ ಯುವತಿಯ ಮೇಲೆ ಅರ್ಚಕ ಲೈಂಗಿಕ ದೌರ್ಜನ್ಯ ಎಸಗಿದ್ದು, ಅದರ ವಿಡಿಯೊ ಮಾಡಿ ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಯುವತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಪೂಜೆ ನೆಪವೊಡ್ಡಿ ಯುವತಿಯ ಮೇಲೆ ಅತ್ಯಾಚಾರ ಎಸಗಿ ಬೆದರಿಕೆ | ಅರ್ಚಕನ ಬಂಧನ
RELATED ARTICLES