ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.), ಪೆಲತ್ತಿಮಾರು ಮತ್ತು ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಪೆಲತ್ತಿಮಾರು, ಬಂದಾರು ಇವುಗಳ ಜಂಟಿ ಆಶ್ರಯದಲ್ಲಿ ಶನಿವಾರ ಬೆಳಿಗ್ಗೆ ಸೂರ್ಯೋದಯದಿಂದ ರಾತ್ರಿ 8 ರ ವರೆಗೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ ವಿವಿಧ ಭಜನಾ ಮಂಡಳಿಗಳ ಭಾಗವಹಿಸುವಿಕೆಯೊಂದಿಗೆ 12 ನೇ ವರ್ಷದ ಲೋಕಕಲ್ಯಾಣಾರ್ಥವಾಗಿ ಅರ್ಧ ಏಕಾಹ ಭಜನೆ , ಶ್ರೀ ವಿಷ್ಣು ದೇವರಿಗೆ ತುಳಸಿ ಅರ್ಚನೆ ಹಾಗೂ ರಾತ್ರಿ ರಂಗ ಪೂಜೆ ನಡೆಯಿತು.