Thursday, May 1, 2025
HomeUncategorizedಪದ್ಮುಂಜ ಪ್ರೌಢ ಶಾಲೆಯಲ್ಲಿ ಹಿಂದೂ ಶಿಕ್ಷಕರೇ ಟಾರ್ಗೆಟ್ ಆಗ್ತಿದ್ದಾರಾ..?

ಪದ್ಮುಂಜ ಪ್ರೌಢ ಶಾಲೆಯಲ್ಲಿ ಹಿಂದೂ ಶಿಕ್ಷಕರೇ ಟಾರ್ಗೆಟ್ ಆಗ್ತಿದ್ದಾರಾ..?

ಪದ್ಮುಂಜ ಪ್ರೌಢ ಶಾಲೆ ಯ ವಿದ್ಯಾರ್ಥಿನಿಯರಿಬ್ಬರನ್ನು ಎಸ್. ಎಸ್. ಎಲ್. ಸಿ ಪರೀಕ್ಷೆ ಗೆ ಹಾಜರಾಗಲು ಅನುಮತಿ ನಿರಾಕರಿಸಲಾಗಿದೆ ಎನ್ನುವ ಚರ್ಚೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದೆ..

ವಾಸ್ತವವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಸ್ ಎಸ್ ಎಲ್ ಸಿ ಪರೀಕ್ಷಾ ನಿಯಮಾವಳಿ ಪ್ರಕಾರ ಈ ಬಾರಿ ಪರೀಕ್ಷೆ 1, ಪರೀಕ್ಷೆ 2 ಮತ್ತು ಪರೀಕ್ಷೆ 3
ಈ ರೀತಿಯಾಗಿ 3 ಬಾರಿ ಪಬ್ಲಿಕ್ ಪರೀಕ್ಷೆ ಬರೆಯಲು ಅವಕಾಶ ವಿದ್ದು, ಇದರ ಅನುಸಾರ ವಿದ್ಯಾರ್ಥಿ/ನಿ ಯು ಪರೀಕ್ಷೆ 1 ನ್ನು ಬರೆಯಲು ಇಚ್ಛೆ ಪಡದಿದ್ದರೆ ಪರೀಕ್ಷೆ 2 ಅಥವಾ ಪರೀಕ್ಷೆ 3 ರಲ್ಲಿ ಹಾಜರಾಗಿ ಪರೀಕ್ಷೆ ಬರೆಯಲು ಅವಕಾಶ ವಿರುತ್ತದೆ..

ಪದ್ಮುಂಜ ಪ್ರೌಢ ಶಾಲೆಯ ಎರಡು ವಿದ್ಯಾರ್ಥಿನಿಯರು ಸದರಿ ನಿಯಮಾವಳಿ ಪ್ರಕಾರ ನಾವು ಮೊದಲ ಹಂತದ ಪರೀಕ್ಷೆ ಬರೆಯುವುದಿಲ್ಲ ಎರಡನೇ ಹಂತದ ಪರೀಕ್ಷೆ ಬರೆಯುತ್ತೇವೆ ಎಂದು ಅನೇಕ ಬಾರಿ ನಿವೇದಿಸಿಕೊಂಡಿದ್ದರು. ಇದರ ಬಗ್ಗೆ ಮುಖ್ಯ ಉಪಾಧ್ಯಯರು ವಿದ್ಯಾರ್ಥಿನಿಯರಿಬ್ಬರ ಪೋಷಕ ರನ್ನು ಕರೆಸಿ ಮೊದಲ ಹಂತದ ಪರೀಕ್ಷೆ ಗೆ ಹಾಜರಾಗವಂತೆ ಸೂಚಿಸಿದ್ದರು.

ಆ ಬಳಿಕ ಮೊದಲ ಹಂತದ ಪರೀಕ್ಷೆ ಮುನ್ನಾ ದಿನ ಎಲ್ಲಾ ವಿದ್ಯಾರ್ಥಿ ಗಳಿಗೆ ಹಾಲ್ ಟಿಕೆಟ್ ನೀಡಲಾಗಿದ್ದು ಇಬ್ಬರು ವಿದ್ಯಾರ್ಥಿ ನಿಯರು ಆ ದಿನ ಶಾಲೆ ಗೆ ರಜೆ ಹಾಕಿದ್ದು ಹಾಲ್ ಟಿಕೆಟ್ ಅನ್ನು ತೆಗೆದುಕೊಂಡಿರುವುದಿಲ್ಲ..ನಂತರ ಶಾಲಾ ಶಿಕ್ಷಕರು ವಿದ್ಯಾರ್ಥಿನಿಯರ ಪೋಷರನ್ನು ಸಂಪರ್ಕಿಸಿ ಹಾಲ್ ಟಿಕೆಟ್ ಪಡೆದು ಕೊಳ್ಳುವ0ತೆ ಸೂಚಿಸಿದ್ದರೂ.. ನಮ್ಮ ಮಕ್ಕಳು ದ್ವಿತೀಯ ಹಂತದ ಪರೀಕ್ಷೆ ಬರೆಯುತ್ತಾರೆ ಎಂದು ತಿಳಿಸಿದ್ದರು.

ಆದರೆ ಆ ಬಳಿಕ ಹಾಲ್ ಟಿಕೆಟ್ ಪಡೆಯದ ವಿದ್ಯಾರ್ಥಿನಿ ಯೋರ್ವಳು ತಮಗೆ ಅನ್ಯಾಯ ವಾಗಿದೆ ಎಂದು ಮೋಹಿದ್ದೀನ್ ಕುಟ್ಟಿ ಎಂಬವರಿಗೆ ಪತ್ರ ಬರೆದು ಅನ್ಯಾಯವಾಗಿದೆ ಎಂದು ಕೇಳಿಕೊಂಡಿದ್ದಳು…

ಈ ವಿಷಯ ತಿಳಿದು ತಾಲೂಕು ಬಿ ಇ ಓ ರವರು ವಿದ್ಯಾರ್ಥಿನಿಯರಿಬ್ಬರಿಗೆ ಹಾಲ್ ಟಿಕೆಟ್ ಕೊಡಿಸಿ ಉಳಿದ ಮೂರು ಪರೀಕ್ಷೆ ಬರೆಯುವಂತೆ ಸೂಚಿಸಿದ್ದರು. ಆದರೆ ಸ್ವೀಕರಿಸಿದ ಹಾಲ್ ಟಿಕೇಟ್ ಅನ್ನು ವಾಪಸು ನೀಡಿಸುವಲ್ಲಿ, ವಿದ್ಯಾರ್ಥಿನಿಯರ ಪರವಾಗಿ ನ್ಯಾಯದ ಸೋಗಿನಲ್ಲಿ ಬಂದ ಕೆಲವು ಅನ್ಯ ಮತೀಯರು ಯಶಸ್ವಿಯಾಗಿದ್ದು, ತಮ್ಮ ಉದ್ದೇಶ ವಿದ್ಯಾರ್ಥಿನಿಯರಿಗೆ ನ್ಯಾಯ ಕೊಡಿಸುವುದು ಅಲ್ಲ ಹಿಂದೂ ಮುಖ್ಯ ಉಪಾಧ್ಯಯರ ಟಾರ್ಗೆಟ್ ಮಾಡಿ ತೊಂದರೆ ಕೊಡುವುದು ಎಂದು ಸ್ಪಷ್ಟವಾಗಿದೆ.

ಈ ಹಿಂದೆಯೂ ಪದ್ಮುಂಜ ಪ್ರೌಢ ಶಾಲೆಯಲ್ಲಿ ಮುಸ್ಲಿಂ ವಿದ್ಯಾರ್ಥಿ ಗೆ ಶಿಕ್ಷಕರು ಹೊಡೆದರು ಎನ್ನುವ ಸುದ್ದಿ ಹಬ್ಬಸಿ.. ಸ್ಥಳೀಯ ಮುಸ್ಲಿಂ ಮುಖಂಡ ರು ಹಿಂದೂ ಶಿಕ್ಷಕ ನ ವಿರುದ್ಧ ತೊಡೆ ತಟ್ಟಿದ್ದರು ಆದರೆ ಶಾಲಾ ಶಿಕ್ಷಕ ಗಟ್ಟಿಯಾಗಿ ನಿಂತು ಹೋರಾಡಿ ದನ್ನು ಗಮನಿಸಿ ಮುಸ್ಲಿಂ ಮುಖಂಡರು ಜಾರಿ ಕೊಂಡಿದ್ದರು..

ಇದೀಗ ಮತ್ತೆ ವಿದ್ಯಾರ್ಥಿನಿಯರಿಗೆ ಅನ್ಯಾಯ ಎನ್ನುವ ಸುಳ್ಳು ನೆಪದಲ್ಲಿ ಮತ್ತೆ ಹಿಂದೂ ಶಿಕ್ಷಕರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಹಾಗೂ ಇದಕ್ಕೆ ಸ್ಥಳೀಯ ಕಾಂಗ್ರೆಸ್ ಪಕ್ಷ ದವರ ಕುಮ್ಮಕ್ಕು ಇದೆ ಎನ್ನುವ ಸುದ್ದಿ ಪೋಷಕರ ಮತ್ತು ಹಿಂದೂ ಸಂಘಟನೆಗಳ ನಡುವೆ ಚರ್ಚೆಯಾಗುತ್ತಿದೆ.

ಮುಂದೆ ಪದ್ಮುಂಜಾ ಪ್ರೌಢ ಶಾಲೆಯ ಹಿಂದೂ ಶಿಕ್ಷಕರಿಗೆ ಏನಾದರೂ ವಿನಾಕಾರಣ ತೊಂದರೆಯಾದಲ್ಲಿ ಶಿಕ್ಷಕರ ಪರವಾಗಿ ಪ್ರತಿಭಟನೆ ನಡೆಸಲು ಪೋಷಕರು ಮತ್ತು ಹಿಂದೂ ಸಂಘಟನೆಯವರು ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

RELATED ARTICLES
- Advertisment -
Google search engine

Most Popular