Tuesday, March 18, 2025
Homeಧಾರ್ಮಿಕಅರಿಯಡ್ಕ ಏಳ್ನಾಡುಗುತ್ತು ತರವಾಡು ಮನೆ: ಬ್ರಹ್ಮಕಲಶ, ನೇಮದ ಸಮಾಲೋಚನ ಸಭೆ

ಅರಿಯಡ್ಕ ಏಳ್ನಾಡುಗುತ್ತು ತರವಾಡು ಮನೆ: ಬ್ರಹ್ಮಕಲಶ, ನೇಮದ ಸಮಾಲೋಚನ ಸಭೆ

ಈಶ್ವರಮಂಗಲು:ಅರಿಯಡ್ಕ ಏಳ್ನಾಡುಗುತ್ತು ಕುಟುಂಬದ ನವೀಕೃತ ತರವಾಡು ಮನೆಯ ಗೃಹಪ್ರವೇಶ, ಧರ್ಮದೈವ ಪಿಲಿಭೂತದ ನೂತನ ದೈವಸ್ಥಾನ ಮತ್ತು ದೊಂಪದ ಬಲಿ ಉತ್ಸವ ನಡೆಯುವಲ್ಲಿ ನವೀಕೃತಗೊಂಡ ಉತ್ಸವಕಟ್ಟೆಗಳು, ಪಿಲಿ ಮತ್ತು ಪಿಲಿಕೊಟ್ಯಗಳ ಹಾಗೂ ಖಂಡಿಗದಲ್ಲಿ ನಿರ್ಮಿಸಿದ ಗುಳಿಗ ದೈವದ ಕಟ್ಟೆಯ ಪ್ರತಿಷ್ಠೆ ಬ್ರಹ್ಮಕಲಶ ಮತ್ತು ಧರ್ಮದೈವ ಮತ್ತು ಪರಿವಾರ ದೈವಗಳ ನೇಮವು ಎ.21ರಿಂದ ಎ.24ರ ವರೆಗೆ ಅರಿಯಡ್ಕ ಏಳ್ನಾಡುಗುತ್ತು ತರವಾಡು ಮನೆಯಲ್ಲಿ ನಡೆಯಲಿದ್ದು ಇದರ ಅಂಗವಾಗಿ ಸಮಾಲೋಚನ ಸಭೆ ಅರಿಯಡ್ಕ ಏಳ್ನಾಡುಗುತ್ತುವಿನಲ್ಲಿ ನಡೆಯಿತು. ಕುಟುಂಬದ ಸದಸ್ಯ ಎ.ಲಕ್ಷ್ಮೀ ನಾರಾಯಣ ಶೆಟ್ಟಿ ತಿಂಗಳಾಡಿ ಮಾತನಾಡಿ ಆಮಂತ್ರಣ ಪತ್ರಿಕೆ ಹಂಚಿಕೆ, ಊಟ- ಉಪಾಹಾರ, ಹೊರಕಾಣಿಕೆ ಹಾಗೂ ವಿವಿಧ ಸಮಿತಿಗಳ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಕುಟುಂಬದ ಸದಸ್ಯರಲ್ಲದೆ, ಗಣ್ಯರು, ಗ್ರಾಮಸ್ಥರು ಭಾಗವಹಿಸುತ್ತಾರೆ. ಯಾವುದೇ ಕುಂದುಕೊರತೆ ಬಾರದ ಹಾಗೆ ಎಲ್ಲ ಸಮಿತಿಯವರು ಕಾರ್ಯನಿರ್ವಹಿಸುವ ಜವಾಬ್ದಾರಿ ಇದೆ. ಎ.22ರಂದು ತರುವಾಡು ಮನೆಯ ಗೃಹಪ್ರವೇಶ ಕುಟುಂಬದ ಸದಸ್ಯರು ಸಲಹೆ ನಡೆಯಲಿದ್ದು ಸುಮಾರು 1,500 ಜನರು ಸೂಚನೆಗಳನ್ನು ನೀಡಿದರು. ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಕುಟುಂಬದ ಹಿರಿಯರಾದ ಚಿಕ್ಕಪ್ಪ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕುಟುಂಬದ ಸದಸ್ಯರು ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. 4 ದಿನದ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ನಡೆಸಲು ಕುಟುಂಬ ಸದಸ್ಯರೆಲ್ಲರೂ ಕಾತರರಾಗಿದ್ದಾರೆ ಎಂದರು. ಆರ್ಥಿಕ ಸಮಿತಿ ಸಂಚಾಲಕ ತಿಮ್ಮಪ್ಪರೈ ಪಾಪೆಮಜಲು ಮಾತನಾಡಿ ಕುಟುಂಬದ ಸದಸ್ಯರು ನೀಡಿದ ಧನಸಹಾಯವನ್ನು ಮಂಡಿಸಿದರು. ಹೆಚ್ಚಿನ ಧನ ಸಹಾಯದ ನಿರೀಕ್ಷೆಯಲ್ಲಿ ಇದ್ದೇವೆ ಎಂದರಲದೆ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಕುಟುಂಬದ ಪ್ರಮುಖರಾದ ಎ.ಸುಬ್ಬಯ್ಯ ಶೆಟ್ಟಿ, ಎ.ಕೆ.ರೈ, ಶಾರದಾ ಸಿ. ರೈ. , ಡಾ। ದೀಪಕ್ ರೈ, ಬಾಲಚಂದ್ರ ರೈ ಬೆದ್ರುಮಾರು, ಸಂದೀಪ್ ರೈ, ಸುಬೋಧ್ ರೈ, ಕರುಣಾಕರ ರೈ, ಸಾರ್ಥಕ್ ರೈ, ವಿನೋದ್ ಶೆಟ್ಟಿ ವಿವೇಕ್ ರೈ, ಬ್ರಿಜೇಶ್ ಶೆಟ್ಟಿ ಅರುಣ್ ರೈ, ಸದಾಶಿವ ರೈ ಬೆಳ್ಳಿಪ್ಪಾಡಿ, ಪ್ರತೀಕ್ ಶೆಟ್ಟಿ, ಚಂದ್ರಶೇಖರ್ ರೈ, ವಜ್ರದೀಪಕ್ ರೈ, ಸತೀಶ್ಚಂದ್ರ ರೈ, ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು. ಸುಭಾಶ್ಚಂದ್ರ ರೈ ಪದ್ಯೋಡಿ ಸ್ವಾಗತಿಸಿ, ಶ್ರೀರಾಮ್ ಪಕ್ಕಳ ವಂದಿಸಿದರು.

RELATED ARTICLES
- Advertisment -
Google search engine

Most Popular