Tuesday, January 14, 2025
Homeಮಡಿಕೇರಿಪೂಂಛ್‌ನಲ್ಲಿ ಕಂದಕಕ್ಕೆ ಉರುಳಿದ್ದ ಸೇನಾ ವಾಹನ: ಕೊಡಗು ಯೋಧ ದಿವಿನ್ ಸ್ಥಿತಿ ಗಂಭೀರ

ಪೂಂಛ್‌ನಲ್ಲಿ ಕಂದಕಕ್ಕೆ ಉರುಳಿದ್ದ ಸೇನಾ ವಾಹನ: ಕೊಡಗು ಯೋಧ ದಿವಿನ್ ಸ್ಥಿತಿ ಗಂಭೀರ

ಕೊಡಗು: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಸೇನಾ ವಾಹನವು ಮಂಗಳವಾರ ಕಂದಕಕ್ಕೆ ಉರುಳಿ ಬಿದ್ದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರದ ಬಳಿಯ ಮಾಲಂಬಿ ಗ್ರಾಮದ ಯೋಧ ಪಿ.ಪಿ.ದಿವಿನ್ ಅವರ ಸ್ಥಿತಿ ಗಂಭೀರವಾಗಿದೆ.

ದಿವಿನ್ ಪೋಷಕರು ಪುತ್ರನನ್ನು ನೋಡಲು ಜಮ್ಮವಿನ ಉದಮ್‌ಪುರಕ್ಕೆ ತೆರಳಿದ್ದಾರೆ. ಗ್ರಾಮದ ಪಳಂಗೋಟು ಪ್ರಕಾಶ್ ಮತ್ತು ಜಯ ದಂಪತಿಯ ಏಕೈಕ ಪುತ್ರ ದಿವಿನ್ 10 ವರ್ಷಗಳ ಹಿಂದೆ ಭೂ ಸೇನೆಗೆ ಸೇರಿದ್ದರು.

ದಿವಿನ್‌ ಅವರಿಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಯುವತಿಯೊಂದಿಗೆ ಮದುವೆ ನಿಶ್ಚಯವಾಗಿದ್ದು, ಫೆಬ್ರವರಿಯಲ್ಲಿ ಮದುವೆ ಸಮಾರಂಭ ನಿಗದಿಯಾಗಿದೆ.
ತನ್ನ ಕ್ಷೇತ್ರದ ಸೈನಿಕನ ಆರೋಗ್ಯ ಸ್ಥಿತಿ ಬಗ್ಗೆ ಶಾಸಕ ಮಂಥರ್ ಗೌಡ, ದೂರವಾಣಿ ಮೂಲಕ ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular