ಮೂಲ್ಕಿ : ಎಳವೆಯಲ್ಲಿಯೇ ಮಕ್ಕಳಿಗೆ ಶಿಸ್ತನ್ನು ಕಲಿಸುವ ಜೊತೆಗೆ ಮಕ್ಕಳು ದುಷ್ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕಿಲ್ಪಾಡಿ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷ ಗೋಪಿನಾಥ ಪಡಂಗ ಅವರು ಹೇಳಿದರು. ಅವರು ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ, ತಾಲೂಕು ಪಂಚಾಯತ್ ಹಾಗೂ ಕಿಲ್ಪಾಡಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಪೋಷಣ ಅಭಿಯಾನ ಯೋಜನೆಯಡಿಯಲ್ಲಿ ಕಿಲ್ಪಾಡಿ ಅಂಗನವಾಡಿ ಕೇಂದ್ರದಲ್ಲಿ ನಡೆದ
“ಆರೋಗ್ಯ ಅಮೃತ ಅಭಿಯಾನ” ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸುರಕ್ಷಣಾಧಿಕಾರಿ ಸುಮಲತಾ, ಆಯುಷ್ ಇಲಾಖೆಯ ಸುಜಾತ ಶೆಟ್ಟಿ ಯೋಗದ ಬಗ್ಗೆ, ಯುನಾನಿ ಆಸ್ಪತ್ರೆಯ ಡಾ. ಮಹಮ್ಮದ್ ಅಶ್ಫಕ್ ಪೌಷ್ಟಿಕಾಂಶ ದ ಬಗ್ಗೆ, ಸಮಾಜ ಸೇವಕಿ ಲಲಿತಾ ಭಾಸ್ಕರ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಈ ಸಂದರ್ಭ ಬಾಲವಿಕಾಸ ಕಮಿಟಿ ಅಧ್ಯಕ್ಷೆ ಪ್ರಿಯಾ ರಾಜಕುಮಾರ, ಶಾಲಾ ಮುಖ್ಯ ಶಿಕ್ಷಕಿ ಪ್ರಫುಲ್ಲ, ತಾಲೂಕು ಸಂಯೋಜಕಿ ಅನ್ವಿತಾ, ಶರ್ಲಿನ್, ನಾಗಿಣಿ, ಆಶಾ ಕಾರ್ಯಕರ್ತೆಯರಾದ ಮಂಜುಳಾ ಸುಪ್ರಭಾ ಶಶಿಕಲಾ, ಅಂಗನವಾಡಿ ಕಾರ್ಯಕರ್ತೆ ಜಲಜ, ಸಹಾಯಕಿ ವಸಂತಿ ಉಪಸ್ಥಿತರಿದ್ದರು.