Saturday, July 20, 2024
Homeರಾಜ್ಯರೇಡಿಯೊ ಮಣಿಪಾಲ್ ನಲ್ಲಿ ಆರೋಗ್ಯ ದರ್ಶನ

ರೇಡಿಯೊ ಮಣಿಪಾಲ್ ನಲ್ಲಿ ಆರೋಗ್ಯ ದರ್ಶನ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹಯೋಗದಲ್ಲಿ ರೇಡಿಯೋ ಮಣಿಪಾಲ್ ಅರ್ಪಿಸುತ್ತಿದೆ ಆರೋಗ್ಯ ದರ್ಶನ ಕಾರ್ಯಕ್ರಮ. ಮೇ ತಿಂಗಳ ದಿನಾಂಕ 15ರಂದು ಬುಧವಾರ ಸಂಜೆ 5 ಗಂಟೆಗೆ ಪ್ರಸಾರಗೊಳ್ಳುವ ಆರೋಗ್ಯ ದರ್ಶನ ಸಂಚಿಕೆಯಲ್ಲಿ ಹರ್ನಿಯ ಸಮಸ್ಯೆ ಮತ್ತು ಚಿಕಿತ್ಸಾವಿಧಾನಗಳು ಎನ್ನುವ ವಿಷಯದ ಕುರಿತು ಮಣಿಪಾಲ ಮಾಹೆಯ ಕಸ್ತೂರ್ಬಾ ಮೆಡಿಕಲ್ ಕಾಲೇಜ್ ಆಂಡ್ ಹಾಸ್ಪಿಟಲ್ ನ ಜನರಲ್ ಸರ್ಜರಿ ವಿಭಾಗದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಸುನಿಲ್ ಕೃಷ್ಣ ಎಂ ಅವರು ವಿಶೇಷ ಮಾಹಿತಿ ನೀಡಲಿದ್ದಾರೆ. ಇದು ಮೇ 16ರಂದು ಗುರುವಾರ ಮಧ್ಯಾಹ್ನ 1 ಗಂಟೆಗೆ ಮರುಪ್ರಸಾರವಾಗಲಿದೆ. ಆಂಡ್ರಾಯ್ಡ್ ಫೋನ್ ನ https://play.google.com/store/apps/details?id=com.atc.radiomanipal ಮತ್ತು ಐಫೋನ್ ನ https://itunes.apple.com/app/id6447231815 ಲಿಂಕ್ ಮೂಲಕ ರೇಡಿಯೊ ಮಣಿಪಾಲ್ ಆಪ್ ಡೌನ್‌ಲೋಡ್ ಮಾಡಿ ಈ ಕಾರ್ಯಕ್ರಮ ಕೇಳಬಹುದಾಗಿದೆ ಎಂದು ಮಣಿಪಾಲ ಮಾಹೆಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಕ್ಯಾಂಪಸ್ ನಲ್ಲಿರುವ ರೇಡಿಯೊ ಮಣಿಪಾಲ್ ಸಮುದಾಯ ಬಾನುಲಿ ಕೇಂದ್ರದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular