Saturday, January 18, 2025
Homeಚಾಮರಾಜನಗರಕೊಳ್ಳೇಗಾಲದಲ್ಲಿ ಹುಲಿ ಉಗುರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಕೊಳ್ಳೇಗಾಲದಲ್ಲಿ ಹುಲಿ ಉಗುರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

ಚಾಮರಾಜನಗರ: ಹುಲಿ ಉಗುರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ನಡೆದಿದೆ.
ಬಂಧಿತ ಆರೋಪಿಗಳನ್ನು ಮೈಸೂರು ಜಿಲ್ಲೆಯ ದೊಡ್ಡ ಹರವೆ ಗ್ರಾಮದ ನವೀನ್ ಕುಮಾರ್ ಹಾಗೂ ಹೆಚ್.ಡಿ ಕೋಟೆ ಆಲನಹಳ್ಳಿಯ ಕುಮಾರ ನಾಯಕ್ ಗುರುತಿಸಲಾಗಿದೆ.
ಆರೋಪಿಗಳು ಬೈಕ್‌ನಲ್ಲಿ ಹುಲಿ ಉಗುರು ಸಾಗಿಸುತ್ತಿದ್ದ ವೇಳೆ ಅರಣ್ಯ ಸಂಚಾರ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ನಾಲ್ಕು ಹುಲಿ ಉಗುರುಗಳನ್ನು ವಶಕ್ಕೆ ಪಡೆಯಲಾಗಿದೆ.

RELATED ARTICLES
- Advertisment -
Google search engine

Most Popular