Saturday, December 14, 2024
Homeದಾವಣಗೆರೆಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಜೀವನಕ್ಕೆ ಸ್ಪೂರ್ತಿ-ಮಲ್ಲಿಕಾರ್ಜುನ ಕಡಕೋಳ

ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಜೀವನಕ್ಕೆ ಸ್ಪೂರ್ತಿ-ಮಲ್ಲಿಕಾರ್ಜುನ ಕಡಕೋಳ

ದಾವಣಗೆರೆ-ಅಕ್ಟೋಬರ್
ವಾಣಿಜ್ಯ ನಗರಿ ದಾವಣಗೆರೆಯ ಸಾಂಸ್ಕೃತಿಕ ನಗರಿಯಾಗಿ ಪರಿವರ್ತನೆಯಾಗುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಕಳೆದ ಮೂರುವರೆ ದಶಕಗಳಿಂದ ಕಠಿಣ ಪರಿಶ್ರಮ ನಿಜಕ್ಕೂ ಮೆಚ್ಚುಗೆ. ಕರ್ನಾಟಕದ ಕರಾವಳಿ ಜಿಲ್ಲೆಗಳ ಅಪ್ಪಟ ಕನ್ನಡದ ಆರಾಧನಾ ಕಲೆ ಯಕ್ಷಗಾನವನ್ನು ಮೊಟ್ಟ ಮೊದಲು ದಾವಣಗೆರೆಗೆ ಪರಿಚಯಿಸಿದ್ದು ಯಕ್ಷರಂಗ, ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ನಮ್ಮ ನಿಮ್ಮೆಲ್ಲರ ಜೀವನಕ್ಕೆ ಸ್ಪೂರ್ತಿ. ಯಾವುದೇ ಸರ್ಕಾರದ, ಇಲಾಖೆಗಳ ಅನುದಾನವಿಲ್ಲದೇ ಸ್ವತಂತ್ರವಾಗಿ ನಡೆದುಕೊಂಡ ಬಂದ ಈ ಸಂಸ್ಥೆಗಳ ರೂವಾರಿ ಸಾಲಿಗ್ರಾಮ ಗಣೇಶ್ ಶೆಣೈ ಸಾಧನೆ ಇತರರಿಗೆ ಮಾದರಿ ಎಂದು ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣ ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ
“ಸಾಂಸ್ಕೃತಿಕ ಸಂಭ್ರಮ” ಸಮಾರಂಭದ ಪ್ರಯುಕ್ತ ಕೆ.ಬಿ.ಬಡಾವಣೆಯ ಲಾಯರ್ ರಸ್ತೆಯಲ್ಲಿರುವ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ನಿನ್ನೆ ತಾನೇ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಮಾನವನ ಜೀವನಕ್ಕೆ ಬೆಳೆಕುಕೊಡುವ ದೀಪಾವಳಿ ಕನ್ನಡ
ನಾಡು, ನುಡಿಯ ಕಾಯಕ ಕೇವಲ ರಾಜ್ಯೊತ್ಸವಕ್ಕೆ ಸೀಮಿತವಾಗದೇ ಹಿರಿಯ ಕವಿ ನಿಸ್ಸಾರ್ ಅಹಮದ್ ಹೇಳಿದಂತೆ ಕನ್ನಡ ನಿತ್ಯೋತ್ಸವವಾಗಲಿ ಎಂದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಪತ್ರಕರ್ತ ಇ.ಎಂ. ಮಂಜುನಾಥ್, ಯಕ್ಷರಂಗ ಯಕ್ಷಗಾನ ಸಂಸ್ಥೆಯ ಅಧ್ಯಕ್ಷರಾದ ಮಲ್ಯಾಡಿ ಪ್ರಭಾಕರ ಶೆಟ್ಟಿ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಹೇಮಾ ಶಾಂತಪ್ಪ ಪೂಜಾರಿಯವರು ಮಾತನಾಡಿ, ಸಂಘಟನೆಗಳನ್ನು ನಿರಂತರ ನಿರ್ವಹಿಸುವುದು ಸುಲಭದ ಮಾತಲ್ಲ ತಾಳ್ಮೆಯಿಂದ ಸಂಕುಚಿತ ಭಾವನೆ ಬಿಟ್ಟು ವಿಶಾಲವಾದ ಸೇವಾಮನೋಭಾವನೆಯೊಂದಿಗೆ ನಿರ್ವಹಿಸಿದಾಗ ಸಂಸ್ಥೆಗಳು ಮುಂದುವರೆಯುತ್ತವೆ ಎಂದರು. ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಖಿನ್ನತೆಯ ಮನಸ್ಸುಗಳನ್ನು ಪುಳಕಿತಗೊಳಿವುದೇ ಈ ಸಾಂಸ್ಕೃತಿಕ ಚಟುವಟಿಕೆಗಳು. ಕೆಲವರ ಅನಾರೋಗ್ಯಗಳಿಗೆ ಇಂತಹ ಧಾರ್ಮಿಕ, ಸಾಮಾಜಿಕ ಸೇವಾ ಕಾಯಕಗಳೇ ದಿವ್ಯಾಔಷಧಿ ಎಂದರು. ನೂತನವಾಗಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಿನೇಶ್ ಕೆ. ಶೆಟ್ಟಿ, ಬೆಂಗಳೂರಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರಾದ ಇ.ಎಂ. ಮಂಜುನಾಥ್, ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣ ನಿರ್ದೇಶಕರಾದ ಮಲ್ಲಿಕಾರ್ಜುನ ಕಡಕೋಳ ಇವರೆಲ್ಲರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಲಾಕುಂಚ ವಿವಿಧ ಬಡಾವಣೆಗಳ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ, ವಿ.ಕೃಷ್ಣಮೂರ್ತಿ, ಕಲಾಕುಂಚದ ಅಧ್ಯಕ್ಷರಾದ ಕೆ.ಹೆಚ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್, ಯಕ್ಷರಂಗದ ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್ ಕುಮಾರ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು. ವಿವಿಧ ಉಚಿತ ಸ್ಪರ್ಧೆಗಳ ವಿಜೇತರಾದ ಮಹಿಳೆಯರಿಗೆ, ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಚಂದ್ರಶೇಖರ ಅಡಿಗ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು. ಮುಕ್ತಾ ಶ್ರೀನಿವಾಸ್ ಪ್ರಭುರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಮಾರಂಭಕ್ಕೆ ಶಾರದಾ ಕೃಷ್ಣಪ್ರಭು ಸ್ವಾಗತಿಸಿದರು. ಕೊನೆಯಲ್ಲಿ ಶಾರದಮ್ಮ ಶಿವನಪ್ಪ ವಂದಿಸಿದರು.

RELATED ARTICLES
- Advertisment -
Google search engine

Most Popular