ದಾವಣಗೆರೆ: ದಾವಣಗೆರೆಯ ರಂಗಕಲಾ ಆಕಾಡೆಮಿಯಿಂದ ಡಿಸೆಂಬರ್ ೧೪ ರಂದು ನಗರದ ಪಿ.ಜೆ. ಬಡಾವಣೆಯ ಎ.ವಿ.ಕೆ.ಕಾಲೇಜು ರಸ್ತೆಯಲ್ಲಿರುವ ರಂಗ ಮಹಲ್‌ನಲ್ಲಿ ಅಪರಾಹ್ನ ೩ ರಿಂದ ಸಂಜೆ ೫ ರವರೆಗೆ ಆರ್ಟ್ ವರ್ಕ್ಶಾಪ್ ಹಮ್ಮಿಕೊಳ್ಳಲಾಗಿದೆ ಎಂದು ಹಿರಿಯ ಕಲಾವಿದ ಮೂರ್ತಿಯವರು ತಿಳಿಸಿದ್ದಾರೆ.
ಹಿರಿಯರಲ್ಲಿ, ಕಿರಿಯರಲ್ಲಿ ಕಲಾ ಪ್ರಕಾರಗಳನ್ನು ಅವರಲ್ಲಿ ಹುದುಗಿರುವ ಕಲಾ ಪ್ರತಿಭೆಗಳನ್ನು ಅನಾವರಣಗೊಳಿಸುವ ಸದುದ್ದೇಶದಿಂದ ನಡೆಸುವ ಈ ಕಾರ್ಯಕ್ರಮದಲ್ಲಿ ಪೆಟಲ್ ಪೈಂಟಿಂಗ್, ಕ್ಲಿಲ್ಲಿಂಗ್ ಆರ್ಟ್, ಮಂಡಲ ಆರ್ಟ್, ಬ್ರಷ್ ಲೆಟರಿಂಗ್ ಮತ್ತು ಡಿಸೈನ್ ಗ್ಲಿಟ್ಟರ್ ಕಲಾ ಪ್ರಕಾರಗಳ ತರಬೇತಿ ನೀಡಲಾಗುವುದು. ಯಾವುದೇ ವಯೋಮಾನದ ಮಿತಿ ಇಲ್ಲದೇ ಕಲಾಸಕ್ತರು ಯಾರಾದರೂ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ 9980868443, 9844467207 ಈ ಸನೀಹವಾಣಿಗಳಿಗೆ ಸಂಪರ್ಕಿಸಿ ಎಂದು ಯುವ ಕಲಾವಿದೆ ಕುಮಾರಿ ನೇಹಾ ಚನ್ನಗಿರಿ ವಿನಂತಿಸಿದ್ದಾರೆ.