26.6 C
Udupi
Tuesday, November 29, 2022
spot_img

ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕಲಾಸಾಧಕಿ ಸವಿತಾ ಕೋಡಂದೂರ್ ಅವರಿಗೆ ಸನ್ಮಾನ

ಅಮ್ಮುಂಜೆ ಅನುದಾನಿತ ಹಿಪ್ರಾ ಶಾಲೆ ಯ ವೀರಯೋಧ ಯಾದವ್ ಪೂಜಾರಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಎಸಿ ಭಂಡಾರಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಸಾಧಕರನ್ನು  ಶಾಲು ,ಹಾರ ,ಪೇಟ, ಸ್ಮರಣಿಕೆ ಪುಸ್ತಕ ಅಭಿನಂದನಾ ಪತ್ರಗಳನ್ನು ಇಟ್ಟು ಸನ್ಮಾನಿಸಲಾಯಿತು.

   ಸಮ್ಮೆಮೇಳನ ಅಧ್ಯಕ್ಷರಾದ   ಹಿರಿಯ ಪತ್ರಕರ್ತ ಪ್ರೊ   ಕೆ ಬಾಲಕೃಷ್ಣಗಟ್ಟಿ ದ.ಕ ಕ.ಸಾ.ಪ ಅಧ್ಯಕ್ಷರಾದ ಡಾ ಎಂಪಿ ಶ್ರೀನಾಥ್ ಬಂಟ್ವಾಳ ತಾಲೂಕು ಕ.ಸಾ.ಪ ಅಧ್ಯಕ್ಷರಾದ ವಿಶ್ವನಾಥ್ ಕಾರ್ಯದರ್ಶಿ ರಾಜೇಶ್ವರಿ ರಾಷ್ಟ್ರಪ್ರಶಸ್ತಿ ವಿಜೇತ ಜೇನು ಕೃಷಿ ಕಲಾ ಪ್ರೋತ್ಸಾಹಕರಾದ ಕುಮಾರ್ ಪೆರ್ನಾಜೆ  ನ್ಯಾಯವಾದಿ ಅಶ್ವಿನಿ ಕುಮಾರ್ ರೈ ಕಸಾಪ   ಗೌರವ ಕಾರ್ಯದರ್ಶಿಗಳಾದ    ರಮಾನಂದ ನೂಜಿಪ್ಪಾಡಿ ಸ್ವಾಗತ ಸಮಿತಿಯ ಅಧ್ಯಕ್ಷರಾದ ಉಮೇಶ್ ಸಾಲ್ಯನ್ ಬೆಂಜನ ಪದವು ಪ್ರಧಾನ ಸಂಚಾಲಕ  ಅಬೂಬಕರ್ ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಮನಾ ಆಚಾರ್ಯ ಪ್ರಧಾನ ಕಾರ್ಯದರ್ಶಿ ಜನಾರ್ದನ ಅಮ್ಮುನ್ಗೆ ವಿ. ಸು ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

      ಚಿತ್ರದ ಬಲಬದಿಯಿಂದ ಎರಡನೆಯವರು ಸವಿತಾ ಕೊದಂದೂರು 

        ಗ್ರಾಮೀಣ ಕಲಾಪ್ರತಿಭೆ: ಕೃಷಿ ಜೊತೆ ಸಂಗೀತ ಶಾಸ್ತ್ರೀಯ, ಸುಗಮ ಸಂಗೀತ, ಸ್ಯಾಕ್ಸೋಫೋನ್ ಜೊತೆ ಗಾನ ವೈಭವ, ಸಪ್ತ ಮಾತೃಕೆಯರ ಗೀತ ಗಾಯನ, ಪುಟಾಣಿ ಮಕ್ಕಳಿಗೆ ಸಂಗೀತ ಶಾಲೆ, ಕುಮಾರ್ ಪೆರ್ನಾಜೆಯವರ ಸ್ವರ ಸಿಂಚನ ಕಲಾ ತಂಡದ ಮುಖ್ಯ ಹಾಡುಗಾರ್ತಿಯಾದ ಇವರು ಸಂಗೀತ ಲೋಕಕ್ಕೆ ನಮ್ಮನ್ನೆಲ್ಲಾ ಕರೆದೊಯ್ಯುವುದಲ್ಲದೆ ಪೇಟೆ, ಪಟ್ಟಣದ ಕಲಾವಿದರಿಂದ ತಾನೇನು ಕಡಿಮೆಯಲ್ಲ ಎಂದು ಸಾಧಿಸಿದ ಸವಿತಾ ಕೋಡಂದೂರು ಇವರಿಗೆ ಪರ್ನಾಜೆ ಪ್ರಶಸ್ತಿ, ಗಡಿನಾಡ ಧ್ವನಿ, ಸುಮಸೌರಭ ಪ್ರಶಸ್ತಿ ಕರಾವಳಿ ರತ್ನ ಸಹಿತ ಹಲವಾರು ವಿದ್ವಾನ್ ಬಳ್ಳಪದವು ಯೋಗೀಶ್ ಶರ್ಮಾರ ಶಿಷ್ಯ, ನೂಜಯ ವೇ ಮೂ ಕೇಶವ ಭಟ್ ಮತ್ತು ದೇವಕಿ ದಂಪತಿಗಳ ಪುತ್ರಿ. ಪತಿ ‘ವಿಟ್ಲ ಸುಪ್ರಜಿತ್: ಐ ಟಿ ಐ. ಕಾಲೇಜು ಮಾಜಿ ಪ್ರಾಂಶುಪಾಲರು ಕೋಡಂದೂರು ರಘುರಾಮ್ ಶಾಸ್ತ್ರೀ, 

ಇವರು ಸ್ವರ ಸಿಂಚನ ಸಂಗೀತ ಶಾಲೆ ವಿಟ್ಲ ಪಡಿಬಾಗಿಲು ಇಲ್ಲಿನ ವಿದ್ಯಾರ್ಥಿಗಳು ಶೇ 100 ಫಲಿತಾಂಶ ಗಳಿಸುತ್ತಿದ್ದು ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.  

ಹಲವಾರು ಕಾರ್ಯಗಾರ ಶಾಲೆಗಳಲ್ಲೂ ನೀಡಿದ್ದು ಸಂಗೀತದ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಕರ್ನಾಟಕ ಸಂಗೀತ ಪರೀಕ್ಷೆಯ ಪರೀಕ್ಷಕರಾಗಿ ನಿರ್ವಹಿಸಿದ್ದಾರೆ ಸಾಧಕೀಯ ಮಕುಟಕ್ಕೆ ಇನ್ನೊಂದು ಗರಿ. ಬಿ ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles