ಮಂದಾರ್ತಿ : ಆರೂರು ಮಹಾತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನೂತನ ರಥ ಸಮರ್ಪಣೆ ಹಾಗೂ ರಥೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಎ. ರತ್ನಾಕರ್ ಭಟ್ ಕ್ಷಣಾ ಅವರ ನೇತೃತ್ವದಲ್ಲಿ ವೇದಮೂರ್ತಿ ಸುಬ್ರಹ್ಮಣ್ಯ ಭಟ್ ಹಾಗೂ ನಾರಾಯಣ ಭಟ್ ಇವರ ಪ್ರಾರ್ಥನೆಯೊಂದಿಗೆ ದೇವಸ್ಥಾನದ ಗೌರವ ಸಲಹೆಗಾರ ಪರಾಗ ಭಟ್ ಬಿಡುಗಡೆಗೊಳಿಸಿದರು.
ಆರೂರು ಮಹಾತೋಭಾರ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಸುಂದರವಾದ ಕೆತ್ತನೆಯಿಂದ ಕೂಡಿದ ನೂತನ ರಥದ ನಿರ್ಮಾಣ ಕಾರ್ಯ ಬರದಿಂದ ಸಾಗುತ್ತಿದ್ದು, ಮೇ 1ರಂದು ಬ್ರಹ್ಮಾವರ ಮಾರ್ಗವಾಗಿ ಕುಂಜಾಲಿನಿಂದ ಸಂಜೆ ಸಕಲ ಬಿರುದಾವಳಿ ಮೆರವಣಿಗೆಯೊಂದಿಗೆ ನೂತನ ರಥ ಆರೂರು ಪುರ ಪ್ರವೇಶ ಮಾಡಲಿದೆ. ಮೇ 3 ರಂದು ವಾಸ್ತು ರಾಕ್ಷೋಘ್ನ ಹೋಮ, ಮೇ 4 ರಂದು ಕಲಶಾಭಿಷೇಕ ಮೇ 10 ರಂದು ಬೆಳಗ್ಗೆ ಧ್ವಜಾರೋಹಣ ಸಂಜೆ 5ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮೇ 11 ರಂದು ದೊಡ್ಡರಂಗ ಪೂಜೆ ಮೇ 12 ರಂದು ಮನ್ಮಹಾರಥೋತ್ಸವ ನಡೆಯಲಿದೆ.
ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಆರೂರು ಪಂಚಾಯಿತಿ ಅಧ್ಯಕ್ಷ ಗುರುರಾಜ್ ರಾವ್, ಅರ್ಚಕ ಗಣಪತಿ ಭಟ್ ಶ್ರೀನಿವಾಸ್ ಭಟ್, ಶ್ರೀಪತಿ ಭಟ್, ವಿಜಯಶೆಟ್ಟಿ ಕುರುಡುಂಜಿ ಕೃಷ್ಣ ನಾಯಕ್, ಅನಂತ ಸೇರಿಗಾರ ಉಪಸ್ಥಿತರಿದ್ದರು.