26.6 C
Udupi
Tuesday, November 29, 2022
spot_img

ಸಂಪ್ರದಾಯದಂತೆ ಕಿರೆಂ ಚರ್ಚ್ ನಲ್ಲಿ ಮೂರು ಬಂಟ ಮನೆತನದವರಿಗೆ ಸನ್ಮಾನ

ಕರಾವಳಿಗೆ ಟಿಪ್ಪು ಸುಲ್ತಾನ್ ದಾಳಿ ಮಡಿದ ಸಂದರ್ಭ ತಮ್ಮನ್ನು ಹಾಗೂ ತಮ್ಮ ಚರ್ಚ್ ನ್ನು ರಕ್ಷಿಸಿದ ನೆನಪಿಗೊಸ್ಕರ ಪ್ರತೀ ವರ್ಷ ಪ್ರತಿಷ್ಟಿತ ಮೂರು ಕುಟುಂಬಗಳಿಗೆ ಕೈಸ್ತ ಬಾಂಧವರು ಗೌರವ ಸಲ್ಲಿಸುವ ಸಂಪ್ರದಾಯ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯಲ್ಲಿ ಕಿರೆಂ ಚರ್ಚ್ ನಲ್ಲಿ ನಡೆಯುತ್ತಿದೆ. ಸಂಪ್ರದಾಯದಂತೆ ಈ ಬಾರಿಯೂ ಸ್ಥಳೀಯ ಬಂಟ ಸಮುದಾಯದ ಮೂರು ಮನೆತನಗಳಾದ ಐಕಳ ಬಾವ, ತಾಳಿಪಾಡಿ ಗುತ್ತು ಹಾಗೂ ಏಳಿಂಜೆ ಅಂಗಡಿಗುತ್ತು ಮನೆತನದವರಾದ ಐಕಳಭಾವ ಜಯಪಾಲ ಶೆಟ್ಟಿ, ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ, ಬಾಸ್ಕರ ಶೆಟ್ಟಿ ಏಳಿಂಜೆ, ಪ್ರಸಾದ್ ಏಳಿಂಜೆ, ತಾಳಿಪಾಡಿಗುತ್ತು ದಿನೇಶ್ ಭಂಡ್ರಿಯಾಲ್, ಸುಕುಮಾರ ಶೆಟ್ಟಿ ಗೌರವವನ್ನು ಪದೆದುಕೊಂಡರು. ಈ ಸಂಧರ್ಭ ಮಂಗಳೂರು ಧರ್ಮಪ್ರಾಂತ್ಯದ ವಿಗಾರ್ ಜೆರಾಲ್ ಮ್ಯಾಕ್ಸಿಜಾರ್ ಮಾಕ್ಸಿಂ ನೊರೋನ್ಹಾ. ಚರ್ಚ್ ಧರ್ಮಗುರುಗಳಾದ ಪಾ.ಓಸ್ವಾಡ್ ಮೊಂತೇರೋ, ಪಾ. ಸುನೀಲ್ ಡಿಸೋಜ , ಪಾ. ಮ್ಯಾಕ್ಸ್ಂ ನೊರೋನಾ, ಪಾಲನಾ ಮಂಡಳಿಯ ಉಪಾಧ್ಯ ಸ್ಟೀವನ್ ಡಿಕುನ್ನ, ಕಾರ್ಯದರ್ಶಿ ಶೋಭಾ ಕ್ರಾಸ್ತ, ಅಂತರ್ಧರ್ಮೀಯ ಹಾಗೂ ಶಾಂತಿ ಮತ್ತು ನೀತಿ ಆಯೋಗ ಪ್ರಮುಖರಾದ ಪೌಲ್ ಮಿರಾಂದ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,585FollowersFollow
0SubscribersSubscribe
- Advertisement -spot_img

Latest Articles