ಉಡುಪಿ : ದಕ್ಷಿಣ ಪಂಢರಾಪುರ ಖ್ಯಾತಿಯ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆದು ಬರುತ್ತಿರುವ ಆಷಾಢ ಏಕಾದಶಿಯ ಅಖಂಡ ಭಜನಾ ಏಕಾಹ ಮಹೋತ್ಸವವು ಶ್ರೀ ದೇವತಾ ಪ್ರಾರ್ಥನೆ ಮತ್ತು ದೀಪ ಪ್ರಜ್ವಾಲನದಿಂದ ಬೆಳಿಗ್ಗೆ ಪ್ರಾರಂಭಗೊಂಡಿತು. ಈ ಸಂದರ್ಭದಲ್ಲಿ ಆಡಳಿತೆ ಮೊಕ್ತೇಸರ ಭದ್ರಗಿರಿ ಪಾಂಡುರಂಗ ಆಚಾರ್ಯ, ಗೌರಾವಾಧ್ಯಕ್ಷ ನಾಗರಮಠ ಮಂಜುನಾಥ ನಾಯಕ್ ಆಡಳಿತ ಮತ್ತು ವಿಶ್ವಸ್ಥ ಮಂಡಳಿಯ ಸದಸ್ಯರಾದ ಸತೀಶ ಕಿಣಿ ಬೆಳ್ವೆ, ಪ್ರಭಾಕರ ಭಟ್, ಗಣೇಶ ಪೈ ಪರ್ಕಳ, ಗಿರಿಧರ ರಾವ್ , ಕೆ ಸಿ ಪ್ರಭು, ಭದ್ರಗಿರಿ ವಿಠ್ಠಲದಾಸ ಆಚಾರ್ಯ,ಭದ್ರಗಿರಿ ರಘುವೀರ ಆಚಾರ್ಯ ಭದ್ರಗಿರಿ ವೀರವಿಠ್ಠಲ ಭಜನಾ ಮಂಡಳಿಯ ಸದಸ್ಯರಾದ ಸಿ.ಕೃಷ್ಣ ಪೈ, ಕೆ.ಪಿ.ಕಿಣಿ , ಸಿ.ರತ್ನಾಕರ ಪೈ ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ ಭಟ್, ಕೃಷ್ಣಾನಂದ ಶರ್ಮ ಮತ್ತು ಅರ್ಚಕರಾದ ಸದಾನಂದ ಆಚಾರ್ಯ ಹಾಗೂ ವೆಂಕಟೇಶ ಶೆಣೈ ,ಗಣೇಶ ಭಟ್, ಮಹೇಶ ಆಚಾರ್ಯ, ಲತಾ ಆಚಾರ್ಯ, ಆಶಾ ಆಚಾರ್ಯ, ಪ್ರೇಮಲತಾ ರಾವ್ ಮತ್ತಿತರ ಭಜಕರು ಉಪಸ್ಥಿತರಿದ್ದರು.

ಅಖಂಡ ಭಜನಾ ಮಹೋತ್ಸವದಲ್ಲಿ ಊರ ಪರ ಊರಿನ 14 ಭಜನಾ ಮಂಡಳಿಗಳು ಪಾಲ್ಗೊಂಡು ಭಜನಾ ಸೇವೆ ಸಲ್ಲಿಸಿದವು. ಉಮೇಶ ಮಲ್ಯರಿಂದ ರಾತ್ರಿ ವಿಶೇಷ ನರ್ತನ ಸೇವೆ ನಡೆಯಿತು. ರಾತ್ರಿಯ ಪ್ರಸನ್ನ ಪೂಜೆಯಿಂದ ಭಜನಾ ಮಂಗಲೋತ್ಸವ ಸಂಪನ್ನಗೊಂಡಿತು.