ಗೋವಾ: ಪೋರ್ಚುಗೀಸರಿಂದ ಸ್ವಾತಂತ್ರ ದೊರಕಿದ ದಿನವಾದ ಡಿ. 19ರಂದು ಉತ್ತಮ ಸಾಮಾಜಿಕ ಸೇವೆ ಸಲ್ಲಿಸಿರುವ ತುಳುನಾಡಿನ ಕಾರ್ಕಳ ತಾಲೂಕಿನ ಬಜಗೋಳಿ ಅರಂತಬೆಟ್ಟು ಮುಡಾರು ಮೂಲದ ಅಶೋಕ್ ಕೃಷ್ಣ ಶೆಟ್ಟಿ ಅವರ ಸಮಾಜ ಸೇವೆ ಗುರುತಿಸಿ ಮೊದಲ ಬಾರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಇವರು ಬಿಜೆಪಿಯ ಕೇಂದ್ರ ಸಚಿವರೊಂದಿಗೆ ಮತ್ತು ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕಾರ್ ಹಾಗೂ ಹಲವು ರಾಜಕೀಯ ಮುಖಂಡರ ಜೊತೆ ಗುರುತಿಸಿಕೊಂಡಿದ್ದು, ಪಕ್ಷದಲ್ಲಿ ಯಾವುದೇ ಹುದ್ದೆ ಬಯಸದೇ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯಾರೇ ಬಂದು ಸಹಾಯ ಕೇಳಿದರೂ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದರು. ಅಲ್ಲದೆ, ತುಳುಕೂಟ ಗೋವಾ ಹಾಗೂ ಪಟ್ಲ ಫೌಂಡೇಶನ್‌ನ ಸಂಯೋಜಕರಾಗಿದ್ದಾರೆ.
ತುಳುವರಿಗೆ ಈ ಪ್ರಶಸ್ತಿ ದೊರಕುವುದು ಇದೇ ಮೊದಲು. ಅರಂತಬೆಟ್ಟು ಮುಡಾರಿನ ಅಶೋಕ್ ಕೃಷ್ಣ ಶೆಟ್ಟಿ ಅವರು ಕೃಷ್ಣ ಚೌಟ, ಪ್ರೇಮಾ ಶೆಟ್ಟಿ ದಂಪತಿಯ ಪುತ್ರ ಹಾಗೂ ಕಾರ್ಕಳ ತಾಲೂಕಿನ ಬಜಗೋಳಿ ಪಂಚಾಯತ್‌ನ ಉಪಾಧ್ಯಕ್ಷರಾದ ಅರುಣ್ ಶೆಟ್ಟಿ ಅವರ ಸಹೋದರರಾಗಿದ್ದಾರೆ.