Monday, July 15, 2024
Homeಧಾರ್ಮಿಕಏ.14 ರಂದು ಶ್ರೀಕ್ಷೇತ್ರ ಕೂಡ್ಲು ಬಾಡಬೆಟ್ಟು ಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ

ಏ.14 ರಂದು ಶ್ರೀಕ್ಷೇತ್ರ ಕೂಡ್ಲು ಬಾಡಬೆಟ್ಟು ಕ್ಷೇತ್ರದಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ

ಕುಂದಾಪುರ:ತಾಲೂಕಿನ ಪ್ರಸಿದ್ಧ ಕನ್ಯಾನ ಗ್ರಾಮದ ಶ್ರೀಕ್ಷೇತ್ರ ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದ ಶ್ರೀನಾಗ ಸನ್ನಿಧಿಯಲ್ಲಿ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಏಪ್ರಿಲ್ 14 ರಂದು ಭಾನುವಾರ ನಡೆಯಲಿದೆ. ಶ್ರೀನಾಗ ದೇವರ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಏಪ್ರಿಲ್ 10 ರಂದು ಬುಧವಾರ ಸರ್ಪ ಸಂಸ್ಕಾರ ಕ್ರಿಯಾರಂಭ ಆರಂಭವಾಗಲಿದೆ. ಏಪ್ರಿಲ್ 10 ರ ಬುಧವಾರ ದಿಂದ ಏಪ್ರಿಲ್ 13 ರ ಶನಿವಾರದ ವರೆಗೆ ಶಾಖ ಋಕ್ಸಂಹಿತಾ ಯಾಗವು ನಾಗ ಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ಜರುಗಲಿದೆ. ಏಪ್ರಿಲ್ 13 ರ ಶನಿವಾರ ದಂದು ಸರ್ಪ ಸಂಸ್ಕಾರ, ಪಂಚಗವ್ಯ ಆಯುತ ಸಂಖ್ಯಾ ತಿಲಾಹೋಮ, ದಶದಾನ, ಗೋದಾನ, ವಟು ಬ್ರಾಹ್ಮಣ ಆರಾಧನೆ ಕಲಶಾಭಿಷೇಕ, ಮಹಾ ಪೂಜೆ ಹಾಗೂ ಅದೆ ದಿನ ರಾತ್ರಿ ಮಂಡಲ ಮಂಟಪದಲ್ಲಿ ವಾಸ್ತು ಪೂಜಾ, ರಾಕ್ಷೋಘ್ನ ಹೋಮ, ದಿಗ್ಬಲಿ, ಶ್ರೀ ನಾಗ ದೇವರ ಸನ್ನಿಧಿಯಲ್ಲಿ ಆಶ್ಲೇಷ ಬಲಿ, ಉದ್ಯಾಪನಾ ಹೋಮ, ಶಾಖಲ ಋಕ್ಸಂಹಿತಾ ಯಾಗದ ಪೂರ್ಣಾಹುತಿಯು ನೆರವೇರಲಿದೆ.

ಶ್ರೀಕ್ಷೇತ್ರ ಕೂಡ್ಲು ಬಾಡಬೆಟ್ಟು ಶ್ರೀ ಶನೀಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನದಲ್ಲಿರುವ ಶ್ರೀನಾಗ ದೇವರ ಸನ್ನಿಧಾನಲ್ಲಿ ಏಪ್ರಿಲ್ 14 ರಂದು ಅಷ್ಟಪವಿತ್ರ ನಾಗ ಮಂಡಲೋತ್ಸವ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 07ಕ್ಕೆ ಫಲ ಸಮರ್ಪಣೆ ಆರಂಭಗೊಂಡು ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಬೆಳಿಗ್ಗೆ 10.30 ಕ್ಕೆ ನಾಗ ದರ್ಶನ, ತೀರ್ಥ ಪ್ರಸಾದ ವಿತರಣೆ. ಮಧ್ಯಾಹ್ನ 12 ರಿಂದ ಮಹಾ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ 07.ಕ್ಕೆ ಹಾಲಿಟ್ಟು ಸೇವೆ, ದೇವರ ದರ್ಶನ, ರಾತ್ರಿ 09 ರಿಂದ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ನಾನಾ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಳ್ಳಲಿದೆ. ಪ್ರಧಾನ ಪುರೋಹಿತರಾದ ತಂತ್ರಿಗಳು ಬ್ರಹ್ಮನಜೆಡ್ಡು ನೇರಳಕಟ್ಟೆ ಗುರುರಾಜ ಸೋಮಯಾಜಿ ಅವರ ನೇತೃತ್ವದಲ್ಲಿ ಜರುಗಲಿದೆ. ಸಂಜೆ 05 ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು,ಶ್ರೀ ಬಾರ್ಕೂರು ವಿದ್ಯಾವಾಚಸ್ಪತಿ ಡಾ.ವಿಶ್ವ ಸಂತೋಷ ಭಾರತಿ ಶ್ರೀಪಾದರು ಬಾರ್ಕೂರು ಮಹಾಸಂಸ್ಥಾನ ಆಶೀರ್ವಾಚನ ನಿಡಲಿದ್ದಾರೆ. ಮಧ್ಯಾಹ್ನ 11.30 ರಿಂದ 05.30 ರ ತನಕ ಸಾಂಸ್ಕ್ರತಿಕ ಕಾರ್ಯಕ್ರಮ ಹಾಗೂ ತೆಂಕು ಹಾಗೂ ಬಡಗು ತಿಟ್ಟಿನ ಸಮ್ಮೀಲನದೊಂದಿಗೆ ಗಾನ ವೈಭವ,ನೃತ್ಯ ರೂಪಕ ನಡೆಯಲಿದೆ.

ಏಪ್ರಿಲ್ 10 ರಂದು ಹೊರೆ ಕಾಣಿಕೆ ಸಮರ್ಪಣೆ:ಶ್ರೀಕ್ಷೇತ್ರದಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಅಂಗವಾಗಿ ಏ.10 ರಂದು ಬುಧವಾರ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ಜರುಗಲಿದೆ.ಶ್ರೀ ದೇವರ ಕಾರ್ಯಕ್ರಮಕ್ಕೆ ಭಕ್ತಾದಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊರೆ ಕಾಣಿಕೆಯನ್ನು ಸಲ್ಲಿಸಬೇಕೆಂದು ಸಮಿತಿ ಅವರು ವಿನಂತಿಸಿಕೊಂಡಿದ್ದಾರೆ. ನಾಗಮಂಡಲೋತ್ಸವ ಸೇವೆಯಲ್ಲಿ ಭಾಗವಹಿಸಲು ಸಾರ್ವಜನಿಕರ ಅನುಕೂಲಕ್ಕಾಗಿ ಬೈಂದೂರು ಹಾಗೂ ಕುಂದಾಪುರ ಭಾಗದ ಆಯಾ ಊರಿನಿಂದ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಜಯರಾಮ ಸ್ವಾಮಿ, ಆಡಳಿತ ಧರ್ಮದರ್ಶಿಗಳು ಶ್ರೀಕ್ಷೇತ್ರ ಕೂಡ್ಲು,ಬಾಡಬೆಟ್ಟು ಅವರು ಮಾತನಾಡಿ, ಶ್ರೀಕ್ಷೇತ್ರದಲ್ಲಿ ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಬೇಕು. ಶ್ರೀ ನಾಗ ದೇವರ ಸೇವೆ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular