Thursday, April 24, 2025
Homeಪುತ್ತೂರುಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಶ್ವತ್ಥ ಪೂಜಾ ಕಾರ್ಯ

ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅಶ್ವತ್ಥ ಪೂಜಾ ಕಾರ್ಯ

ದಿನಾಂಕ 21-03-2025ನೇ ಶುಕ್ರವಾರ ಪೂರ್ವಾಹ್ನ ಗಂಟೆ 8.00ರಿಂದ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕರಾದ ಶ್ರೀ ಈಶ್ವರ ಚಂದ್ರ ಭಟ್‌ರವರ ಮಾರ್ಗದರ್ಶನದಂತೆ ಜರಗುವ ಅಶ್ವತ್ಥ ಪೂಜಾ ಕಾರ್ಯಗಳಿಗೆ ಸಹೃದಯ ಭಕ್ತಾದಿಗಳು ಆಗಮಿಸಿ, ಶ್ರೀ ದೇವರ ಪುಣ್ಯ ಪ್ರಸಾದವನ್ನು ಸ್ವೀಕರಿಸಬೇಕಾಗಿ ವಿನಂತಿಸಲಾಗಿದೆ.

ಕಾರ್ಯಕ್ರಮಗಳು ದಿನಾಂಕ: 21-03-2025 ಶುಕ್ರವಾರ ಪೂರ್ವಾಹ್ನ ಗಂಟೆ 8.00ರಿಂದ ಅಭಿಷೇಕ,ಗಣಹೋಮ, ಅಶ್ವತ್ಥ ಪೂಜೆ. ಪೂರ್ವಾಹ್ನ ಗಂಟೆ 9.00ರಿಂದ ಭಜನಾ ಕಾರ್ಯಕ್ರಮ. ಶ್ರೀ ಲಕ್ಷ್ಮೀಪ್ರಿಯ ಭಜನಾ ಮಂಡಳಿ ಬೆಳಂದೂರು ವಲಯ ಇವರಿಂದ ಪೂರ್ವಾಹ್ನ ಗಂಟೆ 11.30ರಿಂದ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ ಗಂಟೆ 5.30ರಿಂದ : ದುರ್ಗಾಪೂಜೆ ಮತ್ತು ದೀಪಾರಾಧನೆ. ಸಂಜೆ ಗಂಟೆ 6.00ರಿಂದ 7.00 ಗಂಟೆಯವರೆಗೆ : ಭಜನಾ ಕಾರ್ಯಕ್ರಮ. ಶ್ರೀ ಹರಿಭಜನಾ ಮಂಡಳಿ ದೇವಸ್ಯ, ಸವಣೂರು ಇವರಿಂದ ರಾತ್ರಿ ಗಂಟೆ 7.00ರಿಂದ 8.00ಗಂಟೆಯವರೆಗೆ : ಭಜನಾ ಕಾರ್ಯಕ್ರಮ ಶ್ರೀ ವಿಶ್ವೇಶ್ವರ ಭಜನಾ ಮಂಡಳಿ ನೆಟ್ಟಣ ಇವರಿಂದ ರಾತ್ರಿ ಗಂಟೆ 9.30ರಿಂದ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ ಬಪ್ಪನಾಡು ಇವರಿಂದ ರಾಷ್ಟ್ರ-ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನೊಳಗೊಂಡ ಹಲವಾರು ವರ್ಷಗಳ ಹಿಂದೆ ದಾಖಲೆ ಪ್ರದರ್ಶನಗೊಂಡ ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಬಂಟನ ಬಲಿ ಸುತ್ತು ಹಾಸ್ಯ ಪ್ರದಾನ ಯಕ್ಷಗಾನ ಬಯಲಾಟ ಪ್ರರ್ದಶನ ನಡೆಯಲಿದೆ.

RELATED ARTICLES
- Advertisment -
Google search engine

Most Popular