ಭಾರತ್ ಸ್ಕೌಟ್ಸ್ ಗೈಡ ಜಿಲ್ಲಾ ಸಂಸ್ಥೆ ಉಡುಪಿ.ಇದರ ಗೈಡ್ ಕಮೀಷನರ್ ಹಾಗೂ ಕಾರ್ಕಳ.ಸ್ಕೌಟ್ಸ್. ಗೈಡ್ಸ್. ಘಟಕದ ಉಪಾಧ್ಯಕ್ಷೆ ಶ್ರೀಮತಿ ಜ್ಯೋತಿ ಜೆ ಪೈಯವರಿಗೆ ಏಷ್ಯಾ ಫೆಸಿಫಿಕ್ ವರ್ಲ್ ಲೀಡರ್ ಶಿಫ್ ಅವಾರ್ಡ್ ಗೌರವ ಲಭಿಸಿದೆ.
ಇವರು ಉಡುಪಿ ಜಿಲ್ಲೆಯಲ್ಲಿ ಗೈಡ್ಸ್ ಸಂಘಟನೆ ಗೈಡ್ಸ್ ವಿದ್ಯಾರ್ಥಿಗಳ ಅಪಾರ ಸಂಖ್ಯೆಯ ಸೇರ್ಪಡೆ ಹಾಗೂ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯಲ್ಲಿ ಕಳೆದ 25 ವರ್ಷಗಳಿಂದ ನಿರಂತರ ವಾಗಿ ತೊಡಗಿಸಿಕೊಂಡು ತನ್ನ ಹುಟ್ಟೂರು ಕಾರ್ಕಳದಲ್ಲಿ ಮತ್ತು ಇಡೀ ಉಡುಪಿ ಜಿಲ್ಲೆಯಲ್ಲಿ ಓರ್ವ ದಕ್ಷ ಗೈಡ್ಸ್ ಕಮೀಷನರ್ ಆಗಿಸೇವೆ ಸಲ್ಲಿಸಿ ಉತ್ತಮ ಜಿಲ್ಲಾ ಗೈಡ್ ಕಮೀಷನರ್ ಎಂದು ಗುರುತಿಸಿ ವರ್ಲ್ಡ್ ಸ್ಕೌಟ್ಸ್. ಗೈಡ್ಸ್ ಕೊಡ ಮಾಡುವ ಪ್ರಶಸ್ತಿಯನ್ನು ವರ್ಲ್ಡ್ ಸ್ಕೌಟ್ಸ್ ಗೈಡ್ಸ್ ಚೇರ್ ಮೆನ್ ಚೆಂಪಕ್ ಎಮಿಲಿನ್ ಫಹಮಿನ್ ಹಾಗೂ ವರ್ಲ್ಡ್ ಎಸೋಸಿಯೆಶನ್ ಆಫ್ ಗರ್ಲ್ ಗೈಡ್ಸ್ ಎಂಡ್ ಗರ್ಲ್ ಸ್ಕೌಟ್ಸ್ ನ ಸಿ.ಇ.ಒ.ಅನ್ನಾ ಸೆಗಲ್ ರವರು ಕೇಂದ್ರ ಸಂಸ್ಥೆ ದೆಹಲಿಯಲ್ಲಿ ಪ್ರದಾನ ಮಾಡಿದ್ದರು. ಹಾಗೆಯೇ ಇದೀಗ ಕಾರ್ಕಳದ ಎಸ್.ವಿ.ಟಿ ವಿದ್ಯಾಸಂಸ್ಥೆಯಲ್ಲಿ ನಡೆದ ಉಡುಪಿ ಜಿಲ್ಲಾ ಸ್ಕೌಟ್ಸ್. ಗೈಡ್ಸ್ ಮೇಳದಲ್ಲಿ ಭಾರತ್ ಸ್ಕೌಟ್ಸ್. ಮತ್ತು ಗೈಡ್ಸ್. ರಾಜ್ಯ ಸಂಸ್ಥೆ ಕರ್ನಾಟಕ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ರವರು ಇದನ್ನು ಹಸ್ತಾಂತರ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸ್ಕೌಟ್ಸ್ ಗೈಡ್ಸ್ ಮುಖ್ಯ. ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಕಳ ಸ್ಥಳೀಯ ಸಂಸ್ಥೆ ಅಧ್ಯಕ್ಷ ಎಂ ಕೆ ವಿಜಯ ಕುಮಾರ್ ಮತ್ತಿತರರ ಗಣ್ಯ ಮಹನೀಯರು ಉಪಸ್ಥಿತರಿದ್ದು ಶುಭಹಾರೈಸಿದರು. ಇದು ಉಡುಪಿ ಜಿಲ್ಲೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸಂದ ಮೊದಲ ಗೌರವವಾಗಿದೆ.