ಮಂಗಳೂರು: ಅಸೋಸಿಯೇಶನ್ ಆಫ್ ಕನ್ಸ್ ಲ್ಟಟೆಂಟ್ ಸಿವಿಲ್ ಇಂಜಿನಿರ್ಸ್ (ಇಂಡಿಯಾ)
ಮಂಗಳೂರು ಶಾಖೆಯ ವಿಶೇಷ ಸಭೆ “ಮಿಲಾವೋ ಹಾತ್ ಬಾಬು ಕೇ ಸಾತ್” ಕಾರ್ಯಕ್ರಮ ನಗರದ
ಹೋಟೇಲ್ ಒಶಿಯನ್ ಪಾರ್ಲ್ ಸಭಾಂಗಣದಲ್ಲಿ ಮಂಗಳವಾರ ಜರಗಿತು.
ಈ ವಿಶೇಷ ಸಮಾರಂಭದ ಅಧ್ಯಕ್ಷತೆಯನ್ನು ಅಸೋಸಿಯೇಶನ್ ಆಫ್ ಕನ್ಸ್ ಲ್ಟಟೆಂಟ್ ಸಿವಿಲ್
ಇಂಜಿನಿಯರ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಲ್ಬಾವಿಯವರು ವಹಿಸಿದ್ದರು. ಸಮಾರಂಭದಲ್ಲಿ ಸಂಸ್ಥೆಯ ಸಲಹೆಗಾರ ಹಾಗು ಎನ್.ಐ.ಟಿ.ಕೆ. ಕಾಲೇಜಿನ ಪ್ರಾಂಶುಪಾಲರಾದ ಪ್ರೋ| ಡಾ| ಕೆ.ಎಸ್. ಬಾಬು ನಾರಾಯಣ್ ರವರು ವೃತ್ತಿ ಸೇವೆಯಲ್ಲಿ ನಿವೃತ್ತಿ ಹೊಂದಿದನ್ನು ಪರಿಗಣಿಸಿ ಅವರನ್ನು ಸನ್ಮಾನಿಸಿ ಹಾರ್ದಿಕ ವಿದಾಯ ನೀಡಲಾಯಿತು. ಸನ್ಮಾನದ ವಿಧಿ ವಿಧಾನವನ್ನು ರಾಜೇಂದ್ರ ಕಲ್ಬಾವಿಯವರು ನೆರವೇರಿಸಿದರು.
ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಪ್ರೋ| ಡಾ| ಕೆ.ಎಸ್. ಬಾಬು ನಾರಾಯಣ್ ರವರು ತಮ್ಮ ವೃತ್ತಿ
ಜೀವನದಲ್ಲಿ ಸಹಕರಿಸಿದ ಮತ್ತು ಪ್ರೋತ್ಸಾಹಿಸಿದ ಸರ್ವರನ್ನು ಸ್ಮರಿಸಿ ಕೃತಜ್ಞತೆಯನ್ನು ಸಲ್ಲಿಸಿದರು. ಈ
ಸಂದರ್ಭದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಮಲ್ಲಿಕಾ, ಸುಪುತ್ರಿ ಡಾ| ಮೇದಿನಿ ಉಪಸ್ಥಿತರಿದ್ದರು.
ಎನ್.ಐ.ಟಿ.ಕೆ. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೋ| ಡಾ| ಆರ್.ಕೆ. ಯಾಜಿಯವರು ತಮ್ಮ ಅಭಿನಂದನಾ ಭಾಷಣದಲ್ಲಿ ಡಾ| ಕೆ.ಎಸ್. ಬಾಬು ನಾರಾಯಣ್ ಅವರ ಸರಳ ಆದರ್ಶ ವ್ಯಕ್ತಿತ್ವವನ್ನು ಅವರು
ಸಲ್ಲಿಸಿದ ಸುಧೀರ್ಘ ನಿಸ್ವಾರ್ಥ ಸೇವೆ, ಶ್ರದ್ಧಾ ಸೇವಾ ಮನೋಭಾವ, ಕರ್ತವ್ಯ ನಿಷ್ಠೆ, ವಿದ್ಯಾರ್ಥಿಗಳಿಗೆ
ನೀಡಿದ ಅಮೂಲ್ಯ ಮಾರ್ಗದರ್ಶನ, ಸಾಧಿಸಿದ ಶೈಕ್ಷಣಿಕ ಸಾಧನೆಗಳನ್ನು ಪ್ರಶಂಶಿಸಿ “ನಿವೃತ್ತಿ ವೃತ್ತಿ
ಜೀವನಕ್ಕೆ ಮಾತ್ರ ಸೀಮಿತವಾಗಿರಲಿ ಪ್ರವೃತ್ತಿಯಲ್ಲಿ ಅವರ ಅಮೂಲ್ಯ ಸೇವೆ ಸಮಾಜಕ್ಕೆ ಲಭಿಸಲಿ” ಎಂದು
ನುಡಿದು ಶುಭ ಹಾರೈಸಿದರು.
ಗೌರವ ಅತಿಥಿಗಳಾಗಿ ಸೇತುವೆ ನಿರ್ಮಾತ ಗಿರೀಶ್ ಭಾರಧ್ವಾಜ್, ಪುತ್ತೂರು ನಗರ ಮೂಲದ ಮಾಸ್ಟರ್
ಪ್ಲಾನಿಂಗ್ ಸಂಸ್ಥೆಯ ಮಾಲಿಕರಾದ ಆನಂದ ಕುಮಾರ್, ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ಮಹಾ
ಪ್ರಬಂಧಕರಾದ ಅರುಣ ಪ್ರಭಾ ಭಾಗವಹಿಸಿದ್ದರು.
ಅಸೋಸಿಯೇಶನ್ ಆಫ್ ಕನ್ಸ್ ಲ್ಟಟೆಂಟ್ ಸಿವಿಲ್ ಇಂಜಿನಿರ್ಸ್ (ಇಂಡಿಯಾ) ಮಂಗಳೂರು ಶಾಖೆಯ
ಅಧ್ಯಕ್ಷ ಉಜ್ವಲ್ ಡಿ’ಸೋಜ ಸ್ವಾಗತಿಸಿದರು. ಕಾರ್ಯದರ್ಶಿ ವಿನೋದ್ ಡಿ’ಸೋಜ ವಂದಿಸಿದರು.
ವಿಜಯ ವಿಷ್ಣು ಮಯ್ಯ ಕಾರ್ಯಕ್ರಮ ನಿರೂಪಿಸಿದರು.