Saturday, April 19, 2025
Homeಮುಲ್ಕಿಮುಲ್ಕಿ | ಖ್ಯಾತ ಕ್ರಿಕೆಟಿಗ ಕೆ.ಎಲ್.‌ ರಾಹುಲ್‌, ಅಥಿಯಾ ಶೆಟ್ಟಿ ದಂಪತಿ ಬಪ್ಪನಾಡು ಕ್ಷೇತ್ರಕ್ಕೆ ಭೇಟಿ

ಮುಲ್ಕಿ | ಖ್ಯಾತ ಕ್ರಿಕೆಟಿಗ ಕೆ.ಎಲ್.‌ ರಾಹುಲ್‌, ಅಥಿಯಾ ಶೆಟ್ಟಿ ದಂಪತಿ ಬಪ್ಪನಾಡು ಕ್ಷೇತ್ರಕ್ಕೆ ಭೇಟಿ

ಮುಲ್ಕಿ: ಖ್ಯಾತ ಕ್ರಿಕೆಟಿಗ ಕೆ.ಎಲ್.‌ ರಾಹುಲ್‌ ಮತ್ತು ಅವರ ಪತ್ನಿ ಅಥಿಯಾ ಶೆಟ್ಟಿ ಭಾನುವಾರ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಿಯ ದರ್ಶನ ಪಡೆದ ಕೆ.ಎಲ್.‌ ರಾಹುಲ್‌, ಪತ್ನಿ ಅಥಿಯಾ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರದ ಅರ್ಚಕ ಗೋಪಾಲಕೃಷ್ಣ ಉಪಾಧ್ಯಾಯ ವಿಶೇಷ ಪ್ರಾರ್ಥನೆ ಸಲ್ಲಿಸಿ ಪ್ರಸಾದ ನೀಡಿದರು.
ಕೆಲ ಕಾಲ ದೇವಸ್ಥಾನದಲ್ಲಿ ರಾಹುಲ್‌ ಮತ್ತು ಅಥಿಯಾ ಸಮಯ ಕಳೆದಿದ್ದಾರೆ. ಬಪ್ಪನಾಡು ಕ್ಷೇತ್ರದ ವತಿಯಿಂದ ಕೆ.ಎಲ್. ರಾಹುಲ್ ದಂಪತಿಗೆ ಗೌರವಿಸಲಾಗಿದೆ. ಬಳಿಕ ಕೆ.ಎಲ್. ರಾಹುಲ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ನಂತರ ರಾಹುಲ್ ದಂಪತಿ ಮುಲ್ಕಿ ಸೀಮೆಯ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನಕ್ಕೆ ಹಾಗೂ ಕಕ್ವಗುತ್ತು ಮೂಲ ನಾಗನ ಕ್ಷೇತ್ರಕ್ಕೆ ಭೇಟಿ ನೀಡಿದರು. ಅಥಿಯಾ ತಂದೆ ಬಾಲಿವುಡ್‌ ನಟ ಸುನಿಲ್ ಶೆಟ್ಟಿ ಮೂಲತಃ ಮುಲ್ಕಿಯವರಾಗಿದ್ದು, ಅಳಿಯನಾದ ಬಳಿಕ ಪ್ರಥಮ ಬಾರಿಗೆ ರಾಹುಲ್ ಮುಲ್ಕಿಗೆ ಭೇಟಿ ನೀಡಿದರು.
ಸಂಜೆ ಕೆ.ಎಲ್.‌ ರಾಹುಲ್‌, ಅಥಿಯಾ ಶೆಟ್ಟಿ ದಂಪತಿ ಸಂಜೆ ವೇಳೆ ಕುತ್ತಾರು ಕೊರಗಜ್ಜ ಕೋಲದಲ್ಲಿ ಭಾಗಿಯಾಗಿ ಕೊರಗಜ್ಜನ ಆಶೀರ್ವಾದ ಪಡೆದರು.

RELATED ARTICLES
- Advertisment -
Google search engine

Most Popular