ಪೆನ್ : ತುಳುವೆರೆ ಚಾವಡಿ ಪೆಣ್ ಇದರ ವತಿಯಿಂದ “ಆಟಿಡೊಂಜಿ ದಿನ” ಕಾರ್ಯಕ್ರಮವು ಆಗಸ್ಟ್ 11 ಆದಿತ್ಯವಾರದಂದು ಅಗ್ರಿ ಸಮಾಜ್ ಹಾಲ್, ಪೆನ್ ರಾಯಿಗಡ್ , ಮಹಾರಾಷ್ಟ್ರ ಇಲ್ಲಿ ಅದ್ದೂರಿಯಾಗಿ ನಡೆಯಿತು. ಸಂಘದ ಸದಸ್ಯರಾದ ಸುಕನ್ಯಾ ಶೆಟ್ಟಿ ಹಾಗೂ ರಕ್ಷಿತಾ ಶೆಟ್ಟಿ ಪ್ರಾರ್ಥನೆ ಮಾಡಿದರು.
ತುಳುನಾಡ ತುಳುವೆರ್ ಕೂಟದ ಸಂಸ್ಥಾಪಕರಾದ ಅಶೋಕ್ ಎಲ್. ಪೂಜಾರಿ ಉಲ್ಯಗುತ್ತು ಪಂಜ ಕೊಯಿಕುಡೆ ಇವರ ಜೊತೆ ಸಂಸ್ಥೆಯ ಸದಸ್ಯರು ಎಲ್ಲಾ ಸೇರಿ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ತುಳುನಾಡ ಸಂಸ್ಕ್ರತಿಯ ಪ್ರತಿನಿಧಿಯಾಗಿ ಪ್ರತಿ ವರ್ಷ ಬರುವ ಆಟಿ ಕಳಂಜೆನ ವೇಷದಲ್ಲಿ ಸಾಕ್ಷಾತ್ ಶೆಟ್ಟಿ ಮತ್ತು ಸಮರ್ಥ್ ಅರಸ ತೆಂಬರೆ ಬಡಿಯುತ್ತಾ ಪಾರ್ದನಕ್ಕೆ ಹೆಜ್ಜೆ ಹಾಕಿದರು. ಸಾಕ್ಷಾತ್ ಶೆಟ್ಟಿ, ಸಮರ್ಥ್ ಅರಸ, ಹಾರ್ವಿ, ದಕ್ಷತಾ, ಪ್ರಣ್ವಿ ಪೂಜಾರಿ ಹಾಗೂ ಪ್ರಿಯಾನ್ ಪೂಜಾರಿ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಂಸ್ಥೆಯ ಮಹಿಳಾ ಸದಸ್ಯೆಯಾದ ಪ್ರಫುಲ್ಲ ಸಾಲಿಯಾನ್ ಇವರು ಮಕ್ಕಳಿಗೆ ಹಾಗೂ ಸದಸ್ಯರಿಗೆ ಕೆಲವು ಆಟಗಳನ್ನು ಆಡಿಸಿ ಗೆದ್ದವರಿಗೆ ಬಹುಮಾನ ನೀಡಲಾಯಿತು.
ಅತಿಥಿಗಳಾಗಿ ಆಗಮಿಸಿದ ಅಶೋಕ್ ಎಲ್. ಪೂಜಾರಿ, ನವೀನ್ ಫ್ರಾಂಕ್ ಲೋಬೊ, ಜಗನಾಥ್ ಶೆಟ್ಟಿ, ಉಮೇಶ್ ಎಸ್. ಔನ್ಧಕರ್, ಹೆಚ್. ಎ. ಸಂತೋಷ್, ಮಂಜುನಾಥ್ ಡಿ. ಗೌಡ, ರಿಚರ್ಡ್ ಲೋಬೊ, ಸುಧೀರ್ ಪಾಟೀಲ್, ಪ್ರವೀಣ್ ಶೆಟ್ಟಿ, ಜನಾರ್ಧನ್ ಪಕಳ ಇವರಿಗೆ ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.
ಜನ್ಮ ಭೂಮಿಯನ್ನು ಬಿಟ್ಟು ಜೀವನದ ಏಳಿಗೆಗಾಗಿ ಕರ್ಮಾ ಭೂಮಿಗೆ ಬಂದು ಯಾವುದೇ ಜಾತಿ, ಮತ, ಭೇದವಿಲ್ಲದೆ ಒಗ್ಗಟ್ಟಾಗಿ ಮಾಡುವಂತ ತುಳುನಾಡಿನ ಸಂಸ್ಕ್ರತಿಯನ್ನು ಸಾರುವ “ಆಟಿಡೊಂಜಿ ದಿನ” ಕಾರ್ಯಕ್ರವನ್ನು ನೋಡಿ ಬಹಳ ಸಂತೋಷವಾಯಿತು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಅಶೋಕ್ ಎಲ್. ಪೂಜಾರಿ ಹೇಳಿದರು.
ಹೀಗೆ ತುಳುನಾಡಿನ ಬೇರೆ ಬೇರೆ ಸಂಸ್ಕೃತಿಯನ್ನು ತೋರಿಸಯವ ಕಾರ್ಯಕ್ರಮವನ್ನು ಮಾಡಿ ಮಕ್ಕಳಿಗೆ ತಿಳಿಸಬೇಕು ಎಂದು ನವೀನ್ ಫ್ರಾಂಕ್ ಲೋಬೊ ಹೇಳಿದರು.
ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಮಹಿಳೆಯರು ತಯಾರು ಮಾಡಿ ತಂದ 53 ಬಗೆಯ ತುಳುನಾಡಿನ ತಿನಿಸುಗಳನ್ನು ಬಂದವರಿಗೆ ಹಂಚಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಸತೀಶ್ ಶೆಟ್ಟಿ, ಹರೀಶ್ ಶೆಟ್ಟಿ, ಬಿಜೂರಾಜ್ ಸಾಲಿಯಾನ್, ಜಗನ್ನಾಥ್ ಜಿನ್ನಪ್ಪ ಶೆಟ್ಟಿ, ಶಶಿ ಕುಮಾರ್ ಶೆಟ್ಟಿ, ಪ್ರಭಾಕರ ಪೂಜಾರಿ, ಸಂಜೀವ ಶೆಟ್ಟಿ, ರಘುನಾಥ್ ಪೂಜಾರಿ, ದಿನ್ ರಾಜ್ ಪೂಜಾರಿ, ಶಿಲ್ವರ್ ಸ್ಟಾರ್ ಡಿಸೋಜ, ನವೀನ್ ಶೆಟ್ಟಿ, ರಾಜೇಂದ್ರ ಶರ್ಮ, ಕವಿರಾಜ್ ಶೆಟ್ಟಿ, ಚಂದ್ರಹಾಸ್ ಅರಸ, ನಿಖಿಲ್ ಶೆಟ್ಟಿ, ವೀರಪ್ಪ ನೆಲ್ಲಿಗುಡ್ಡೆ, ರಾಜೇಶ್ ಪೂಜಾರಿ, ಸಾರಿಕ ಔನ್ಧಕರ್, ಅಶಿಹ ಜತ್ತನ್, ಶ್ವೇತ ಪೂಜಾರಿ, ಮಲ್ಲಿಕಾ ಪೂಜಾರಿ, ಪ್ರಮೀಳಾ ಶೆಟ್ಟಿ, ಶಕೀಲ ಶೆಟ್ಟಿ, ಅನುಪಮಾ ಅರಸ, ಗುಲಾಬಿ, ಅಮೃತ, ಶಿವರಾಜ್ ಪೂಜಾರಿ ಹಾಗೂ ಆನಂದ್ ಅಮಿನ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಡೆಸಿಕೊಟ್ಟರು. ಬಿಜೂರಾಜ್ ಕಾರ್ಯಕ್ರಮ ನಿರೂಪಣೆ ಮಾಡಿದರು.