Sunday, July 21, 2024
Homeಮಂಗಳೂರುಮುಡಿಪು | ವಿಜಯೋತ್ಸವ ಮೆರವಣಿಗೆ ಬಳಿಕ ಮುಸ್ಲಿಂ ಯುವಕರ ತಂಡದಿಂದ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ;...

ಮುಡಿಪು | ವಿಜಯೋತ್ಸವ ಮೆರವಣಿಗೆ ಬಳಿಕ ಮುಸ್ಲಿಂ ಯುವಕರ ತಂಡದಿಂದ ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ; ಮೂವರು ವಶಕ್ಕೆ

ಮುಡಿಪು: ಇಲ್ಲಿನ ಬೋಳಿಯಾರ್‌ ಬಳಿ ಭಾನುವಾರ ರಾತ್ರಿ ಬಿಜೆಪಿಯ ವಿಜಯೋತ್ಸವ ಮೆರವಣಿಗೆ ಬಳಿಕ ಪಕ್ಷದ ಇಬ್ಬರು ಕಾರ್ಯಕರ್ತರಿಗೆ ಮುಸ್ಲಿಂ ಯುವಕರ ತಂಡವೊಂದು ಚೂರಿಯಿಂದ ಇರಿದು, ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಬೊಳಿಯಾರ್‌ನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸಿತ್ತು. ಈ ವೇಳೆ ಅಲ್ಲಿನ ಮಸೀದಿ ಬಳಿ ಕಾರ್ಯಕರ್ತರು ಕೆಲಹೊತ್ತು ಘೋಷಣೆ ಕೂಗಿದ್ದರು. ನಂತರ ಬೋಳಿಯಾರ್‌ ಸಮಾಧಾನ್‌ ಬಾರ್‌ ಬಳಿ ಮುಸ್ಲಿಂ ಯುವಕರ ತಂಡವು ಬಿಜೆಪಿ ಕಾರ್ಯಕರ್ತರನ್ನು ಅಡ್ಡಗಟ್ಟಿತ್ತು. ಇಬ್ಬರಿಗೆ ಚೂರಿಯಿಂದ ಇರಿದು, ಒಬ್ಬನಿಗೆ ಹಲ್ಲೆ ನಡೆಸಿ ಪರಾರಿಯಾಗಿತ್ತು. ಇರಿತಕ್ಕೊಳಾದ ಹರೀಶ್‌ ಹಾಗೂ ನಂದ ಕುಮಾರ್‌ ಅವರನ್ನು ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಲಿಸಲಾಗಿದೆ.
ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES
- Advertisment -
Google search engine

Most Popular