ಮಂಗಳೂರು: ಯುವಕನೊಬ್ಬನಿಗೆ ಚೂರಿ ಇರಿತದ ಪ್ರಕರಣ ಇಂದು ನಗರದ ಹೊರವಲಯದ ಫರಂಗಿಪೇಟೆಯ ಕುಮ್ಡೇಲು ಎಂಬಲ್ಲಿ ನಡೆದಿದೆ. ಹಳೆ ದ್ವೇಷದಿಂದ ರೌಡಿಶೀಟರ್ ಪವನ್ ಎಂಬಾತನ ಮೇಲೆ ಚೂರಿ ಇರಿಯಲಾಗಿದೆ ಎಂದು ವರದಿಗಳು ತಿಳಿಸಿವೆ.
ಪವನ್ ಮೇಲೆ ಆತನ ಸ್ನೇಹಿತನೇ ಆದ ಮತ್ತೊಬ್ಬ ರೌಡಿಶೀಟರ್ ಚರಣ್ ಎಂಬಾತ ಚೂರಿ ಇರಿದಿದ್ದಾನೆ ಎನ್ನಲಾಗಿದೆ. ಚರಣ್ ಗಾಂಜಾ ವ್ಯಸನಿಯಾಗಿದ್ದು, ವೈಯಕ್ತಿಕ ದ್ವೇಷದಲ್ಲಿ ಚೂರಿ ಇರಿದಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಗಾಯಗೊಂಡಿರುವ ಪವನ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಟ್ವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.