ಬಂಟ್ವಾಳ : ಹಣಕಾಸಿನ ವಿಚಾರವಾಗಿ ವ್ಯಕ್ತಿಯೋರ್ವರಿಗೆ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕು ಬಡ ಕಟ್ಟೆ ಎಂಬಲ್ಲಿ ನಡೆದಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಷ್ಪರಾಜ್ ಗಾಯಗೊಂಡವರು. ಈ ಬಗ್ಗೆ ಪುಷ್ಪರಾಜ್ ಅವರ ಸ್ನೇಹಿತ ನೀಡಿರುವ ದೂರಿನ ಮೇರೆಗೆ ರವಿ ನಾವೂರು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಏ.14 ರಂದು ರಾತ್ರಿ, ಬಂಟ್ವಾಳ ತಾಲೂಕು ಬಡ ಕಟ್ಟೆ ಎಂಬಲ್ಲಿ ರವಿ ನಾವೂರು ಹಾಗೂ ಪುಷ್ಪರಾಜ್ ಎಂಬವರ ನಡುವೆ ಗಲಾಟೆ ನಡೆದು, ರವಿ ನಾವೂರು ಎಂಬಾತನು ಪುಷ್ಪರಾಜ್ ರವರಿಗೆ ಚೂರಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದು, ಹಲ್ಲೆಯಿಂದ ಗಾಯಗೊಂಡ ಪುಷ್ಪರಾಜ್ ರನ್ನು ಸ್ನೇಹಿತರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ, ಮಂಗಳೂರು ಎ.ಜೆ. ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಸದ್ರಿ ಹಲ್ಲೆಯ ಬಗ್ಗೆ ಗಾಯಾಳು ಪುಷ್ಪರಾಜ್ ಬಳಿ ವಿಚಾರಿಸಿದಾಗ, ಹಣಕಾಸಿನ ವಿಚಾರದಲ್ಲಿ ಹಲ್ಲೆ ನಡೆಸಿರುವುದಾಗಿ ತಿಳಿಸಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ: 72/2024 ಕಲಂ: 504, 506, 307 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.