Saturday, February 15, 2025
Homeಅಪರಾಧಕುಡಿದ ಮತ್ತಿನಲ್ಲಿ ಕೊಲೆ ಯತ್ನ – ಯೂಟ್ಯೂಬರ್ ಮುಹಮ್ಮದ್ ಶಾಹೀನ್ ಶಾ ಅರೆಸ್ಟ್

ಕುಡಿದ ಮತ್ತಿನಲ್ಲಿ ಕೊಲೆ ಯತ್ನ – ಯೂಟ್ಯೂಬರ್ ಮುಹಮ್ಮದ್ ಶಾಹೀನ್ ಶಾ ಅರೆಸ್ಟ್

ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಅಪಘಾತ ಮಾಡಿ ಕೊಲೆಯತ್ನ ನಡೆಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತ್ರಿಶೂರ್ ಕೇರಳ ವರ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಕಾರಿಗೆ ಡಿಕ್ಕಿ ಹೊಡೆದು ಕೊಲೆ ಮಾಡಲು ಯತ್ನಿಸಿದ ಯೂಟ್ಯೂಬರ್ ಮನವಾಲನ್ ಅಲಿಯಾಸ್ ಮುಹಮ್ಮದ್ ಶಾಹೀನ್ ಶಾ ಬಂಧಿತ ಆರೋಪಿ.

ಬೈಕ್ ನಲ್ಲಿ ತೆರಳುತ್ತಿದ್ದ ವಿದ್ಯಾರ್ಥಿಗಳ ಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಮನವಾಲನ್ ಅಲಿಯಾಸ್ ಮುಹಮ್ಮದ್ ಶಾಹೀನ್ ಶಾ ಎಂಬಾತನನ್ನು ಬಂಧಿಸಲಾಗಿದೆ. ಈತನನ್ನು ಬೆಂಗಳೂರಿನಿ0ದ ಬಂಧಿಸಲಾಗಿದೆ.

ಘಟನೆಯ ವಿವರ
19 ಏಪ್ರಿಲ್ 2024 ರಂದು ಈ ಘಟನೆ ನಡೆದಿತ್ತು. ಶಾಹೀನ್ ಹಾಗೂ ಮತ್ತು ಆತನ ಸ್ನೇಹಿತರು ಒಟ್ಟಿಗೆ ಮದ್ಯ ಸೇವಿಸಿ ಕಾರಿನಲ್ಲಿ ಬರುತ್ತಿದ್ದರು. ಇದೇ ವೇಳೆ ವಿದ್ಯಾರ್ಥಿಗಳಾದ ಗೌತಮ್ ಕೃಷ್ಣನ್ ಹಾಗೂ ಆತನ ಸ್ನೇಹಿತನೊಂದಿಗೆ ಕ್ಷುಲ್ಲಕ ಕಾರಣಕ್ಕೆ ಶಾಹೀನ್ ಮತ್ತು ಆತನ ಸ್ನೇಹಿತರು ವಾಗ್ವಾದ ನಡೆಸಿದ್ದಾರೆ.

ನಂತರ, ಮದ್ಯ ಸೇವಿಸಿದ್ದ ಶಾಹೀನ್ ಮತ್ತು ಗೆಳೆಯರು ಕಾರಿನಲ್ಲಿ ಹಿಂಬಾಲಿದ್ದಾರೆ. ಈ ವೇಳೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ್ದಾರೆ. ಅಪಘಾತದಲ್ಲಿ ಗೌತಮ್ ಕೃಷ್ಣನ್ ಹಾಗೂ ಜ್ಯೋತಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆ ಮುಹಮ್ಮದ್ ಶಾಹೀನ್ ತಲೆ ಮರೆಸಿಕೊಂಡಿದ್ದ.

ಈ ಬಗ್ಗೆ ಪೊಲೀಸ್ ಇಲಾಖೆ ಲುಕ್‌ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಶಾಹೀನ್ ಮನವಾಲನ್ ಮೀಡಿಯಾ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು, ಯೂಟ್ಯೂಬ್‌ನಲ್ಲಿ ಸುಮಾರು 15 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಕೊಲೆ ಆರೋಪಿ ಶಾಹಿನ್‌ನನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಯುತ್ತಿದೆ.

RELATED ARTICLES
- Advertisment -
Google search engine

Most Popular