Wednesday, September 11, 2024
Homeಮಂಗಳೂರುಮಂಗಳೂರು | ಎಲೆಕ್ಟ್ರಿಕ್‌ ಆಟೊರಿಕ್ಷಾಗಳಿಗೆ ಜಲ್ಲೆಯಾದ್ಯಂತ ಸಂಚರಿಸಲು ಅನುಮತಿಗೆ ವಿರೋಧ | ರಿಕ್ಷಾ ಚಾಲಕರ ಪ್ರತಿಭಟನೆ

ಮಂಗಳೂರು | ಎಲೆಕ್ಟ್ರಿಕ್‌ ಆಟೊರಿಕ್ಷಾಗಳಿಗೆ ಜಲ್ಲೆಯಾದ್ಯಂತ ಸಂಚರಿಸಲು ಅನುಮತಿಗೆ ವಿರೋಧ | ರಿಕ್ಷಾ ಚಾಲಕರ ಪ್ರತಿಭಟನೆ

ಮಂಗಳೂರು: ಎಲೆಕ್ಟ್ರಿಕಲ್‌ ಆಟೊ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಜಿಲ್ಲಾಡಳಿತ ಅನುಮತಿ ನೀಡಿರುವುದನ್ನು ವಿರೋಧಿಸಿ ಆಟೊ ರಿಕ್ಷಾ ಚಾಲಕರು ಬೃಹತ್‌ ಪ್ರತಿಭಟನೆ ನಡೆಸಿದರು. ಆಟೊ ರಿಕ್ಷಾ ಚಾಲಕರ ಮಾಲಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ನಗರದ ಅಂಬೇಡ್ಕರ್‌ ವೃತ್ತದಿಂದ ಮೆರವಣಿಗೆ ಹೊರಟು, ಕ್ಲಾಕ್‌ ಟವರ್‌ ವರೆಗೆ ಆಟೊ ಚಾಲಕರು ಮೆರವಣಿಗೆ ನಡೆಸಿದರು. ಎಲೆಕ್ಟ್ರಿಕಲ್‌ ರಿಕ್ಷಾಗಳಿಗೆ ಜಿಲ್ಲೆಯಾದ್ಯಂತ ಸಂಚರಿಸಲು ಅನುಮತಿ ನೀಡಿರುವ ಜಿಲ್ಲಾಧಿಕಾರಿಗಳ ಆದೇಶ ಏಕಪಕ್ಷೀಯವಾಗಿದೆ. ಈ ಆದೇಶ ಹಿಂಪಡೆಯಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುತ್ತದೆ ಎಂದು ಸಿಐಟಿಯು ಮುಖಂಡ ಸುನಿಲ್‌ ಕುಮಾರ್‌ ಬಜಾಲ್‌ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು, ಇಲ್ಲದಿದ್ದರೆ ಸ್ಥಳದಿಂದ ಕದಲುವುದಿಲ್ಲ ಎಂದು ಪ್ರತಿಭಟನಕಾರರು ಪಟ್ಟು ಹಿಡಿದರು. ಸಂಘಟನೆ ಪ್ರಮುಖರಾದ ಅಶೋಕ ಶೆಟ್ಟಿ, ಮುಹಮ್ಮದ್‌ ಅನ್ಸಾರ್‌, ಲೋಕೇಶ್‌ ಬಲ್ಲಾಳ್‌ಬಾಗ್‌ ಮತ್ತಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು. ಚಾಲಕರು ರಿಕ್ಷಾ ಸಂಚಾರ ಬಂದ್‌ ಮಾಡಿ ಪ್ರತಿಭಟನೆಯಲ್ಲಿ ಭಾಗವಹಿಸಿದುದರಿಂದ, ಪ್ರಯಾಣಿಕರು ಪರದಾಡುವಂತಾಯಿತು.

RELATED ARTICLES
- Advertisment -
Google search engine

Most Popular