ಪಣಂಬೂರು: ನಗರದ ರಿಕ್ಷಾ ಚಾಲಕರೊಬ್ಬರಿಗೆ ಪಣಂಬೂರಿನ ಸ್ಥಳೀಯ ರಿಕ್ಷಾ ಚಾಲಕರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಮುಹಮ್ಮದ್ ಅರಾಫತ್ ಎಂಬಾತನಿಗೆ ಹಲ್ಲೆ ನಡೆಸಲಾಗಿದೆ.
ಅರಾಫತ್ ನಗರ ವಲಯದ ರಿಕ್ಷಾ ಚಾಲಕರಾಗಿದ್ದು, ಪ್ರಯಾಣಿಕರೊಬ್ಬರನ್ನು ಪಣಂಬೂರು ಬೀಚ್ ಬಳಿ ಬಿಟ್ಟು ಬಳಿಕ ಅಲ್ಲಿನ ರಿಕ್ಷಾ ಸ್ಟಾಂಡ್ ನಲ್ಲಿ ಬಾಡಿಗೆಗಾಗಿ ಕಾಯುತ್ತಿದ್ದರು. ಈ ವೇಳೆ ಅಲ್ಲಿನ ಸ್ಥಳೀಯ ರಿಕ್ಷಾ ಚಾಲಕರು ಇದಕ್ಕೆ ಆಕ್ಷೇಪಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳೀಯ ರಿಕ್ಷಾ ಚಾಲಕರು ಅರಾಫತ್ ಮೇಲೆ ಹಲ್ಲೆ ನಡೆಸಿದ್ದಾರೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.