Wednesday, February 19, 2025
Homeಧಾರ್ಮಿಕಅವಧಾನಿ ಫ್ಯಾಮಿಲಿ ವೆಂಕಟರಮಣ ಟೆಂಪಲ್ ಟ್ರಸ್ಟ್ (ರಿ.) ನಾಯ್ಕನಕಟ್ಟೆ ಪುನಃ ಪ್ರತಿಷ್ಠಾ ಮಹೋತ್ಸವ ಸಂಭ್ರಮ

ಅವಧಾನಿ ಫ್ಯಾಮಿಲಿ ವೆಂಕಟರಮಣ ಟೆಂಪಲ್ ಟ್ರಸ್ಟ್ (ರಿ.) ನಾಯ್ಕನಕಟ್ಟೆ ಪುನಃ ಪ್ರತಿಷ್ಠಾ ಮಹೋತ್ಸವ ಸಂಭ್ರಮ

ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನ ನಾಯ್ಕನಕಟ್ಟೆ ಅವಧಾನಿ ಫ್ಯಾಮಿಲಿ ವೆಂಕಟರಮಣ ಟೆಂಪಲ್ ಟ್ರಸ್ಟ್ (ರಿ.) ನಾಯ್ಕನಕಟ್ಟೆ ಪುನಃ ಪ್ರತಿಷ್ಠಾ ಮಹೋತ್ಸವ ಸಂಭ್ರಮದಲ್ಲಿ ನಡೆಯಿತು.

ಪುನಃ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ದಿನಾಂಕ : 26-01-2025 ರವಿವಾರದಿಂದ 01-02-2025 ಶನಿವಾರದ ವರೆಗೆ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು

ದಿನಾಂಕ 30 ರಂದು ಪೂರ್ವಾಹ್ನ 5 ಗಂಟೆಯಿಂದ ದೇವತಾ ಪ್ರಾರ್ಥನೆ, ಗುರುಗಣಪತಿ ಪೂಜೆ, ನಿತ್ಯವಿಧಿ, ಆವಾಹಿತದೇವತಾ ಪೂಜನ, ಪ್ರತಿಷ್ಠಾಂಗ ತತ್ವಹವನ, ಪ್ರಧಾನ ಹವನ, ಮಹಾಪೂರ್ಣಾಹುತಿ.
ಸಾನಿಧ್ಯದಲ್ಲಿ ಸಂಪನ್ನಗೊಂಡಿತು

ಬೆಳಿಗ್ಗೆ 8ಕ್ಕೆ ಪೂರ್ಣಕುಂಭ ಸ್ವಾಗತದೊಂದಿಗೆ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀ ಶ್ರೀ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.

ಬೆಳಿಗ್ಗೆ 9.20ಕ್ಕೆ ಒದಗುವ ಕುಂಭಲಗ್ನ ಸುಮುಹೂರ್ತದಲ್ಲಿ ಶ್ರೀ ಸಂಸ್ಥಾನ ಕಾಶೀಮಠಾಧೀಶರಾದ ಶ್ರೀ ಶ್ರೀ ಶ್ರೀಮದ್ ಸಂಯಮೀಂದ್ರ ತೀರ್ಥ ಶ್ರೀಪಾದಂಗಳವರ ದಿವ್ಯ ಕರಕಮಲಗಳಿಂದ ಶ್ರೀ ದೇವರ ಪ್ರತಿಷ್ಠಾಪನಾ ಕಾರ್ಯ, ಪ್ರಸನ್ನಪೂಜೆ,ಮಂಗಲದ್ರವ್ಯ ನಿರೀಕ್ಷಣೆ, ಪಟ್ಟಕಾಣಿಕೆ, ಪ್ರಸಾದ ವಿತರಣೆ, ಶ್ರೀಗಳವರಿಗೆ ಅಗ್ರಪೂಜೆ, ಆಶೀರ್ವಚನ, ಫಲಮಂತ್ರಾಕ್ಷತೆ, ಪ್ರತಿಷ್ಠಾಂಗ ಬಲಿಪ್ರದಾನ, ಮಧ್ಯಾಹ್ನ ಮಹಾಪೂಜೆ, ಬ್ರಾಹ್ಮಣ ಪೂಜೆ, ಸಮಾರಾಧನೆ, ಋತ್ವಿಜರಿಗೆ ಸಂಭಾವನೆ, ಮಂಗಲ ಮಂತ್ರಾಕ್ಷತೆ, ಆಶೀರ್ವಾದಗ್ರಹಣ ಕಾರ್ಯಕ್ರಮ ನೆರವೇರಿತು

ಸಾಯಂಕಾಲ ಉಭಯ ದೇವರ ಪ್ರಾಕಾರೋತ್ಸವ, ಅಷ್ಟಾವಧಾನಸೇವೆ, ಅಲಂಕಾರಪೂಜೆ, ಪ್ರಸಾದವಿತರಣೆ, ಭೋಜನ, ಸಂಜೆ 6 ಗಂಟೆಯಿಂದ 8:00ವರೆಗೆ ಸಾಂಸ್ಕೃತಿಕ ವೈಭವ ಜರುಗಿತು

ದಿನಾಂಕ : 31-01-2025 ಶುಕ್ರವಾರ ಪೂರ್ವಾಹ್ನ 8.00ರಿಂದ : ದೇವತಾ ಸಾನಿಧ್ಯ ಅಭಿವೃದ್ಧಿಗಾಗಿ ವೇದಮಾತಾ ಶ್ರೀ ಗಾಯತ್ರಿ ಮಹಾಮಂತ್ರ ಹವನ, ಸಮಾರಾಧನೆ. ಸಾಯಂಕಾಲ : 5.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ. ಭಜನಾ ಸಂಕೀರ್ತನೆ, ರಾತ್ರಿ ಪೂಜೆ, ಭೋಜನ ಜರುಗಿತು.

ಇಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ, ಶ್ರೀಮನ್ಯು ಸೂಕ್ತ ಹವನ, ಪಂಚಾಮೃತಅಭಿಷೇಕ, ಶಿಯಾಳಅಭಿಷೇಕ, ಮಧ್ಯಾಹ್ನ ಪೂಜೆ, ಸಮಾರಾಧನೆ ವಿಶೇಷವಾಗಿ ಇಂದು
ಶ್ರೀಮತಿ ಪ್ರೇಮಾ ಮತ್ತು ಶ್ರೀ ರಾಜೀವ ಭಟ್ ನಂದನವನ (ವಿವಾಹ ಸುವರ್ಣ ಮಹೋತ್ಸವವನ್ನು ವಿಜೃಂಭಣೆಯಾಗಿ ಆಚರಿಸಲಾಯಿತು ಸಾಂಸ್ಕೃತಿಕ ಕಾರ್ಯಕ್ರಮ.ರಾತ್ರಿ ಪೂಜೆ, ಭೋಜನ ಸಾನಿಧ್ಯದಲ್ಲಿ ಸಂಪನ್ನಗೊಂಡಿತು.

RELATED ARTICLES
- Advertisment -
Google search engine

Most Popular