Monday, July 15, 2024
Homeಮಂಗಳೂರುಭಾರತೀಯ ವೈದ್ಯಕೀಯ ಸಂಘ ದ.ಕ.ಜಿಲ್ಲಾ ಶಾಖೆ ವೈದ್ಯರ ದಿನಾಚರಣೆ 4 ಖ್ಯಾತ ವೈದ್ಯರಿಗೆ ಪ್ರಶಸ್ತಿ ಪ್ರಧಾನ

ಭಾರತೀಯ ವೈದ್ಯಕೀಯ ಸಂಘ ದ.ಕ.ಜಿಲ್ಲಾ ಶಾಖೆ ವೈದ್ಯರ ದಿನಾಚರಣೆ 4 ಖ್ಯಾತ ವೈದ್ಯರಿಗೆ ಪ್ರಶಸ್ತಿ ಪ್ರಧಾನ

ಮಂಗಳೂರು : ವೈದ್ಯಕೀಯ ವೃತ್ತಿಒಂದುಗೌರವಾನ್ವಿತ ವೃತ್ತಿಯಾಗಿದ್ದು, ವೈದ್ಯರು ಸಮಾಜದಲ್ಲಿಉನ್ನತ ಸ್ಥಾನವನ್ನು ಪಡೆದಿದ್ದಾರೆ. ಅದು ದೇವರ ಕೃಪೆ ಎಂದು ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿಯವರಾದ ಪ್ರೋ| ಡಾ| ಶಾಂತರಾಮ್ ಶೆಟ್ಟಿಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಭಾರತೀಯ ವೈದ್ಯಕೀಯ ಸಂಘ ದ.ಕ.ಜಿಲ್ಲಾ ಶಾಖೆಯಆಶ್ರಯದಲ್ಲಿ ತಾ.07/07/2024 ರಂದು ಸಂಸ್ಥೆಯ ಸಭಾಂಗಣದಲ್ಲಿ ಜರಗಿದ ವೈದ್ಯರ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.ವೈದ್ಯಕೀಯ ವೃತ್ತಿ ಮತ್ತುಸೇವೆಯ ವಿರುದ್ಧ ಸರಕಾರವು ಒಂದು ವಿಶೇಷ ಕಾನೂನನ್ನು ಹೊರಡಿಸಿದೆ ಎಂದುಖೇದ ವ್ಯಕ್ತ ಪಡಿಸಿ ಅದನ್ನು ವೈದ್ಯಕೀಯ ವೃಂದದವರು ವಿರೋಧಿಸಬೇಕು ಮತ್ತು ಪ್ರತಿಭಟಿಸಬೇಕೆಂದು ಕರೆ ನೀಡಿದರು.
ಭಾರತೀಯ ವೈದ್ಯಕೀಯದ.ಕ.ಜಿಲ್ಲಾ ಶಾಖೆಯ ಅಧ್ಯಕ್ಷರಾದ ಡಾ| ರಂಜನ್‌ರವರು ತಮ್ಮಅಧ್ಯಕ್ಷೀಯ ಭಾಷಣದಲ್ಲಿ ವೈದ್ಯರ ದಿನಾಚರಣೆಯ ಉದ್ದೇಶ ಮತ್ತು ಮಹತ್ವವನ್ನು ವಿವರಿಸಿ ಸಂಸ್ಥೆಯ ಭವಿಷ್ಯದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಗರದ 4 ಖ್ಯಾತ ವೈದ್ಯರನ್ನು ಡಾ| ಎಲ್‌ಎಲ್‌ಜೋಶ್ವಾ (ವೈದ್ಯಕೀಯ
ಶಾಸ್ತçತಜ್ಞ), ಡಾ| ಜೀವರಾಜ್ ಸೊರಕೆ (ಶಸ್ತ್ರ ಚಿಕಿತ್ಸಕರು), ಡಾ| ಇಂದುಮತಿ ಮಲ್ಯ (ಸ್ತ್ರಿ ಆರೋಗ್ಯ ಮತ್ತು ಪ್ರಸೂತಿ ತಜ್ಞರು) ಡಾ| ಸುಬೀರ್‌ರೆಬೆಲ್ಲೋ (ಕುಟುಂಬ ವೈದ್ಯರು) ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಸುದೀರ್ಘ ಅನುಪಮ ಸೇವೆ ಮತ್ತು ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣ ಅಂಗವಾಗಿ ನಗರದ ಯೆನಪೋಯ ಆಸ್ಪತ್ರೆಯ ಖ್ಯಾತ ಕೀಲು ಮೂಳೆ ಶಾಸ್ತ್ರ ವಿಭಾಗದತಜ್ಞ ಡಾ| ದೀಪಕ್‌ರೈಯವರು ಮಂಡಿ ಬದಲಾವಣೆಗೆ ಆಧುನಿಕ ರೊಬೋಟಿಕ್ ಶಸ್ತ್ರ ಚಿಕಿತ್ಸೆ ಬಗ್ಗೆ ದೃಶ್ಯ ಮತ್ತು ಶ್ರಾವ್ಯ ಮಾಧ್ಯಮದ ಮೂಲಕ ಅತಿಥಿ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಸಂಸ್ಥೆಯ ಚುನಾಯಿತ ಅಧ್ಯಕ್ಷೆ ಡಾ| ಜೆಸ್ಸಿ ಮರಿಯಾ ಡಿ’ಸೋಜ, ಕೋಶಾಧಿಕಾರಿ ಡಾ| ಪ್ರಶಾಂತ್ ಸಂಸ್ಥೆಯ ಪ್ರತಿಷ್ಠಾನದ ಅಧ್ಯಕ್ಷ ಡಾ| ದಿವಾಕರ್‌ರಾವ್, ಕೋಶಾಧಿಕಾರಿಕೆ.ಆರ್.ಕಾಮತ್ ಉಪಸ್ಥಿತರಿದ್ದರು.ಕಾರ್ಯದರ್ಶಿ ಡಾ| ಅವಿನ್ ಆಳ್ವ ವಂದಿಸಿದರು. ಅಕ್ಷತಾ ಸುಧೀರ್‌ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

RELATED ARTICLES
- Advertisment -
Google search engine

Most Popular