Sunday, January 19, 2025
Homeಕಾಸರಗೋಡುಪ್ರಶಸ್ತಿ, ಪುರಸ್ಕಾರ, ಸಾಮಾಜಿಕ ಮುಂದಾಳುಗಳಿಗೆ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ: ಆರ್. ಸುಬ್ಬಯ್ಯಕಟ್ಟೆ

ಪ್ರಶಸ್ತಿ, ಪುರಸ್ಕಾರ, ಸಾಮಾಜಿಕ ಮುಂದಾಳುಗಳಿಗೆ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ: ಆರ್. ಸುಬ್ಬಯ್ಯಕಟ್ಟೆ

ಕುಂಬಳೆ: ಪ್ರಶಸ್ತಿ, ಪುರಸ್ಕಾರಗಳು, ಸಾಮಾಜಿಕ ಮುಂದಾಳುಗಳಿಗೆ, ಸ್ಫೂರ್ತಿ ಹಾಗೂ ಹೆಚ್ಚಿನ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆಯಾಗುತ್ತದೆ ಎಂದು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಎ. ಆರ್. ಸುಬ್ಬಯ್ಯಕಟ್ಟೆ ಹೇಳಿದ್ದಾರೆ.

ಇವರು ಉಪ್ಪಳದ “ಯಾಮಿನಿ ಎಸ್ಟೇಟ್”ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಂಗಳೂರಿನ ಕಥಾಬಿಂದು ಪ್ರಕಾಶನ, ಮತ್ತು ಶ್ರೀ ಕೃಷ್ಣ ಮಠ ಉಡುಪಿಯ ಸಹಯೋಗದಲ್ಲಿ ಏರ್ಪಡಿಸಿದ “ಗೀತಾ ಗಾಯನೋತ್ಸವ” 50 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉಪ್ಪಳದ ಸಮಾಜ ಸೇವಕ, ಉದ್ಯಮಿ ಶ್ರೀ ಶ್ರೀಧರ್ ಶೆಟ್ಟಿ ಮುಟ್ಟಮ್ ಇವರಿಗೆ “ಸಮಾಜ ಸೇವಾ ರತ್ನ ಪ್ರಶಸ್ತಿ 2024.ಕ್ಕೆ ಆಯ್ಕೆ ಮಾಡಿದ್ದರು. ಕಾರಣಾಂತರಗಳಿಂದ ಭಾಗವಹಿಸಲಾಗದುದರಿಂದ, ಇವರ ಸ್ವಗ್ರಿಹ “ಯಾಮಿನಿ ಎಸ್ಟೇಟ್ “ನಲ್ಲಿ ಇಂದು ಶ್ರೀಧರ್ ಶೆಟ್ಟಿ ಮುಟ್ಟಮ್, ಕಸ್ತೂರಿ ಶ್ರೀಧರ್ ಶೆಟ್ಟಿ ಯವರಿಗೆ ಸರಳ ಸಮಾರಂಭದಲ್ಲಿ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಧಾರ್ಮಿಕ, ಸಾಮಾಜಿಕ ಮುಂದಾಳು ಅರಿಬೈಲ್ ಗೋಪಾಲ್ ಶೆಟ್ಟಿ ವಹಿಸಿದ್ದರು. ಪ್ರೊ. ಎ. ಶ್ರೀನಾಥ್ ಪ್ರಶಸ್ತಿ ಪುರಸ್ಕೃತರ ವ್ಯಕ್ತಿ ಪರಿಚಯವನ್ನು ನೀಡಿ ಕಾರ್ಯಕ್ರಮ ನಿರ್ವಹಿಸಿದರು. ಕಥಾಬಿಂದು ಪ್ರಕಾಶನದ ನಿರ್ದೇಶಕರೂ, ಕಾಸರಗೋಡು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರೂ ಆದ ಡಾ. ವಾಮನ್ ರಾವ್ ಬೇಕಲ್ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಉಮೇಶ್ ಶೆಟ್ಟಿ, ಉದ್ಯಮಿ ಹಂಸ ಪೂನೆ, ಚಂದ್ರಹಾಸ ನಾಯ್ಕ್, ರಂಜಿನಿ ನಾಯ್ಕ್, ಕನ್ನಡ ಭವನ ಪ್ರಕಾಶನದ ಪ್ರಕಾಶಕಿಯಾದ ಸಂದ್ಯಾ ರಾಣಿ ಟೀಚರ್, ಮುಂತಾದವರಿದ್ದರು. ಯಾಮಿನಿ ಎಸ್ಟೇಟ್ ನ ಶ್ರೀಮತಿ ಕಸ್ತೂರಿ ಶೆಟ್ಟಿ ಸ್ವಾಗತಿಸಿ, ಪ್ರಶಸ್ತಿ ಸ್ವೀಕರಿಸಿದ ಶ್ರೀಧರ್ ಶೆಟ್ಟಿ ಮುಟ್ಟಂ ವಂದಿಸಿದರು.

RELATED ARTICLES
- Advertisment -
Google search engine

Most Popular