ಕುಂದಾಪುರ: ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜರವರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಕಲ್ಪವೃಕ್ಷ ಸೇವೆ ಉಸಿರು ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ,ಅಶಕ್ತರಿಗೆ ಧನಸಹಾಯ ವಿತರಣೆ ಕಾರ್ಯಕ್ರಮ ಅನುಗ್ರಹ ಮಾರಣಕಟ್ಟೆಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರಾದ ಎಂ.ಕೃಷ್ಣ ಮೂರ್ತಿ ಮಂಜರು ಮಾತನಾಡಿ, ದುಡಿಮೆ ಒಂದಂಶ ಹಣವನ್ನು ಸಮಾಜಕ್ಕೆ ಮೀಸಲು ಇಡುವುದರಿಂದ ಅಶಕ್ತರ ಬಾಳಿಗೆ ನೆರವಾಗುವುದರ ಜೊತೆಗೆ ಸಶಕ್ತವಾದ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕಾರ ನೀಡಿದಂತೆ ಆಗುತ್ತದೆ. ದೇವರನ್ನು ಭಜಿಸಿದಷ್ಟೆ ಪುಣ್ಯದ ಫಲ ಸಮಾಜ ಸೇವೆಯಿಂದಲೂ ನಮಗೆ ದೊರಕುತ್ತದೆ ಎಂದು ಹೇಳಿದರು. ಶೈಕ್ಷಣಿ, ಸಾಮಾಜಿಕ, ಧಾರ್ಮಿಕ, ವೈವಾಹಿಕ ಕಾರ್ಯಗಳಿಗೆ ಟ್ರಸ್ಟ್ ಮೂಲಕ ನೆರವನ್ನು ನೀಡಲಾಗುತ್ತಿದ್ದು. ಟ್ರಸ್ಟ್ ಮೂಲಕ ಮಾಡುತ್ತಿರುವ ಸೇವಾ ಕಾರ್ಯ ಮುಂದುವರಿಯಬೇಕು ಎನ್ನುವ ದೃಷ್ಟಿಯಿಂದ, ಶಾಶ್ವತವಾಗಿ ಟ್ರಸ್ಟ್‍ನ್ನು ಉಳಿಸಿಕೊಳ್ಳಲು ಕಟ್ಟಡ ನಿರ್ಮಾಣ ಮಾಡಬೇಕ್ಕೆನ್ನುವ ಆಲೋಚನೆಯನ್ನು ಮಾಡಲಾಗಿದೆ. ನನ್ನ ಮೊದಲ ಗುರಿ ಶಿಕ್ಷಣ ಕ್ಷೇತ್ರವಾಗಿದ್ದು ವಿದ್ಯೆ ಎನ್ನುವುದು ಎಲ್ಲರಿಗೂ ಸುಲಭದಲ್ಲಿ ದೊರಕುವಂತೆ ಆಗಬೇಕೆಂದರು.
ಮಾರಣಕಟ್ಟೆ ಸುಬ್ರಹ್ಮಣ್ಯ ಮಂಜ ಚಾರಿಟೇಬಲ್ ಟ್ರಸ್ಟ್ ಗೌರವಾಧ್ಯಕ್ಷರಾದ ಶ್ರೀಧರ ಮಂಜರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ರೀತಿ ಪತ್ರಿಫಲಾಕ್ಷೆಯನ್ನು ಬಯಸದೆ ಕೇವಲ ಸೇವಾ ಮನೋಭಾವದಿಂ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಕ್ಷೇತ್ರ ಆದಿ ದೇವನಾದ ಬ್ರಹ್ಮಲಿಂಗೇಶ್ವರ ದೇವರ ಕೃಪೆಯಿಂದಲೆ ಎಲ್ಲಾ ಕಾರ್ಯವೂ ನಡೆದುಕೊಂಡು ಸಾಗುತ್ತಿದೆ ಹೊರತು ನಮ್ಮದು ಏನು ಇಲ್ಲಾ ಎಂದು ಹೇಳಿದರು.
ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ ಸಿ.ಕುಂದರ್ ಮಾತನಾಡಿ, ತಾನು ಮಾಡಿದ ಸಂಪಾದನೆಯನ್ನು ಯಾವ ರೀತಿ ವಿನಿಯೋಗ ಮಾಡಬೇಕೆಂದು ಅರಿತು ಕೊಂಡವರು ಮಾತ್ರ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಯಾಗಿ ನಿಲ್ಲುತ್ತಾರೆ ಆ ನಿಟ್ಟಿನಲ್ಲಿ ಮಾರಣಕಟ್ಟೆ ಕೃಷ್ಣ ಮೂರ್ತಿ ಮಂಜರು ಎಲ್ಲರಿಗೂ ಮಾದರಿಯಾಗಿದ್ದಾರೆ. ಜಗತ್ತಿನಲ್ಲಿ ದಾನವು ಶ್ರೇಷ್ಠವಾದ ಸ್ಥಾನವನ್ನು ಪಡೆದುಕೊಂಡಿದೆ. ಅದು ನಿಜವಾದ ವ್ಯಕ್ತಿಗೆ ತಲುಪುವಂತೆ ಇರಬೇಕು ಎಂದರು.
ಶ್ರೀಮಹಾಲಿಂಗೇಶ್ವರ ದೇವಸ್ಥಾನ ಇಡೂರು ಅರ್ಚಕರಾದ ವೇದ.ಮೂರ್ತಿ,ಸೀತಾರಾಮ ಅಡಿಗ ಅವರಿಗೆ ವೈದಿಕ ರತ್ನ ಪ್ರಶಸ್ತಿಯನ್ನು, ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯ ಬೆಂಗಳೂರು ಅವರಿಗೆ ಅಮೂಲ್ಯ ರತ್ನ ಪ್ರಶಸ್ತಿ, ಸಾರ್ವಜನಿಕ ಆಸ್ಪತ್ರೆ ಕುಂದಾಪುರ ವೈದ್ಯಾಧಿಕಾರಿ ಡಾ.ನಾಗೇಶ್ ಅವರಿಗೆ ಸೇವಾರತ್ನ ಪ್ರಶಸ್ತಿಯನ್ನು ಹಾಗೂ ಮಕ್ಕಳ ಮೇಳ ಸಾಲಿಗ್ರಾಮ ಸಂಚಾಲಕರಾದ ರಾಷ್ಟ್ರಪ್ರಶಸ್ತಿ ವಿಜೇತರಾದ ಎಚ್.ಶ್ರೀಧರ ಹಂದೆ ಕೋಟ ಅವರಿಗೆ ಕಲಾರತ್ನ ಪ್ರಶಸ್ತಿ ಮತ್ತು ಡಾ.ವೆಂಕಟರಮಣ ಭಟ್ ನೆಂಪು ಅವರಿಗೆ ವಿಶೇಷ ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಕಲ್ಪವೃಕ್ಷ ಸೇವೆಯೇ ಉಸಿರು ಯೋಜನೆಯಡಿ ಸುಮಾರು 25 ಜನರಿಗೆ ಶೈಕ್ಷಣಿಕ ನೆರವು, ವೈದ್ಯಕೀಯ ನೆರವು ವಿತರಣೆ, ವಿವಾಹ ನೆರವು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಂದಾಪುರ ಹಿರಿಯ ವಕೀಲರಾದ ಎ.ಎಸ್.ಎನ್ ಹೆಬ್ಬಾರ್,ಅಷ್ಟಾಂಗ ಯೋಗ ಗುರುಕುಲ ಪಾಂಡೇಶ್ವರ ಸಾಸ್ತಾನ ವಿದ್ವಾನ್ ಡಾ.ವಿಜಯ ಮಂಜರು, ಕುಂದಾಪುರ ವೈದ್ಯಾಧಿಕಾರಿ ಡಾ.ನಾಗೇಶ್, ಡಾ.ವೆಂಕಟರಮಣ ಭಟ್ ನೆಂಪು,ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಸದಾಶಿವ ಶೆಟ್ಟಿ, ಶ್ರೀ ಬಹ್ಮಲಿಂಗೇಶ್ವರ ದೇವಸ್ಥಾನ ಮಾರಣಕಟ್ಟೆ ಅರ್ಚಕರಾದ ವಿಘ್ನೇಶ್ವರ ಮಂಜರು,ಟ್ರಸ್ಟ್‍ನ ಕಾರ್ಯಾಧ್ಯಕ್ಷರಾದ ನಾಗರಾಜ ಮಂಜರು,ಬಾಳೆಕುದ್ರು ರಾಮಚಂದ್ರ ಉಪಾಧ್ಯಾಯ ಬೆಂಗಳೂರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಡೂರು ಅರ್ಚಕರಾದ ವೇದ.ಮೂರ್ತಿ,ಸೀತಾರಾಮ ಅಡಿಗ,ರಾಷ್ಟ್ರಪ್ರಶಸ್ತಿ ವಿಜೇತರಾದ ಎಚ್.ಶ್ರೀಧರ ಹಂದೆ ಕೋಟ,ಅತಿಥಿ ಗಣ್ಯರು ಉಪಸ್ಥಿತರಿದ್ದರು.
ಶ್ರೀಧರ ಮಂಜರು ಸ್ವಾಗತಿಸಿದರು. ಶಶಿಧರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾಮೋದರ ಶರ್ಮಾ ನಿರೂಪಿಸಿದರು. ಮಾರಣಕಟ್ಟೆ ದಿ.ಸುಬ್ರಹ್ಮಣ್ಯ ಮಂಜರರವರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ನೃತ್ಯರುಪಕ, ಮೆಕ್ಕೆಕಟ್ಟು ಮೇಳದವರಿಂದ ಯಕ್ಷಗಾನ ಕಾರ್ಯಕ್ರಮ ಜರುಗಿತು.